ಮನೆ ದೇವರ ನಾಮ ಎಲ್ಲಿದೆ ಆ ಪಾದ ಎಲ್ಲಿದೆ

ಎಲ್ಲಿದೆ ಆ ಪಾದ ಎಲ್ಲಿದೆ

0

ರಾಮ… ರಾಮ… ಶ್ರೀ ರಾಮ ಜಯ ರಾಮ |

ಎಲ್ಲಿದೆ ಆ ಪಾದ ಎಲ್ಲಿದೆ ಆ ಪಾದ | 

ಕಲ್ಲಿಗೆ ಜೀವ ತುಂಬಿದ ಶ್ರೀ ಪಾದ ||

ಹನುಮನು ನಂಬಿದ ರಾಮನ ಪಾದ ||ಎಲ್ಲಿದೆ ಆ ಪಾದ|| 

ಬಾಳಲಿ ಒಮ್ಮೆ ಕಂಡರೆ ಸಾಕು

ಕಣ್ಗಳ ತುಂಬಾ ತುಂಬಲಿ ಸಾಕು||

ಕೈಗಳು ಒಮ್ಮೆ ಮುಟ್ಟಲಿ ಸಾಕು||

ಆನಂದವೇ ಎಂದಿಗೂ ಸಾಕು|| ಎಲ್ಲಿದೆ ಆ ಪಾದ||

ಕಂಬನಿ ಇಂದ ಪಾದವ ತೊಳವೆ , ಮನವನೇ ಮಲ್ಲಿಗೆ ಮಾಡಿ ಇಡುವೆ||            

ಕಣ್ಣಿನ ಬೆಳಕಲ್ಲಿ ಆರತಿ ಮಾಡಿ||

ಚರಣದಿ ಶಿರವನು ನಾನಿಡಬೇಕು|| ಎಲ್ಲಿದೆ ಆ ಪಾದ||

ಹಿಂದಿನ ಲೇಖನಇ.ವಿ ಬ್ಯಾಟರಿ ಉತ್ಪಾದನೆ: ಐಬಿಸಿ ಜತೆ ಒಡಂಬಡಿಕೆ, 8 ಸಾವಿರ ಕೋಟಿ ರೂ. ಹೂಡಿಕೆಗೆ ಅಸ್ತು
ಮುಂದಿನ ಲೇಖನಸಕಲ ಚರ್ಮ ವ್ಯಾಧಿಗಳಿಗೆ ಮನೆ ಮದ್ದು: ಭಾಗ- 02