ಮನೆ ಮನರಂಜನೆ ಅ. 8ರಂದು ಒಟಿಟಿಯಲ್ಲಿ ʼಓ ಮೈ ಗಾಡ್-2‌ʼ ಸಿನಿಮಾ ರಿಲೀಸ್

ಅ. 8ರಂದು ಒಟಿಟಿಯಲ್ಲಿ ʼಓ ಮೈ ಗಾಡ್-2‌ʼ ಸಿನಿಮಾ ರಿಲೀಸ್

0

ಮುಂಬಯಿ: ಅಕ್ಷಯ್‌ ಕುಮಾರ್‌ ಅವರಿಗೆ ಹಿಟ್‌ ತಂದುಕೊಟ್ಟ ʼಓ ಮೈ ಗಾಡ್-2‌ʼ ಸಿನಿಮಾ ಥಿಯೇಟರ್‌ ನಲ್ಲಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿ ರಿಲೀಸ್‌ ಗೆ ರೆಡಿಯಾಗಿದೆ.

ಆಗಸ್ಟ್‌ 11 ರಂದು ಥಿಯೇಟರ್‌ ನಲ್ಲಿ ತೆರೆಕಂಡ ʼಓಮೈಗಾಡ್-2‌ʼ ಪ್ರೇಕ್ಷಕರ ಮನಗೆದ್ದಿತ್ತು. ರಿಲೀಸ್‌ ಮೊದಲು ಸಾಕಷ್ಟು ಸುದ್ದಿಯಲ್ಲಿದ್ದ ಸಿನಿಮಾ ರಿಲೀಸ್‌ ಬಳಿಕ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಬಾಕ್ಸ್‌ ಆಫೀಸ್‌ ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಇದರ ಜೊತೆ ಅಕ್ಷಯ್‌ ಕುಮಾರ್‌ ಅವರಿಗೆ ಒಂದು ಹಿಟ್‌ ತಂದುಕೊಟ್ಟಿತು.

ಅಮಿತ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಿವನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.  ಲೈಂಗಿಕ ಶಿಕ್ಷಣದ ಕಥಾಹಂದರವನ್ನು‌ ಸಿನಿಮಾ ಒಳಗೊಂಡಿದೆ.

ಇದೀಗ ಸಿನಿಮಾ ಓಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಇದೇ ತಿಂಗಳ ಅಂದರೆ ಅಕ್ಟೋಬರ್‌ 8 ರಂದು ಸಿನಿಮಾ ನೆಟ್‌ ಫ್ಲಿಕ್ಸ್‌ ನಲ್ಲಿ ಸ್ಟ್ರೀಮ್‌ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

ʼಓಮೈಗಾಡ್‌ -2 ಸಿನಿಮಾ ಸನ್ನಿ ಡಿಯೋಲ್‌ ಅವರ ʼಗದರ್-2‌ʼ ಯೊಂದಿಗೆ ಪೈಪೋಟಿ ಆಗಿ ರಿಲೀಸ್‌ ಆಗಿತ್ತು. ಎರಡೂ ಸಿನಿಮಾ ಕೂಡ ಈ ವರ್ಷ ಬಿಟೌನ್‌ ಹಿಟ್‌ ಲಿಸ್ಟ್‌ ಗೆ ಸೇರಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 02 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ