ಮನೆ ಅಪರಾಧ ಮಂಡ್ಯ: ದೇವಸ್ಥಾನದ ಬೀಗ ಮುರಿದು ಹುಂಡಿ ದೋಚಿದ ಖದೀಮರು

ಮಂಡ್ಯ: ದೇವಸ್ಥಾನದ ಬೀಗ ಮುರಿದು ಹುಂಡಿ ದೋಚಿದ ಖದೀಮರು

0

ಮಂಡ್ಯ: ದೇವಸ್ಥಾನದ ಬೀಗ ಮುರಿದು ಕಳ್ಳತನವಾಗಿರುವ ಘಟನೆ ಮಂಡ್ಯದ ಗಾಂಧಿನಗರದ 6 ಕ್ರಾಸ್ ನಲ್ಲಿರುವ ಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ.

ತಡರಾತ್ರಿ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿ ಹುಂಡಿಯಲ್ಲಿದ್ದ ಸುಮಾರು 1.50 ಲಕ್ಷ ಹಣ ದೋಚಿ, ಹುಂಡಿ ಎಸೆದು ಖದೀಮರು ಪರಾರಿಯಾಗಿದ್ದಾರೆ.

ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.