ಮೈಸೂರು: ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ ಓರ್ವ ವ್ಯಕ್ತಿಯನ್ನು ದೇವರಾಜ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 4.50 ಲಕ್ಷ ರೂ. ಬೆಲೆ ಬಾಳುವ 9 ಕೆ.ಜಿ 350 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ದೇವರಾಜ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಿನಾಂಕ ಬುಧವಾರ ತಮ್ಮ ಪೊಲೀಸ್ ಠಾಣಾ ಸರಹದ್ದಿನ ದಾನಪ್ಪ ಸರ್ಕಲ್ ಮುಂದಿನ ಕೆ.ಆರ್.ಎಸ್ ರಸ್ತೆಯಲ್ಲಿರುವ ರೈಲ್ವೆ ಬ್ರಿಡ್ಜ್ ಮುಂಭಾಗದಲ್ಲಿ ವಾಹನ ತಪಾಸಣೆ ಮಾಡುವಾಗ ಇಬ್ಬರು ಅಸಾಮಿಗಳು ಒಂದು ಪ್ಲಾಸ್ಟಿಕ್ ಚೀಲವನ್ನು ಸ್ಕೂಟರ್ ನ ಮುಂಭಾಗದಲ್ಲಿಟ್ಟುಕೊಂಡು ಬರುತ್ತಿರುವುದನ್ನು ಕಂಡು ಪರಿಶೀಲಿಸುವ ಸಲುವಾಗಿ ನಿಲ್ಲಿಸುವಂತೆ ತಿಳಿಸಿದಾಗ ಇಬ್ಬರು ಆಸಾಮಿಗಳು ಸ್ಕೂಟರ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗುತ್ತಿದ್ದರು.
ಇದನ್ನು ಗಮನಿಸಿದ ಪೊಲೀಸರು ಓರ್ವನನ್ನು ಹಿಡಿದಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಸದರಿ ಒಬ್ಬ ಆರೋಪಿಯನ್ನು ಬಂಧಿಸಿ, ಆತನ ವಶದಲ್ಲಿದ್ದ 4.50 ಲಕ್ಷ ರೂ. ಬೆಲೆ ಬಾಳುವ 9 ಕೆ. 350 ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಸ್ಕೂಟರ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ದೇವರಾಜ ಮೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿ.ಸಿ.ಪಿ. ಮುತ್ತುರಾಜು.ಎಂ., ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ ಎಸ್.ಜಾಹ್ನವಿ ರವರ ಮಾರ್ಗದರ್ಶನದಲ್ಲಿ ದೇವರಾಜ ಉಪ ವಿಭಾಗದ ಎ.ಸಿ.ಪಿ. ಶಾಂತಮಲ್ಲಪ್ಪ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಟಿ.ಟಿ ಶಿವಕುಮಾರ್ ಪಿ.ಎಸ್.ಐ ಪ್ರಭು ಹಾಗೂ ಸಿಬ್ಬಂದಿಗಳಾದ ಮಧುಕೇಶ್, ಸೋಮಶೆಟ್ಟಿ, ಸುರೇಶ್, ವೇಣುಗೋಪಾಲ್, ನಂದೀಶ್, ಪ್ರದೀಪ್ ಮತ್ತು ಮಾರುತಿವವನ್ ರವರು ಮಾಡಿರುತ್ತಾರೆ.
ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಬಿ. ರಮೇಶ್ ರವರು ಪ್ರಶಂಸಿಸಿದ್ದಾರೆ.














