ಮನೆ Uncategorized ವ್ಯಕ್ತಿತ್ವ ಮತ್ತು ಕಾರ್ಯವಿನ್ಯಾಸ

ವ್ಯಕ್ತಿತ್ವ ಮತ್ತು ಕಾರ್ಯವಿನ್ಯಾಸ

0

ಶಿಕ್ಷಕರ ತರಬೇತಿ ಕಮ್ಮಟಗಳು, ಮಕ್ಕಳ ತರಬೇತಿ ಕಮಟಗಳು, ಆಗಿಂದಾಗ್ಗೆ ಅಲ್ಲಲ್ಲಿ ನಡೆಯುತ್ತಿರುತ್ತವೆ. ಸರಕಾವೂ, ಈ ರೀತಿಯ ತರಬೇತಿ ಕಂಬಟಗಳನ್ನು ನಡೆಸುತ್ತದೆ. ಖಾಸಗಿ ಸಂಸ್ಥೆಗಳು ನಡೆಯುತ್ತವೆ.

Join Our Whatsapp Group

ಮಕ್ಕಳು ಕಲಿಯುವುದಿಲ್ಲ ಎಂಬ ತತ್ವಕ್ಕೆ ಬದ್ಧರಾಗಿ ಶಿಕ್ಷಕರೂ, ಒಳ್ಳೆಯ ಅಂಶಗಳನ್ನು ಪಡೆಯಲು ಸೂಕ್ತವಾಗುವಂತೆ ಚೆನ್ನಾಗಿ ಕಲಿಯುವುದು ಹೇಗೆ ಎಂಬುದನ್ನು ಕೇಂದ್ರೀಕರಿಸಿ ಮಕ್ಕಳೂ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಆದರೆ ಪ್ರಶ್ನೆಗಳ ಮೂಲ ನಿಲುವಿನಲ್ಲಿ ವ್ಯತ್ಯಾಸ ಇರುವುದಿಲ್ಲ. ಉದಾಹರಣೆಗೆ ಸಂವಾದ ಶೈಲಿಯಲ್ಲಿ ಪಾಠ ಬೋಧನೆಯನ್ನು ಮಾಡಿದರೆ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ ಎಂದು ಹೇಳಿದಾಗ, ಎಲ್ಲಾ ಮಕ್ಕಳು ಆ ಪದ್ಧತಿಯಲ್ಲಿ ನೂರರಷ್ಟು ಚೆನ್ನಾಗಿ ಕಲಿತೇ ಕಲಿಯುತ್ತಾರಾ? ಕಲಿಯದಿದ್ದರೆ ಏನು ಮಾಡುವುದು? ಎಂದು ಶಿಕ್ಷಕರಿಂದ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರತಿ ಪ್ರಶ್ನೆ ಬಂದು ಆಗಿಬಿಡುತ್ತದೆ.

ಆ ಪ್ರಶ್ನೆಯ ಹಿಂದೆ ಯಾವ ಮನೋಭಾವ ಇರುತ್ತದೆ ಎಂದರೆ, ಅವರಿಗೆ ಒಂದು ಕೆಲಸ ಆಗಬೇಕು. ಏನು ಮಾಡಿದರೆ ಆ ಕೆಲಸವು ಆಗುತ್ತದೋ ಅದನ್ನು ಅವರು ಮಾಡಲು ಸಿದ್ಧ. ಆದರೆ ಅದು ಶೇಕಡ 100ರಷ್ಟು ಪ್ರಶ್ನಾರ್ಥಕವಾಗಿ ಆಗುತ್ತದೆ ಎಂದು ಖಾತ್ರಿ ಕೊಡಬೇಕು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಒಂದೆಡೆ ರಸ್ತೆ ಆಗಬೇಕಾಗಿದೆ. ಏನು ಮಾಡಬೇಕು? ಜೆಸಿಬಿ ಅಥವಾ ಹಿಟಾಚಿ ತರಿಸಬೇಕು. ಅದರ ಕೈಯಲ್ಲಿ ನಿರ್ದಿಷ್ಟ ಸಮಯ ಕೆಲಸ ಮಾಡಿಸಿದರೆ ರಸ್ತೆಯಾಗುತ್ತದೆ. ಇದು ಗ್ಯಾರೆಂಟಿ.

ಇದೇ ರೀತಿಯ ಗ್ಯಾರಂಟಿಯಲ್ಲಿ ನಿರ್ದಿಷ್ಟ ರೀತಿಯಲ್ಲಿ ಪಾಠ ಮಾಡಿದರೆ ಮಕ್ಕಳು ಕಲಿತೆ ತೀರುತ್ತಾರೆ ಎಂದು ಶಿಕ್ಷಕರು ನಿರ್ದಿಷ್ಟ ರೀತಿಯಲ್ಲಿ ಅಭ್ಯಾಸ ಮಾಡಿದರೆ ಒಳ್ಳೆಯ ಅಂಕಗಳು ಬಂದೇ ತೀರುತ್ತವೆ ಎಂಬ ಗ್ಯಾರಂಟಿಯನ್ನು ಮಕ್ಕಳಿಗೆ ಕೊಡಬೇಕೆಂದು ಮಕ್ಕಳೂ ಭಾವಿಸುತ್ತಾರೆ. ಆದರೆ ಹೇಗೆ ಸಾಧ್ಯ? ಯಾವ ಪದ್ದತಿಯಲ್ಲಿ ಪಾಠ ಬೋಧನೆಯನ್ನು ಮಾಡಿದರೆ ಸಂಬಂಧಿಸಿದ ಶಿಕ್ಷಕರು ಮತ್ತು ಸಂಬಂಧಿಸಿದ ವಿದ್ಯಾರ್ಥಿಯ ವ್ಯಕ್ತಿತ್ವಗಳು ನಿರ್ದಿಷ್ಟ ವಿಚಾರದ ನಿರೂಪಣೆ ಮತ್ತು ಸ್ವೀಕರಣೆಯನ್ನು ಯಾವ ರೀತಿ ಮಾಡುತ್ತವೆ? ಶಿಕ್ಷಕರ ಪರಿಸರದ ಹಿನ್ನೆಲೆ? ಏನು ವಿದ್ಯಾರ್ಥಿಯ ಪರಿಸರದ ಹಿನ್ನೆಲೆ ಏನು ಬೋಧನೆ ಮತ್ತು ಕಲಿಕೆ ನಡೆಯುವ ಸಂದರ್ಭದಲ್ಲಿ ಅವರವರ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿ ಏನು? ಮುಂತಾದ ಅಂಶಗಳು ಬೋಧನೆ ಮತ್ತು ಕಲಿಕೆಯ ಅಂಶವನ್ನು ನಿರ್ಧರಿಸುತ್ತವೆ. ಬೆಳಿಗ್ಗೆ ಎದ್ದು ಓದಿದರೆ ಚೆನ್ನಾಗಿ ಅರ್ಥ ಆಗುತ್ತದೆ ಎಂದು ಮಕ್ಕಳಿಗೆ ಹೇಳಬಹುದು. ಆದರೆ ಅದಕ್ಕೆ ಸಾರ್ವತ್ರಿಕ ಅನ್ವಯ ಇದ್ದೇ ಇರುತ್ತದೆ ಎಂದು ಹೇಳಲು ಆಗುವುದಿಲ್ಲ.

ಕೆಲವು ವಿದ್ಯಾರ್ಥಿಗಳಿಗೆ ರಾತ್ರಿ  ಓದಿದರೇನೇ  ಸರಿಯಾಗಿ ಅರ್ಥ ಆಗಬಹುದು ಹಾಗಾದರೆ ಬೆಳಿಗ್ಗೆ ಓದಿದರೆ ಚೆನ್ನಾಗಿ ಅರ್ಥವಾಗುತ್ತದೆ ಎಂದು ಹೇಳಿದ್ದು ತಪ್ಪೇ? ತಪ್ಪಲ್ಲ. ಆದರೆ ಆ ವೈಚಾರಿಕ ವಿಧಾನವು ಕೆಲವು ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಹೊಂದಾಣಿಕೆ ಆಗುವುದಿಲ್ಲ ಅಷ್ಟೇ. ಯಾವುದೇ ವಿಚಾರ ಮತ್ತು ವಿಧಾನದ ಯಶಸ್ಸು ಅದನ್ನು ಅನುಷ್ಠಾನಕ್ಕೆ ತರುವ ಸನ್ನಿವೇಶದಲ್ಲಿರುವ ವ್ಯಕ್ತಿಗಳ ವ್ಯಕ್ತಿತ್ವದ ಕಾರ್ಯ ವಿನ್ಯಾಸದೊಂದಿಗೆ ಬದಲಾವಣೆಯಾಗುತ್ತಾ ಇರುತ್ತದೆ. ಇದನ್ನು ಅರ್ಥ ಮಾಡಿಕೊಂಡು ನಾವು ವಿಚಾರವನ್ನು ಸ್ವೀಕರಿಸಬೇಕು.