ಮನೆ ಆರೋಗ್ಯ ಎಳೆಯ ಮಕ್ಕಳಿಗೆ ಸರಳವಾದ ಆಹಾರ

ಎಳೆಯ ಮಕ್ಕಳಿಗೆ ಸರಳವಾದ ಆಹಾರ

0

ಎಳೆ ಮಕ್ಕಳಿಗೆ ಆರು ತಿಂಗಳವರೆಗೆ ಕಡ್ಡಾಯವಾಗಿ ತಾಯಿಯ ಹಾಲು ಕೊಡಬೇಕು. ಆನಂತರ ತಾಯಿಯ ಹಾಲಿನ ಜೊತೆಗೆ ಮೃದುವಾದ ಆಹಾರವನ್ನು ಕೊಡಬೇಕು. ತಾಯಿಯ ಹಾಲು ಸಾಕಷ್ಟು ಇದ್ದರೂ ಆರು ತಿಂಗಳ ನಂತರ ಸರಳವಾದ ಆಹಾರ ಕೊಡದಿದ್ದರೆ ಮಗುವಿನ ಬೆಳವಣಿಗೆ ತೃಪ್ತಿಕರವಾಗಿರುವುದಿಲ್ಲ

ಕೆಲವು ಮಕ್ಕಳಿಗೆ ನಾಲ್ಕು ತಿಂಗಳು ತುಂಬಿದ ನಂತರ ಹೆಚ್ಚುವರಿ ಆಹಾರ ಕೊಡಬೇಕಾಗುತ್ತದೆ. ಆ ವಯಸ್ಸಿನ ಮಕ್ಕಳಿಗೆ ಹೆಚ್ಚುವರಿ ಆಹಾರ ಕೊಡಲು ಕೆಲವು ಪ್ರತ್ಯೇಕ ಕಾರಣಗಳಿವೆ. ಆ ಮಕ್ಕಳು ತಾಯಿಯ ಹಾಲು ಕುಡಿಯುತ್ತಿದ್ದರು ವಯಸ್ಸಿಗೆ ತಕ್ಕ ತೂಕ, ಬೆಳವಣಿಗೆ ಇರುವುದಿಲ್ಲ ಇಲ್ಲವೇ ತಾಯಿಯ ಹಾಲು ಮಕ್ಕಳಿಗೆ ಸಾಕಾಗುತ್ತಿರುವುದಿಲ್ಲ.

ಮಕ್ಕಳಿಗೆ ಹೆಚ್ಚುವರಿ ಆಹಾರ ಕೊಡಲು ಆರಂಭಿಸಿದರು ತಾಯಿಯ ಹಾಲನ್ನು ಎರಡು ವರ್ಷದವರೆಗೆ ಕಡ್ಡಾಯವಾಗಿ ಕೊಡಬೇಕು. ತಾಯಿಯಲ್ಲಿ ಹಾಲು ಲಭ್ಯವಿದ್ದರೆ ಎರಡು ವರ್ಷದ ನಂತರವೂ ಕೂಡ ಕೊಡಬಹುದು.

ಆರು ತಿಂಗಳಿಗೆ ಮಗುವಿನಲ್ಲಿ ಬೆಳವಣಿಗೆಯ ಸಾಮರ್ಥ್ಯ :

 ಆಹಾರವನ್ನು ಸೇವಿಸಬೇಕಾದರೆ ಮಗುವಿನಲ್ಲಿ ಪ್ರತ್ಯೇಕವಾದ ಶಕ್ತಿ ಮೈಗೂಡಿರಬೇಕು. ಆರು ತಿಂಗಳು ತುಂಬುವಷ್ಟರಲ್ಲಿ ಸಾಮಾನ್ಯವಾಗಿ ಮಕ್ಕಳೆಲ್ಲರಲ್ಲಿಯೂ ಹೆಚ್ಚುವರಿ ಆಹಾರವನ್ನು ನುಂಗುವ ಶಕ್ತಿ ಬೆಳವಣಿಗೆ ಆಗಿರುತ್ತದೆ. ಅದಕ್ಕಿಂತಲೂ ಕಡಿಮೆ ವಯಸ್ಸಿನವರಿಗೆ ತಾಯಿಯ ಹಾಲಿನ ವಿನಃ ಬೇರೆ ಆಹಾರವನ್ನು ನುಂಗುವ ಸಾಮರ್ಥ್ಯಇರುವುದಿಲ್ಲ ಆರು ತಿಂಗಳು ತುಂಬಿದ ನಂತರ ಸ್ವಲ್ಪ ಮೃದುವಾದ ದ್ರವಹಾರವನ್ನು ನುಂಗುವುದೇ ಅಲ್ಲದೆ ಸ್ವಲ್ಪಮಟ್ಟಿಗೆ ಅಗಿಯುವ ಶಕ್ತಿಯು ಬೆಳೆದಿರುತ್ತದೆ

ಹಿಟ್ಟಿನ ಪದಾರ್ಥಗಳನ್ನು ಜೀರ್ಣಿಸಿಕೊಳ್ಳುವ ಅಗತ್ಯವಿರುವ ಪ್ಯಾನ್ ಕ್ರಿಯಾಟಿಕ್ ಎಂಜೈಮ್ಸ್ ಕೂಡ ಆರು ತಿಂಗಳಿನ ನಂತರವೇ ಕ್ರಿಯಾಶೀಲವಾಗುತ್ತದೆ. ಆರು ತಿಂಗಳ ನಂತರವೇ ಹಾಲು ಹಲ್ಲುಗಳು ಮೊಳೆಯಲು ಆರಂಭಿಸುತ್ತದೆ. ಅದುವರೆಗೂ ಹಲ್ಲುಗಳಿರುವುದಿಲ್ಲ ಆರು ತಿಂಗಳು ಒಳಗೆ ಹೆಚ್ಚುವರಿ ಆಹಾರವನ್ನು ಕೊಡಬೇಕಾದ ಅನಿವಾರ್ಯತೆ ಉಂಟಾದರೆ ಹಾಲಿಗಿಂತಲೂ ಮಂದವಾದ, ಸ್ನಿಗ್ಧ ದ್ರವಹಾರವನ್ನು  ನುಂಗುವ ಸಾಮರ್ಥ್ಯವಿದೆ ಎಂಬುದನ್ನು ಗಮನಿಸಬೇಕು.

9 ತಿಂಗಳ ಮಗುವಿನ ಶಕ್ತಿ ಸಾಮರ್ಥ್ಯಗಳು :-

ಮಗುವಿಗೆ 9 ತಿಂಗಳ ತುಂಬಿದಂತೆ ಚಮಚದಲ್ಲಿರುವ ಗಟ್ಟಿದ್ರವ ಪದಾರ್ಥಗಳನ್ನು ತುಟಿಗಳಿಂದ ನಿಕ್ಕಿ ನುಂಗುವ ಸಾಮರ್ಥ್ಯ ಬೆಳವಣಿಗೆ ಆಗಿರುತ್ತದೆ. ನಾಲಿಗೆಯಿಂದ ಆಹಾರದಲ್ಲಿ ಹಲ್ಲಿನ ಕೆಳಗೆ ಅತ್ತ ಇತ್ತ ತಳ್ಳಿ ನಂತರ ಅದನ್ನು ನುಂಗುತ್ತದೆ. ಕೆಲವು ಘನಪಧಾರ್ಥಗಳನ್ನು ಬಾಯಲ್ಲಿಟ್ಟುಕೊಂಡು ಚಪ್ಪರಿಸುವ ಸಾಮರ್ಥ್ಯ 9 ತಿಂಗಳಿಗೆ ಬೆಳವಣಿಗೆ ಆಗಿರುತ್ತದೆ.

9 ತಿಂಗಳು ತುಂಬವರಿಗೆ ಸಿದ್ದ ದ್ರವಹಾರವನ್ನೇ ಕೊಡಬೇಕು ಆನಂತರ ಸ್ವಲ್ಪ ಘನ ಪದಾರ್ಥಗಳನ್ನು ಕೊಡಬೇಕು ಹೆಚ್ಚುವರಿ ಆಹಾರ ಕೊಡುವಾಗ ಸಂಪೂರ್ಣ ಶುಭ್ರತೆ ಯನ್ನು ಪಾಲಿಸದಿದ್ದರೆ ನೀರಿನ ಅಂತ ಭೇಟಿಯಾಗುತ್ತದೆ ಹೆಚ್ಚು ಆಹಾರ ಕೊಡುತ್ತಿದ್ದೇವೆ ಎಂದು ತಾಯಿಯ ಹಾಲು ಕೊಡುವುದನ್ನು ಕಡಿಮೆ ಮಾಡಿದರು, ಕೊಡುವುದನ್ನು ನಿಲ್ಲಿಸಿದರು ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ.

ಹೆಚ್ಚುವರಿ ಆಹಾರ ಕೊಡುವುದು ತಡ ಮಾಡಿದರೆ : –

ಹೆಚ್ಚುವರಿ ಆಹಾರ ಕೊಡುವುದನ್ನು ತಡ ಮಾಡಿದರೆ ಮಗುವಿನ ಬೆಳವಣಿಗೆ ಕ್ರಮಬದ್ಧ ವಾಗಿರುವುದಿಲ್ಲ. ಅಲ್ಲದೆ ರಕ್ತ ರಕ್ತಹೀನತೆ ಉಂಟಾಗುತ್ತದೆ ಮಗು ದೊಡ್ಡದಾಗುತ್ತಿದ್ದಂತೆಲ್ಲ ಇದರ ಪೋಷಕಾಂಶಗಳ ಅಗತ್ಯ ಕೂಡ ಬೆಳೆಯುತ್ತದೆ ಆಗ ಹೆಚ್ಚುವರಿ ಆಹಾರವನ್ನು ಆರಂಭಿಸಿದಿದ್ದರೆ ಪೌಷ್ಟಿಕಾಂಶಗಳ ಕೊರತೆಯ ಲಕ್ಷಣಗಳು ಕಂಡುಬರುತ್ತದೆ.

ಮಗು ಆರು ತಿಂಗಳು ತುಂಬಿದ ನಂತರವೂ ಕೇವಲ ತಾಯಿಯ ಹಾಲು ಮಾತ್ರವೇ ಕೊಟ್ಟರೆ ತಾಯಿಯ ಹಾಲಿನ ಮೂಲಕ ಲಭ್ಯವಾಗುವ ಪೋಷಕಾಂಶಗಳು ಆವಯಸ್ಸಿಗೆ ಸಾಕಾಗುವುದಿಲ್ಲ. ಮಗುಗೆ ಒಂದು ವರ್ಷ ತುಂಬಿದ ನಂತರ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶಗಳನ್ನು ಹೆಚ್ಚುವರಿ ಆಹಾರದ ಮೂಲಕವೇ ಹೆಚ್ಚಾಗಿ ಕೊಡಬೇಕು.

ಮಗುಗೆ ಒಂದು ವರ್ಷ ತುಂಬಿದ ನಂತರ ಮನೆಯಲ್ಲಿ ಎಲ್ಲರಿಗೂ ಮಾಡುವ ಅಡುಗೆ ಎಣ್ಣೆ ಕೊಡಬಹುದು ಬಹಳಷ್ಟು ಮಕ್ಕಳು ವರ್ಷ ತುಂಬಿದ ನಂತರ ದೊಡ್ಡವರು ತಿಳಿದಂತೆಯೇ ತಿಂದು ಜೀರ್ಣಸಿಕೊಳ್ಳುತ್ತಾರೆ.

ಆರು ತಿಂಗಳ ಮಗುವಿಗೆ ಕೊಡುವ ಹೆಚ್ಚುವರಿ ಆಹಾರ :-

ಮಗುವಿಗೆ ಕೊಡುವ ಮೊದಲನೆಯ ಹೆಚ್ಚುವರಿ ಆಹಾರ ಮೆತ್ತನೆಯ ದ್ರವವಾಗಿರಬೇಕು. ಧಾನ್ಯಗಳ ಹಿಟ್ಟಿನಲ್ಲಿ ಗಂಜಿ ಕಾಯಿಸಿ ಕೊಡಬೇಕು ರಾಗಿ ಗಂಜಿ, ಗೋದಿ ಗಂಜಿ, ಕೊಡಬೇಕು, ಮೊದಲನೇ ಹೆಚ್ಚುವರಿ ಆಹಾರಕ್ಕೆ ಉಪ್ಪು,ಕಾರ ಹಾಕಬಾರದು ಕೆಲಕಾಲ ಹೀಗೆ ಮಾಡಿದ ನಂತರ ಸ್ವಲ್ಪ ಗಟ್ಟಿಯಾದ ಆಹಾರವನ್ನು ಸ್ವಲ್ಪ ಉಪ್ಪು ಕಾರವನ್ನು ಕೊಡಬಹುದು. 9ನೇ ತಿಂಗಳಿನಿಂದ ಮೆತ್ತಗಿರುವ ಕಾಯಿ ಪಲ್ಯ ಹಣ್ಣುಗಳನ್ನು ಕೊಡಬಹುದು.

ದಿನಕ್ಕೆ ಎಷ್ಟು ಸಾರಿ ಹೆಚ್ಚುವರಿ ಆಹಾರ ಕೊಡಬೇಕು? :-

ತಾಯಿಯ ಹಾಲು ಸಾಕಷ್ಟಿರುವ ಮಗುವಿಗೆ ಹೆಚ್ಚುವರಿ ಆಹಾರ ಬೆಳಗ್ಗೆ ಮತ್ತು ರಾತ್ರಿ ದಿನಕ್ಕೆರಡು ಬಾರಿ ಕೊಡಬೇಕು. 9 ತಿಂಗಳು ಕಳೆದ ನಂತರ ಮೂರು ಬಾರಿ ಕೊಡಬಹುದು. ತಾಯಿ ಹಾಲಿನ ಕೊರತೆ ಇರುವವರಿಗೆ ದಿನಕ್ಕೆ ಐದು ಬಾರಿ ಕೊಡಬೇಕು ಹೆಚ್ಚುವರಿ ಆಹಾರವನ್ನು ಆರಂಭದಲ್ಲಿ ದಿನಕ್ಕೆ 20 ಗ್ರಾಂ ಇಲ್ಲವೇ 4 ಟೀ ಚಮಚದಷ್ಟು ಕೊಡಬೇಕು. ಇದು ಕಿರು ಧಾನ್ಯಗಳನ್ನು ಚೆನ್ನಾಗಿ ಬೇಯಿಸಿ ತೆಳುವಾದ ಗಂಜಿ ಮಾಡಿ ಕೊಡಬೇಕು. 9 ತಿಂಗಳ ನಂತರ ಪ್ರತಿ ಬಾರಿಯೂ 20 ಗ್ರಾಂನಂತೆ ದಿನಕ್ಕೆ ಮೂರು ಬಾರಿ ಕೊಡಬೇಕು. ಹಾಗೆ 9 ತಿಂಗಳ ನಂತರ ಮಗುವೆ ಹೆಚ್ಚುವರಿ ಆಹಾರದಲ್ಲಿ ಬೇಳೆ ಬಟಾಣಿಯನ್ನು ಬೇಯಿಸಿ ಕೊಡಬಹುದು..ಹಾಲಿನಿಂದ ತಯಾರಿಸಿದ ಕೋವಾ, ಗಿಣ್ಣು, ತಿನ್ನಿಸಬಹುದು ಹಾಗೆಯೇ ಮಗುವಿನ ಆಹಾರದಲ್ಲಿ ಮೊಟ್ಟೆ, ಮಾಂಸ, ಮೀನು, ಸೊಪ್ಪು, ತರಕಾರಿ, ತುಪ್ಪ, ಎಣ್ಣೆ, ಸಕ್ಕರೆ, ಬಳಸಬಹುದು

ತುಪ್ಪ, ಸಕ್ಕರೆ ಬಳಸುವುದರಿಂದ ಮಗುವಿಗೆ ಶಕ್ತಿ ಲಭ್ಯವಾಗುತ್ತದೆ. ಹಾಲು ಕೆನೆಯಿಂದ ಪ್ರೊಟೀನ್ ಗಳು ಕ್ಯಾಲ್ಸಿಯಂ ಲಭಿಸುತ್ತದೆ, ಮಾಂಸ ಮೀನುಗಳಿಂದ ಪ್ರೋಟೀನ್ ಗಳು ಹಾಗೂ ಸೊಪ್ಪು ತರಕಾರಿ ಹಣ್ಣುಗಳಿಂದ ವಿಟಮಿನ್ ಗಳು ಲಭ್ಯವಾಗುತ್ತದೆ. ಇವೆಲ್ಲ ಮಗುವಿನ ಆರೋಗ್ಯಕರವಾದ ಬೆಳವಣಿಗೆಗೆ ಬಹು ಅಗತ್ಯ.

ಸಿದ್ಧಪಡಿಸಿದ ಆಹಾರ : –

ಮಾರುಕಟ್ಟೆಯಲ್ಲಿ ಸಿಗುವ ಸಿದ್ದ ಆಹಾರಗಳನ್ನು ಅವಲಂಬಿಸಿದರೆ ಖರ್ಚು ಹೆಚ್ಚಾಗುತ್ತದೆ ಈ ಆಹಾರವನ್ನು ನಿಗದಿತ ಪ್ರಮಾಣದಲ್ಲಿ ಕೊಡತೊಡಗಿದರೆ ಡಬ್ಬಿಗಳು ಬೇಗ ಖಾಲಿಯಾಗುತ್ತವೆ. ಬಹಳಷ್ಟು ತಾಯಂದಿರು ಈ ಖರ್ಚು ಬರಿಸಲಾಗದೆ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ. ಹಾಗಾಗಿ ಮಗುವಿನ ಆಹಾರದ ಕೊರತೆಯಾಗುತ್ತದೆ ಆದ್ದರಿಂದ ಮಗುವಿಗೆ ಬೇಕಾದ ಆಹಾರವನ್ನು ಮನೆಯಲ್ಲಿ ತಯಾರಿಸಿಕೊಳ್ಳುವುದು ಉತ್ತಮ ಕ್ರಮ.

ಹೆಚ್ಚುವರಿ ಆಹಾರವನ್ನು ನಿರಾಕರಿಸುವ ಮಕ್ಕಳು :-

ಕೆಲವು ಮಕ್ಕಳು ಹೆಚ್ಚುವರಿ ಆಹಾರದ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ತಿನ್ನಿಸಲು ಪ್ರಯತ್ನಿಸಿದರೆ ಮುಖ ಪಕ್ಕಕ್ಕೆ ತಿರುಗಿಸುತ್ತಾರೆ ಇಂತಹ ಮಕ್ಕಳ ಬಗ್ಗೆ ತಾಯಿಯ ತಾಳ್ಮೆ ಇರಬೇಕು ಮಕ್ಕಳನ್ನು ಆಟದಲ್ಲಿ ತೊಡಗಿಸಿ ಅವರಿಗೆ ಕಥೆ ಹೇಳುತ್ತಾ ಚಾಕಚಕ್ಯತೆಯಿಂದ ತಿನ್ನಿಸಬೇಕು ಆತುರ ತೋರಿದರೆ ಮಗುವನ್ನು ಗದರಿದರೆ ಅದು ತಿನ್ನುವುದೇ ಇಲ್ಲ ಮಗುಗೆ ತಿಂಡಿ ತಿನ್ನಿಸಲು ತಾಯಿ ಹೆಚ್ಚು ಸಮಯ ವಿನಿಯೋಗಿಸಬೇಕಾಗುತ್ತದೆ. ಮಗು ಆಹಾರ ತಿನ್ನಿಸಲು ಬಟ್ಟಲು ಪ್ರತ್ಯೇಕವಾಗಿರಬೇಕು… ಎಲ್ಲರೂ ಬಳಸುವ ಬಟ್ಟಲನ್ನು ಮಗುವಿಗೆ ಬಳಸಬಾರದು, ಮಗುವಿಗೆನ ಬಟ್ಟಲು ಪ್ಲೇಟನ್ನು ಶುಭ್ರವಾಗಿ ತೊಳೆದಿಡಬೇಕು ಮಗು ಸ್ವಲ್ಪ ತಿನ್ನುವುದನ್ನು ಕಲಿತ ನಂತರ ತನ್ನ ಕೈಗಳಿಂದಲೇ ತಿನ್ನುವಂತೆ ಪ್ರೋತ್ಸಾಹಿಸಬೇಕು ಆಹಾರ ಕೊಡುವ ಮೊದಲು ತಾಯಿ ತನ್ನ ಮಗುವಿನ ಕೈಗಳನ್ನು ಶುಭ್ರವಾಗಿ ತೊಳೆದುಕೊಳ್ಳಬೇಕು. ಶುಬ್ರತೆ ಪಾಲಿಸದಿದ್ದರೆ ಬೇರಿ ಮತ್ತು ವಾಂತಿಯಾಗುತ್ತದೆ.

 ಹೆಚ್ಚುವರಿ ಆಹಾರ ಕೊಡುವಾಗ ಪ್ರತಿ ಬಾರಿಯೂ ತಯಾರಿಸಿ ಕೊಡಬೇಕೆ ಹೊರತು ತಂಗಳನ್ನು ಕೊಡಬಾರದು. ಹೆಚ್ಚುವರಿ ಆಹಾರದ ವಿಷಯದಲ್ಲಿ ತಾಯಿಯ ಶ್ರದ್ಧೆ ಮಗುವಿನ ಬೆಳವಣಿಗೆಗೆ ಸೋಪಾನವಾಗುತ್ತದೆ.