ಮನೆ Uncategorized ಸಕಲ ಚರ್ಮ ವ್ಯಾಧಿಗಳಿಗೆ ಮನೆ ಮದ್ದು: ಭಾಗ- 02

ಸಕಲ ಚರ್ಮ ವ್ಯಾಧಿಗಳಿಗೆ ಮನೆ ಮದ್ದು: ಭಾಗ- 02

0

ಚರ್ಮದ ಮುನಿತಕ್ಕೆ (Skin Allergy)

● ಅಪ್ಪಟ ಅರಿಶಿನದ ಪುಡಿಯನ್ನು ಸ್ವಲ್ಪ ಹುರಿಯಿರಿ, ಒಂದು ಟೀ ಚಮಚ ಹುರಿದ ಪುಡಿಯನ್ನು ಹಾಲಿನೊಂದಿಗೆ ಸೇರಿಸಿ ಸಕ್ಕರೆ ಬೆರೆಸಿ ಸೇವಿಸಿ.

●  ಅರಿಶಿಣದ ಗಂಧವನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ ಮೈಗೆ ಹಚ್ಚಿ ಚೆನ್ನಾಗಿ ಮಾಡಿ, ಅರ್ಧ ಗಂಟೆ ನಂತರ ಸ್ನಾನ ಮಾಡಿ.

Join Our Whatsapp Group

 ಪಾಂಡು ರೋಗಕ್ಕೆ:

●  ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಮೇಕೆಯು ನಾನಾ ಜಾತಿಯ ಗಿಡಮೂಲಿಕೆಗಳನ್ನು ತಿನ್ನುವುದರಿಂದ ಅದರ ಹಾಲಿನಲ್ಲಿ ಔಷಧಿಯ ಗುಣಗಳು ಸಮೃದ್ಧವಾಗಿವೆ. ಮೇಕೆಯ ಹಾಲಿನಿಂದ ತಯಾರಿಸಿದ ಮಜ್ಜಿಗೆಯಲ್ಲೂ ಅತ್ಯುತ್ತಮವಾದ ರೋಗ ನಿವಾರಕ ಗುಣಗಳು ಉಂಟು ಮೂಲವ್ಯಾಧಿ, ಅತಿಸಾರ, ಸಂಗ್ರಹಣಿ ಇವೇ ಮೊದಲಾದ ರೋಗಗಳಿಗೆ ಮೇಕೆ ಮಜ್ಜಿಗೆ ಸಿದ್ದೌಔಷಧಿ.

●  ಪಾಂಡು ರೋಗ ಪೀಡಿತರು ದಿನ ವಹಿ ಮಧ್ಯಾನ ಹಾಗೂ ರಾತ್ರಿ ಊಟದ ನಂತರ ಮೇಕೆಯ ಮಜ್ಜಿಗೆ ಸೇವಿಸುತ್ತಿದ್ದರೆ ರೋಗ ಗುಣಮುಖವಾಗುವ ಸಾಧ್ಯತೆಯಂಟು.

●  ಮೇಕೆಯ ಹಾಲು ಅಸ್ತಮಕ್ಕೆ ರಾಮಬಾಣ.

 ಚರ್ಮ ರೋಗಗಳಿಗೆ ಸಾಮಾನ್ಯ ಚಿಕಿತ್ಸೆ:

●  ಚರ್ಮಕ್ಕೆ ಜೇನುತುಪ್ಪ ಅಥವಾ ಅನಾನಸ್ ಹಣ್ಣಿನ ರಸ ಲೇಪಿಸುತಿದ್ದರೆ ಯಾವುದೇ ಚರ್ಮ ರೋಗದಲ್ಲಿ ಶೀಘ್ರ ಗುಣಕಂಡು ಬರುವುದು.

●  ವ್ಯಾಧಿಗ್ರಸ್ತ ಚರ್ಮವನ್ನು ಉಪ್ಪಿನ ದ್ರವಣದಿಂದ ತೊಳೆಯಿರಿ. ತೇವಾ ಆರಿದ ನಂತರ ಚರ್ಮವನ್ನು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಮೆದುವಾಗಿ ತಿಕ್ಕಿ ದೀರ್ಘಕಾಲದ ಚಿಕಿತ್ಸೆಯಿಂದ ಗುಣಕಂಡು ಬರುವುದು.

●  ಕೂಬಟಕಾಯಿಗಳನ್ನು (Soap-nut) ಜಜ್ಜಿ ಬೀಜಗಳನ್ನು ಪ್ರತ್ಯೇಕಿಸಿ ಹೊರ ಸಿಪ್ಪೆಯನ್ನು ನುಣ್ಣಗೆ ಚೂರ್ಣಿಸಿ, ಆ ಚೂರ್ಣವನ್ನು ತಕ್ಕಷ್ಟು ಜೇನುತುಪ್ಪದಲ್ಲಿ ಕಲಿಸಿ, ತೊಗರಿಕಾಳು ಗಾತ್ರದ ಮಾತ್ರೆಗಳನ್ನು ಕಟ್ಟಿ, ಬೆಳಿಗ್ಗೆ ಒಂದು ಮಾತ್ರೆಯನ್ನು ಮೊಸರಿನೊಂದಿಗೆ ಸೇವಿಸಿ, ಸಂಜೆ ಮತ್ತೊಂದು ಮಾತ್ರೆಯನ್ನು ನೀರಿನೊಂದಿಗೆ ಸೇವಿಸಿ.

●  ರೋಗ ಗ್ರಸ್ತ ಚರ್ಮದ ಮೇಲೆ ಬೇವಿನ ಎಣ್ಣೆ ಸವರಿ ಚೆನ್ನಾಗಿ ಮಾಲೀಶು ಮಾಡುವುದರಿಂದ ಕಜ್ಜಿ, ತುರಿಕೆ, ಹುಳಕಡ್ಡಿ ಇವೆ ಮೊದಲಾದ ಚರ್ಮ ರೋಗಗಳಲ್ಲಿ ಗುಣಕಂಡು ಬರುವುದು.

●  ತಾಜಾ ಬೇವಿನ ಎಲೆಗಳನ್ನು ಮೊಸರಿನೊಂದಿಗೆ ನುಣ್ಣಗೆ ಅರೆದು ರೋಗಗ್ರಸ್ತ ಚರ್ಮದ ಮೇಲೆ ಲೇಪಿಸಿ, ಅಗತ್ಯವಿದ್ದಷ್ಟು ಕಾಲ ಪ್ರತಿದಿನವೂ ಈ ಚಿಕಿತ್ಸೆ ಮಾಡುತ್ತಿದ್ದಲ್ಲಿ ಗುಣ ಕಂಡು ಬರುವುದು.

●  ಎಕ್ಸಿಮಾ(Eczema)ದಿಂದ ನರಳುತ್ತಿರುವ ರೋಗಿಗೆ ಪ್ರತಿದಿನವೂ 3-4ವರ್ತಿ ಒಂದು ಬಟ್ಟಲಿನ ಕಾಲು ಭಾಗದಷ್ಟು ಟೊಮಾಟೊ ಹಣ್ಣಿನ ರಸ ಕುಡಿಸುವುದರಿಂದ ಹೆಚ್ಚು ಪ್ರಯೋಜನ ಉಂಟು.

●  ಶ್ರೀಗಂಧದ ಎಣ್ಣೆ ಅಥವಾ ನೀರಿನಲ್ಲಿ ತೇದ ಶ್ರೀಗಂಧ ಚರ್ಮರೋಗಗಳಿಗೆ ರಾಮಬಾಣದಂತೆ ವರ್ತಿಸುವುದು.  ಆದುದರಿಂದ ವ್ಯಾಧಿಗ್ರಸ್ತ ಚರ್ಮದ ಮೇಲೆ ಗಂಧದ ಎಣ್ಣೆಯನ್ನಾಗಲಿ, ಗಂಧವನ್ನಾಗಲಿ ಹಚ್ಚುತ್ತಿದ್ದರೆ ಉಪದ್ರವ ನಿವಾರಣೆಯಾಗುವುದು.

 ಚರ್ಮದ ಮೇಲಿನ ಕಲೆಗಳ ನಿವಾರಣೆಗೆ:

●  ಗರಿಕೆ ಹುಲಿನ  ಬೇರುಗಳ ಬುಡದಲ್ಲಿರುವ ತೇವದ ಮಣ್ಣನ್ನು ಕಲೆ ಇರುವ ಭಾಗದ ಮೇಲೆ ಲೇಪಿಸಿ, 15 ರಿಂದ 20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಈ ಚಿಕಿತ್ಸೆಯನ್ನು ಅಗತ್ಯವಿದ್ದಷ್ಟು ಕಾಲ ಮುಂದುವರಿಸಿ, ಕಲೆಗಳು ನಿವಾರಣೆಯಾಗಿ ಚರ್ಮ ಹಸನಾಗುವುದು.

ರಸಿಕೆ ಇರುವ ಕಜ್ಜಿ ನಿವಾರಣೆಗೆ:

●  ಅಡಿಕೆ ಸಿಪ್ಪೆ ಸುಟ್ಟು ಇದ್ದಿಲು ತಯಾರಿಸಿ, ಇದ್ದುಲನ್ನು ಎಣ್ಣೆಯಲ್ಲಿ ರಂಗಳಿಸಿ, ಮೈಗೆ ಹಚ್ಚಿ. ಈ ಅವಧಿಯಲ್ಲಿ ಅರ್ಧ ಟೀ ಚಮಚ ಅರಿಶಿನದ ಚೂರ್ಣವನ್ನು ಎಂಟ ರಿಂದ ಹತ್ತು ಬೇವಿನ ಎಲೆಗಳೊಂದಿಗೆ ಕೂಡಿಸಿ, ನುಣ್ಣಗೆ ಅರೆದು ಗುಳಿಗೆ ತಯಾರಿಸಿ. ಈ ಗುಳಿಗೆ ಸೇವಿಸಿ ಸ್ವಲ್ಪ ನೀರು ಕುಡಿಯಿರಿ.

ಅತಿಯಾಗಿ ನವೆಯು ಉಂಟಾಗುತ್ತಿದ್ದರೆ:

● ಚರ್ಮ ದೋಷಗಳಿಂದ ನವೆ ಉಂಟಾಗುವುದು, ಆಗ ಕೆರೆಯಲು ಪ್ರಾರಂಭಿಸಿದರೆ ಚರ್ಮ ಉರಿಯ ತೊಡಗುವುದು. ಆದರೆ ದೋಷಯುಕ್ತವಾದ ಚರ್ಮದ ಮೇಲೆ ಅನಾನಸ್ ರಸ ಲೇಪಿಸುತಿದ್ದಲ್ಲಿ ಈ ಉಪದ್ರವ ಸುಲಭವಾಗಿ ನಿವಾರಣೆಯಾಗುವುದು.

ಮುಂದುವರೆಯುತ್ತದೆ…