ಮನೆ ಮನರಂಜನೆ “ವಾಮನ’ ಚಿತ್ರದ ಆ್ಯಕ್ಷನ್‌ ಟೀಸರ್‌ ಬಿಡುಗಡೆ

“ವಾಮನ’ ಚಿತ್ರದ ಆ್ಯಕ್ಷನ್‌ ಟೀಸರ್‌ ಬಿಡುಗಡೆ

0

ಧನ್ವೀರ್‌ ನಾಯಕರಾಗಿರುವ “ವಾಮನ’ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಹಿಟ್‌ ಲಿಸ್ಟ್‌ ಸೇರಿವೆ. ಈಗ ಚಿತ್ರತಂಡ ಟೀಸರ್‌ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಇಂದು “ವಾಮನ’ ಚಿತ್ರದ ಆ್ಯಕ್ಷನ್‌ ಟೀಸರ್‌ ಬಿಡುಗಡೆಯಾಗುತ್ತಿದೆ. ಈ ಮೂಲಕ ಚಿತ್ರತಂಡ ಮಾಸ್‌ ಆಡಿಯನ್ಸ್‌ ಸೆಳೆಯಲು ಪ್ರಯತ್ನಿಸುತ್ತಿದೆ.

ನಾಯಕ ಗುಣ ನೀರು ಇದ್ದಂತೆ. ರಾವಣ, ದುರ್ಯೋ ಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಲ್ಕು ಭರ್ಜರಿ ಆ್ಯಕ್ಷನ್‌ ದೃಶ್ಯಗಳಿವೆ. ಮಾಸ್‌ ಆಡಿಯನ್ಸ್‌ಗೆ ಬೇಕಾದ ಅಂಶಗಳು ಚಿತ್ರದಲ್ಲಿವೆ ಎನ್ನುವುದು ಚಿತ್ರಿತಂಡದ ಮಾತು.

ಚೇತನ್‌ ಗೌಡ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಶಂಕರ್‌ ರಾಮನ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ತಾರಾ, ಸಂಪತ್‌, ಆದಿತ್ಯ, ಶಿವರಾಜ್‌ ಕೆಆರ್‌ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೊಚ್‌ ಸುಧಿ, ಭೂಷಣ್‌ ಮುಂತಾದವರು ಮುಖ್ಯಭೂಮಿಕೆ ಯಲ್ಲಿ ಅಭಿನಯಿಸಿದ್ದಾರೆ.

ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನ, ಅರ್ಜುನ್‌ ರಾಜ್‌, ವಿಕ್ರಮ್‌ ಮೋರ್‌ ಮತ್ತು ಜಾಲಿ ಬಾಸ್ಟಿನ್‌ ಸಾಹಸವಿದೆ.