ಮನೆ ಯೋಗಾಸನ ಸೋಹಮಾತ್ಮ

ಸೋಹಮಾತ್ಮ

0

ನಮ್ಮ ಉಸಿರಾಟದ ಕ್ರಿಯೆಯನ್ನು ಸ್ವಲ್ಪ ಗಮನವಿಟ್ಟು ಸೂಕ್ಷ್ಮವಾಗಿ ಆಲಿಸಿ ನೋಡಿ ಆಗ ಎಲ್ಲಾ ಪೂರಕರೇಚಕ ಕ್ರಿಯೆಗಳಲ್ಲೂ ಕ್ರಮವಾಗಿ ಸೋ (ಶ್. ಶ್…) ಮತ್ತು ಹಂ (ಹ.ಹ..) ಶಬ್ದವು ತುಂಬಾ ಮೆಲ್ಲಗೆ ಸ್ವಾಭಾವಿಕವಾಗಿ ಕೇಳಿಬರುತ್ತದೆ. ಅಂದರೆ ಶ್ವಾಸ ಕ್ರಿಯೆ ಮಾಡುವಾಗ ನಾವು ʼಸೋಹಂʼ ಅಂದರೆ ಅನಂತವನ್ನು ಅಥವಾ ದೈವಿಶಕ್ತಿಯನ್ನು ಒಳಗಡೆದು ಕೊಳ್ಳುತ ʼಹಃʼ ಅಥವಾ ಅಹಂ ಅನ್ನು ಹೊರಬಿಡುತ್ತೇವೆ. ಅರ್ಥತ್ ತ್ಯಜಿಸುತ್ತೇವೆ. ಸೋಹಮಾತ್ಮ ಅಂದರೆ ಸೋ (ಅನಂತ) ಹಂ (ನಾನು) ಮತ್ತು ಆತ್ಮ ಇವುಗಳ ಸಂಗಮ ಅಥವಾ ಐಕ್ಯತೆ ಇದುವೇ ಮಾನವ ಜೀವನದ ಪರಮ ಗುರಿ. ಇದು ದೈವದತ್ತವಾಗಿ ನಮಗೆ ದೊರಕಿದೆ ಅಂದರೆ ಆದರೆ ನಮಗೆ ಅಂದರೆ ಬಹಳಷ್ಟು ಜನರಿಗೆ ಅದರ ಅರಿವೇ ಇರುವುದಿಲ್ಲ ಆ ಅರಿವಿನಲ್ಲಿಯೇ ಸದಾ ಇರಲಿ ಸಾಧ್ಯವಾದರೆ ಎಂಥ ಅದ್ಭುತವಲ್ಲವೇ.

ಪ್ರಾಣಾಯಾಮ ಮಾಡದೆ ಸಹಜವಾಗಿ ಉಸಿರಾಟ ಮಾಡುವಾಗ ನಿಮಿಷಕ್ಕೆ 14-15 ಸಲ ಉಸಿರಾಟ ಕ್ರಿಯೆ ನಡೆಯುತ್ತದೆ ಅಂತಾದರೆ ಪ್ರತಿಯೊಂದು ಉಸಿರಾಟದಲ್ಲೂ, ಅಂದರೆ ಸರಿ ಸುಮಾರು 4 ಸೆಕೆಂಡುಗಳ ಅವಧಿಯಲ್ಲಿ ಪೂರಕ ಮತ್ತು ರೇಚಕಗಳೆರಡು ನಡೆದು ಹೋಗುತ್ತದೆ ಅಂತಾಯಿತು ಮತ್ತು ಅಲ್ಲಿ ಕುಂಭಕ ಇರುವುದಿಲ್ಲ. ಆದರೆ ಪ್ರಾಣಾಯಾಮ ಮಾಡುವಾಗ ಬುಧ್ಯಾಪೂರ್ವಕವಾಗಿ ನಾವು ಸುದೀರ್ಘವಾಗಿ ಮತ್ತು ನಿಧಾನವಾಗಿ ನಮ್ಮ ಶ್ವಾಸಕೋಶಗಳು ಸಂಪೂರ್ಣವಾಗಿ ತುಂಬವರೆಗೆ ಉಸಿರನ್ನು ಒಳಗೆ ತೆಗೆದುಕೊಳ್ಳುವುದರಿಂದ ಅದಕ್ಕೆ 3-4 ಸೆಕೆಂಡುಗಳ ಕಾಲಾವಧಿಯಾದರೂ ತಗಲುತ್ತದೆ. ಮತ್ತು ಸರಿಸುಮಾರು ಅಷ್ಟೇ ಅವಧಿಯ ಕಾಲಾವಧಿ ರೇಚಕಕ್ಕು ಬೇಕಾಗುತ್ತದೆ ಇದು ಕುಂಭಕವಿಲ್ಲದ ಮಾಡುವಾಗ ಮಾತ್ರ ! ಆದರೆ ಕನಿಷ್ಠ ಎರಡು ಸೆಕೆಂಡುಗಳ ಕಾಲಾವಧಿಯ ಕುಂಭಕವನ್ನು (ಕುಂಭವೆಂದರೆ ಉಸಿರನ್ನು ಹಿಡಿದಿಟ್ಟುಕೊಂಡಿರುವುದು ಇದರ ಬಗೆಗೆ ಮುಂದೆ ವಿವರವಾಗಿ ಚರ್ಚಿಸಲಾಗಿದೆ) ಕೂಡ ಸೇರಿಸಿಕೊಂಡರೆ 4+4+2=10 ಸೆಕೆಂಡ್ ಗಳ ಒಂದು ಉಸಿರಾಟದ ಕ್ರಿಯೆ ನಡೆದರೆ ನಿಮಿಷಕ್ಕೆ ಆರು ಸಲ ಉಸಿರಾಟಗಳು ನಡೆಯುತ್ತದೆ ಎಂದಾಯಿತು. ಬದಲಿಗೆ ಕುಂಭಕವಿಲ್ಲದ ಉಸಿರಾಟ ಕ್ರಿಯೆಯನ್ನು ಗಣನೆಗೆ ತೆಗೆದುಕೊಂಡರೆ (4+4=8) ಎಂಟು ಸೆಕೆಂಡ್ ಗಳಿಗೆ ಒಂದಂತೆ ಏಳುವರೆ ಅಥವಾ ಎಂಟು ಉಸಿರಾಟಗಳು ನಡೆಯುತ್ತದೆ ಎನ್ನಬಹುದು…… ಇದು ಪ್ರಾರಂಭದಲ್ಲಿ ಮಾತ್ರ ಅದನ್ನು ಅಭ್ಯಾಸ ಮಾಡುತ್ತಾ ಹೋದಂತೆ ಪ್ರಾಣಾಯಾಮ ಮಾಡುವಾಗ ಈ ಉಸಿರಾಟ ಅವಧಿಯನ್ನು ತುಂಬಾ ನಿಧಾನವಾಗಿ ಅಂದರೆ ಸುಧೀರ್ ಸಮಯ ಕಳೆದಂತೆ ಹೆಚ್ಚಿಸುತ್ತಾ ಹೋಗಬಹುದು. ಆದರೆ ಈ ಬೆಳವಣಿಗೆ ತುಂಬಾ ತುಂಬಾ ನಿಧಾನವಾಗಿ ನಡೆಯಬೇಕು. ಮತ್ತು ಇದು ಅತ್ಯಂತ ಮುಖ್ಯವಾದದ್ದು ಇಲ್ಲಿ ಅವಸರ ಗಡಿಬಿಡಿ ಮಾತ್ರ ಬೇಡವೇ ಬೇಡ.

ವಿಶೇಷ ಸೂಚನೆ :-

ಇದು ಯೋಗಾಸದನೆಯಲ್ಲಿ ಅತ್ಯಂತ ಮಹತ್ವದ ಮೆಟ್ಟಿಲು ಪ್ರಾರಂಭದಲ್ಲಿ ಕನಿಷ್ಠ ಆರು ತಿಂಗಳಾದರೂ ಕುಂಭಕ-ರಹಿತ ಪ್ರಾಣಾಯಾಮ ಮಾಡಿ, ನಂತರ ನಿಧಾನವಾಗಿ ಮೊದಲು “ಅಂತರ ಕುಂಭಕ” (ಮೊದಲು ಹಸ್ವ ಕುಂಭಕ ನಂತರ ನಿಧಾನವಾಗಿ ಕುಂಭಕ್ಕೆ ಹೋಗಬಹುದು) ಅದು ತೃಪ್ತಿಕರ ಸಾಧನೆಯಾದ ತರುವಾಯವೇ “ಬಾಹ್ಯ ಕುಂಭಕ”ವನ್ನು ಸೇರಿಸಿಕೊಳ್ಳುವುದು ಉತ್ತಮ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಕುಂಭಕವನ್ನು ಪ್ರಾರಂಭಿಸುವುದು ಉತ್ತಮ.

ಜೊತೆಗೆ ಇನ್ನೊಂದು ಪ್ರಾಮುಖ್ಯ ವಿಷಯ ಪ್ರಾಣಯಾಮಗಳಿಗೆ ಪೂರ್ವಭಾವಿಯಾಗಿ ನಾವು ಬಂದಗಳು ಮತ್ತು ಮುದ್ರೆಗಳನ್ನು ಕೂಡ ತಿಳಿದುಕೊಳ್ಳಬೇಕಿದೆ ಯಾಕೆಂದರೆ ಪ್ರಾಣಾಯಾಮವನ್ನು ಅಭ್ಯಾಸ ಅತ್ಯವಶ್ಯಕವಾಗಿರುವುದು ಈ ಮುದ್ರೆಗಳು ಮತ್ತು ಬಂಧಗಳು ಈ ಮುದ್ರೆ ಮತ್ತು ಬಂದಗಳು ಅಷ್ಟೇನೂ ಕಷ್ಟದಾಯಕವಲ್ಲ ಆದರೆ ಇವುಗಳೊಂದಿಗೆ ಮಾಡುವ ಪ್ರಾಣಾಯಾಮವು ಅಭ್ಯಾಸಯ ಶರೀರದ ಮೇಲೆ ಅತಿ ಹೆಚ್ಚು ಪ್ರಭಾವವಿರುವುದರಿಂದ ನಾವು ಅವುಗಳೊಂದಿಗೆ ಪ್ರಾಣಾಯಾಮ ಮಾಡಿದರೆ ಹೆಚ್ಚು ಫಲದಾಯಕ.

ಸಮಯ :-

ಸಾಮಾನ್ಯವಾಗಿ ಬೆಳಕಿನ ಮತ್ತು ಸಂಜೆ ಸಮಯ ಹೆಚ್ಚು ಪ್ರಶಸ್ತವಾಗಿದೆ. ಸೂರ್ಯೋದಯಕ್ಕಿಂತ ಮುಂಚೆ ಮತ್ತು ಸೂರ್ಯಾಸ್ತದ ನಂತರ ಯೋಗ ಶಾಸ್ತ್ರದ ಪ್ರಕಾರ ಪ್ರಾಣಾಯಾಮವನ್ನು ದಿನಕ್ಕೂ ನಾಲ್ಕು ಹೊತ್ತು ಸಮಯ ಮುಂಜಾನೆ, ಮಧ್ಯಾಹ್ನ, ಸಂಜೆ ಮತ್ತು ಮಧ್ಯರಾತ್ರಿ ಮಾಡಬಹುದು. ಹೀಗೆ ಪ್ರತಿ ಸಲಕ್ಕೆ 20 ಸುತ್ತುಗಳಂತೆ ಒಟ್ಟು 80 ಸುತ್ತುಗಳು ಒಂದು ದಿನಕ್ಕೆ ಕನಿಷ್ಠ ಪಕ್ಷಕ್ಕೆ ನಿಗದಿ ಮಾಡಲಾಗಿದೆ. ಇಲ್ಲಿ ಸುತ್ತು ಅಂದರೆ ಏನು ಒಂದು ಸಲದ ಪೂರಕ ಮತ್ತು ರೇಚಕ ಸೇರಿ ಒಂದು ಸುತ್ತು ಅಥವಾ ನೀವು ಕುಂಭಕ ಮಾಡುತ್ತಿದ್ದೀರಾ, ಆದರೆ ಆಗ ಪೂರಕ ಅಂತರ ಕುಂಭಕ ರೇಚಕ ಮತ್ತು ಬಾಹ್ಯ ಕುಂಭಕ ಸೇರಿ ಒಂದು ಸುತ್ತು ಎನ್ನಲಾಗುತ್ತದೆ. ಇದು ಕನಿಷ್ಠ ಎನಿಸಿದರೆ ಅದನ್ನೇ 40 ಸುತ್ತುಗಳಂತೆ ಮುಂಜಾನೆ ಮತ್ತು ಅಷ್ಟೇ ಸುತ್ತುಗಳನ್ನು ಸಂಜೆಗೆ ಮಾಡಬಹುದು. ಕೊನೆಯ ಪಕ್ಷ ಅತಿ ಕಡಿಮೆ ಎಂದರು, ದಿನಕ್ಕೆ ಒಂದು ಸಲ 20 ಸುತ್ತುಗಳನ್ನಾದರೂ ಮಾಡಲೇಬೇಕು. ಯೋಗಭ್ಯಾಸಕ್ಕೆ ಅತ್ಯಂತ ಪ್ರಶಸ್ತಿ ಸಮಯವೆಂದರೆ ಬೆಳಗಿನ ಬ್ರಾಹ್ಮಿ ಮುಹೂರ್ತ ಅಂದರೆ ಬೆಳಗಿನ 3 ರಿಂದ 6 ಗಂಟೆಗಳವರೆಗೆ ಸಮಯ ಆದರೆ ಇಂದಿನ ನಮ್ಮ ಸಂಕೀರ್ಣ ಜೀವನಶೈಲಿಗೆ ಅದು ತುಂಬಾ ಕಷ್ಟ ಸಾಧ್ಯವೆನಿಸುತ್ತದೆ. ಮುಂಜಾನೆ 7 ತಪ್ಪಿದರೆ 8 ಗಂಟೆ ಒಳಗಾಗಿ ಮುಗಿಸಲಡ್ಡಿಯಿಲ್ಲ.

ಮಕ್ಕಳಿಗೆ ಪ್ರಾಣಾಯಾಮ :-

5 ವರ್ಷಗಳಾದ ನಂತರವೇ ಮಕ್ಕಳಿಗೆ ಪ್ರಾಣಾಯಾಮವನ್ನು ಪ್ರಾರಂಭಿಸಬಹುದು 16 ಅಥವಾ 18 ವರ್ಷಗಳ ವಯಸ್ಸಿನವರಿಗೆ ಮಕ್ಕಳಿಗೆ ಕುಂಭಕರ ಹಿತ ಪ್ರಾಣಾಯಾಮ ಮಾತ್ರ ಸಾಕು ಉಳಿದಂತೆ ಅಬಾಲವೃದ್ಧರಾದಿಯಾಗಿ ಎಲ್ಲರೂ ಪ್ರಾಣಾಯಾಮ ಮಾಡಬಹುದು.

ಮಹಿಳೆಯರಿಗೆ ಪ್ರಾಣಾಯಾಮ :-

ಮಹಿಳೆಯರು ವಿಶೇಷವಾಗಿ ಭಾಸ್ತ್ರಿಕ-ಕಪಲಭಾತಿ ಪ್ರಾಣಾಯಾಮವನ್ನು ತುಂಬಾ ಕಾಳಜಿ ಪೂರ್ವ ವಾಗಿ ಮಾಡಬೇಕು ಯಾಕೆಂದರೆ ಶುಕ್ರ ಉಸಿರಾಟದಿಂದಾಗಿ ಹೊಟ್ಟೆಯ ಭಾಗವನ್ನು ವಿಶೇಷವಾಗಿ ಗರ್ಭಕೋಶ ಅಕ್ಕಪಕ್ಕ ಸರಿಯಬಹುದು. ಮೊಲೆಗಳು ಒತ್ತಬಹುದು ಗರ್ಭಿಣಿ ಸ್ತ್ರೀಯರಂತೂ ಬಸ್ತಿಕ-ಕಪಾಲಭಾತಿ ವಿಷಮವೃತ್ತಿ ಪ್ರಾಣಾಯಾಮ ಹೆಚ್ಚಿನ ಸಮಯದ ಅಂತರ ಕುಂಭಕ ಬಂದ ಸಹಿತವಾದ ಬಾಹ್ಯ ಕುಂಭಗಳನ್ನು ಹೊರತುಪಡಿಸಿ ಇನ್ನುಳಿದವುಗಳನ್ನು ಮಾಡಬಹುದು. ಹೆರಿಗೆಯಾದ ಒಂದು ತಿಂಗಳ ನಂತರ ಸ್ವಲ್ಪ ನಿಧಾನವಾಗಿ ಮೂರು ತಿಂಗಳು ಕಳೆದ ನಂತರ ಮತ್ತೆ ಮೊದಲಿನಂತೆ ಪ್ರಾರಂಭಿಸಬಹುದು.

ತಿಂಗಳ ಮುಟ್ಟಿನ ಕಾಲದಂತೆ ಕಾಲದಲ್ಲಂತೂ ಪ್ರಾಣಾಯಾಮ ಅತ್ಯಂತ ಪ್ರಯೋಜನಕಾರಿ ಎಂದು ಹೇಳುತ್ತಾರೆ ಆದರೆ ಆಗ ಉಡ್ಡಿಯಾನ ಬಂಧ ನಿಶಿದ್ಧ ಜೊತೆಗೆ ವಸ್ತ್ರಿಕ ಮತ್ತು ಕಪಾಲಬಾತಿಯನ್ನು ಕೂಡ ಮಾಡಕೂಡದು.

ಆಸಕ್ತರಿಗೆ ಪ್ರಾಣಾಯಾಮ :-

ಹೆಚ್ಚು ಸಮಯ ವಜ್ರಾಸನ ಪದ್ಮಾಸನದಲ್ಲಿ ಕುಳಿತುಕೊಳ್ಳಲು ಆಗದಿದ್ದರೂ, ಕುರ್ಚಿ ಸ್ಟೂಲುಗಳ ಮೇಲೆ ಬೆನ್ನು ನೇರವಾಗಿ ಕುಳಿತು ಅಥವಾ ಇನ್ನೂ ಅಶಕ್ತರಾಗಿದ್ದರೆ ಅಂಗಾತ ಮಲಗಿ ಕೂಡ ಮಾಡಬಹುದು. ಅಂಗಾತ ಮಲಗಿಮಾಡುವಾಗ ಸಮಪಾತಳಿಯ ನಿಲದ ಮೇಲೆ ತಲೆಯ ಬುಡದಲ್ಲಿ ಎರಡು ಅಥವಾ ಮೂರು ಅಂಗುಲ ಎತ್ತರದ ಕಟ್ಟಿಗೆಯ ಮಣೆ ಅಥವಾ ಗಟ್ಟಿಯಾದ ವಸ್ತುವನ್ನು ಇಟ್ಟುಕೊಳ್ಳಬೇಕು ಹಾಗಂತ ತಲೆದೆಂಬು ಬೇಡವೆಂತಲ್ಲ, ಅದು ಮೆತ್ತಗಿರುವುದರಿಂದ ತಲೆ ಸರಿದಾಡಬಹುದು ಅಂತ ಅಷ್ಟೇ ಪ್ರಯತ್ನಿಸಿ ನೋಡಬಹುದು.