ಉಪ್ಪಿನ ಲಕ್ಷಣಗಳು ಉಂಟಾಗದಂತೆ ತಡೆಯುವ ಗುಣ :
1. ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ ಮುಪ್ಪಿನ ಲಕ್ಷಣಗಳುಂಟಾಗದಂತೆ ತಡೆಯುವ ಮತ್ತು ಚರ್ಮದ ಬೆಳವಣಿಗೆ ಆರೋಗ್ಯವಾಗಿರುವಂತೆ ರಕ್ಷಿಸುವ ಸಾಮರ್ಥ್ಯ ಇದೆ ಯೆಂದು ತಿಳಿದುಬಂದಿದೆ.
2. ವಿಕಿರಣ ಮತ್ತು ಉತ್ಕರ್ಷಣ ಒತ್ತಡ ಚರ್ಮದ ಮೇಲೆ ಉಂಟು ಮಾಡುವ ಮುಪ್ಪಿನ ಲಕ್ಷಣಗಳನ್ನು ನಿವಾರಣೆ ಮಾಡುವ ಸಾಮರ್ಥ್ಯ ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಇದೆ ಯೆಂದು ಪ್ರಯೋಗ ಶಾಲೆಯಲ್ಲಿ ಮನುಷ್ಯರ ಚರ್ಮದ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ.
3. ಒಟ್ಟಾರೆ ಬೆಟ್ಟದ ನೆಲ್ಲಿಕಾಯಿಯ ಸತ್ವದ ಸೇವನೆಯಿಂದ ಮತ್ತು ಹೊರ ಲೇಪನವಾಗಿ ಉಪಯೋಗಿಸುವುದರಿಂದ, ಇತರ ಕಾರಣಗಳಿಂದಾಗಲಿ ಅಥವಾ ಸೂರ್ಯನ ಪ್ರಖರ ಕಿರಣಗಳಿಂದ ಉಂಟಾಗುವ ಚರ್ಮದ ಮುಪ್ಪಿನ ಲಕ್ಷಣಗಳು ಉಂಟಾಗುವುದಿಲ್ಲ ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ, ಚರ್ಮವನ್ನು ಕಾಂತಿಯುಕ್ತ ವಾಗುವಂತೆ ಮಾಡುವ ಮತ್ತು ಸೂರ್ಯನ ಕಿರಣಗಳಿಂದ ಚರ್ಮವನ್ನು ಕಾಪಾಡುವ ಪ್ರಸಾದನ ದ್ರವ್ಯವಾಗುವ ಎಲ್ಲ ಲಕ್ಷಣಗಳು ಇವೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಮೂತ್ರಪಿಂಡವನ್ನು ಕಾಪಾಡುವ ಗುಣ :
1.ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವನ್ನು ಐದು ದಿನಗಳವರೆಗೆ ಸೇವಿಸುವಂತೆ ಮಾಡಿ ಸಜ್ಜುಗೊಳಿಸಿದ ಗಂಡು ಸ್ಟ್ರಾಗ್ ಡಾಲಿ ಇಲಿಗಳ ಮೂತ್ರಪಿಂಡವನ್ನು ವಿಶಿಷ್ಟ ವಿಧಾನದಿಂದ ಪ್ರಯೋಗ ಶಾಲೆಯಲ್ಲಿ ಹಾನಿಗೊಳಿಸಲು ಪ್ರಯತ್ನಿಸಿದಾಗ, ಬೆಟ್ಟದ ನಲ್ಲಿಕಾಯಿಯ ಸತ್ವವನ್ನು ಸೇವಿಸುದುದರ ಪರಿಣಾಮ ,ಮೂತ್ರಪಿಂಡ ಹಾನಿಯಾಗಿದೆ ಉತ್ತಮ ಸ್ಥಿತಿಯಲ್ಲಿದೆತ್ತೆಂದು ವರದಿಯಾಗಿದೆ. 500 ಮಿ. ಗ್ರಾಂ ಪ್ರಮಾಣದ ಸತ್ವ ಹೆಚ್ಚು ಪರಿಣಾಮಕಾರಿಯೆನ್ನಲಾಗಿದೆ. ಈ ಪ್ರಯೋಗದಿಂದ ಬೆಟ್ಟದ ನಲ್ಲಿಕಾಯಿ ಸತ್ವಕ್ಕೆ ಮೂತ್ರಪಿಂಡವನ್ನು ಕಾಪಾಡುವ ಗುಣವಿದೆಯೆಂದು ದೃಢಪಟ್ಟಿದೆ. ಈ ಸತ್ವದ ಈ ಗುಣಕ್ಕೆ, ಅದಕ್ಕೆ ಇರುವ ಆಂಟಿ ಆಕ್ಸಿಡೆಂಟ್ ಗುಣ ಕಾರಣವೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮುದಿತನದಲ್ಲಿ ಉಂಟಾಗಬಹುದಾದ ಮೂತ್ರಪಿಂಡದ ಹಾನಿಯನ್ನು ತಡೆಯುವ ಸಾಮರ್ಥ್ಯ ಬೆಟ್ಟದ ನೆಲ್ಲಿಕಾಯಿಗೆ ಇದೆಯೆಂದು ಈಥೈಲ್
ಅಸಿಟೇಟ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ಇಲಿಗಳಿಗೆ ಕೊಟ್ಟು ಪರೀಕ್ಷಿಸಿದಾಗ ತಿಳಿದು ಬಂದಿದೆ.
ಮೂಳೆ ಸಂಬಂಧಿಸಿದ ಕಾಯಿಲೆಗಳನ್ನು ಮೂಳೆ ಸವೆತ ಎಲುಬು ತೂತಿಕೆ ರೋಗ ವಾಸಿ ಮಾಡುವ ಗುಣ :
ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳನ್ನು ವಾಸಿ ಮಾಡುವ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗಗಳಿಂದ ದೃಢಪಟ್ಟಿದೆ.
ಮೇದೋಜೀರದ ಗ್ರಂಥಿಗಳನ್ನು ಕಾಪಾಡುವ ಗುಣ :
ಮೆದೋಜೀರಕ ಗ್ರಂಥಿ ಮುಖ್ಯವಾದ ಅಂಶಗಳಲ್ಲಿ ಒಂದು.ಇದು ಜಠರದ ಹಿಂಭಾಗ ಮತ್ತು ಮೂತ್ರಪಿಂಡದ ಮಧ್ಯಭಾಗದಲ್ಲಿದೆ ಈ ಗ್ರಂಥಿ ಸ್ರವಿಸುವ ಹಾರ್ಮೋನ್ ಗಳು ಪಚನ ಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.ಈ ಗ್ರಂಥಿಯಲ್ಲಿನ ಬೀಟಾ ಜೀವಕೋಶಗಳು ಇನ್ಸುಲಿನ್ ಅನ್ನು ಉತ್ಪತ್ತಿ ಮಾಡುತ್ತವೆ.ಮತ್ತು ಗ್ಲುಕೋಸ್ ಅನ್ನು ಜೀವಕೋಶದಲ್ಲಿನ ಮೈ ಆಟೋಗ್ರಾಂಡಿಯಕ್ಕೆ ತಲುಪುವಂತೆ ಮಾಡುತ್ತದೆ. ಮೈಟೊಕಾಂಡ್ರಿಯದಲ್ಲಿ ಉತ್ಕರ್ಷಣಗೊಂಡ ದೇಹಕ್ಕೆ ಅವಶ್ಯಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಇಂತಹ ಉಪಯುಕ್ತ ಅಂಗ ಹಾನಿಗೊಳಗಾದರೆ ಅಥವಾ ಕಾಯಿಲೆಗೆ ತುತ್ತಾದರೆ ಚಿಕಿತ್ಸೆ ಮಾಡುವ ಸಮರ್ಪಕ ಮತ್ತು ಪ್ರತಿಕೂಲ ಪರಿಣಾಮವನ್ನುಂಟು ಮಾಡದ ಔಷಧಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ.
ಪ್ರಸ್ತುತ ಸಂಶೋಧನೆಗೆ 28 ಮಾಂಗ್ರೆಲ್ ಜಾತಿಯ ನಾಯಿಗಳನ್ನು ಆಯ್ಕೆ ಮಾಡಿ 4 ಗುಂಪು ಮಾಡಲಾಯಿತು.ಪ್ರಾಯೋಗಿಕ ಗುಂಪಿನ ನಾಯಿಗಳಿಗೆ ಪ್ರಾರಂಭಿಸಿದ ದಿನದಿಂದ 15 ದಿನಗಳವರೆಗೆ ಬೆಟ್ಟದ ನೆಲ್ಲಿಕಾಯಿಯ ತತ್ವವನ್ನು ಸೇವಿಸಲು ಕೊಟ್ಟು ತಯಾರು ಗೊಳಿಸಲಾಯಿತು. ಇಂತಹ ನಾಯಿಗಳಿಗೆ 16ನೆಯ ದಿನ ಮೇದೋಜೀರಕ ಗ್ರಂಥಿಯನ್ನು ಹಾನಿಗೊಳಿಸುವ ರಾಸಾಯನಿಕವನ್ನು ಇಂಜೆಕ್ಷನ್ ಮೂಲಕ ಕೊಡಲಾಯಿತು. ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದಾಗ ಬಿಟ್ಟದ ನೆಲ್ಲಿಕಾಯಿಯ ಸತ್ವ ಸೇವಿಸಿದ ನಾಯಿಗಳಲ್ಲಿ ಮೆದೋ ಜೀರಕ ಗ್ರಂಥಿ ಹನಿಯಾಗದೆ ಸುರಕ್ಷಿತವಾಗಿತಿಂದುತ್ತೆಂದು ವರದಿಯಾಗಿದೆ.
ಎಲ್ ಅಜ್ಜಿ ನೈನ್ ಉಂಟು ಮಾಡುವ ಹಾನಿಯಿಂದ ಮೇದೋಜೀರಕ ಗ್ರಂಥಿಯನ್ನು ಕಾಪಾಡುವ ಗುಣ ಬೆಟ್ಟದ ನೆಲ್ಲಿಕಾಯಿಯ ಸತ್ವಕ್ ಇದೆಯೆಂಊದು ಇಳಿಗಳಿಗೆ 28 ದಿನಗಳವರೆಗೆ ಸೇವಿಸಲು ಕೊಟ್ಟು ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿದೆ.
ಬೆಟ್ಟದ ನೆಲ್ಲಿಕಾಯಿಯ, ಮೆದೋಜೀರಕ ಗ್ರಂಥಿಯನ್ನು ಕಾಪಾಡುವ ಗುಣಕ್ಕೆ ಅದರಲ್ಲಿ ಹಡಕವಾಗಿರುವ ರುಟನ್ ಎಂಬ ರಾಸಾಯನಿಕ ಘಟಕ ಕಾರಣವೆಂದು ಕಂಡು ಬಂದಿದೆ.