‘ಕೆಡಿ’ ಸಿನಿಮಾ ಗುರುವಾರ (ಏಪ್ರಿಲ್ 30) ರಂದು ಬಿಡುಗಡೆ ಆಗಿದೆ. ಕೆವಿಎನ್ ಸಂಸ್ಥೆ ನಿರ್ಮಿಸಿರುವ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ ಎನ್ನಲಾಗಿದೆ. ಪ್ರೇಮ್ ಅವರ ಹಳೆಯ ಖದರ್ ಮರಳಿ ಬಂದಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಧ್ರುವ ಸರ್ಜ ಅವರ ‘ಮಾರ್ಟಿನ್’ ಸಿನಿಮಾ ಸೋಲಿನ ಬಳಿಕ ‘ಕೆಡಿ’ ಸಿನಿಮಾ ಬಿಡುಗಡೆ ಆಗಿದೆ. ಈ ಕಾರಣಕ್ಕೆ ಅವರ ವೃತ್ತಿಜೀವನದ ದೃಷ್ಟಿಯಿಂದ ಈ ಸಿನಿಮಾ ತುಂಬಾನೇ ಮುಖ್ಯ ಎನಿಸಿಕೊಂಡಿದೆ ಎನ್ನಬಹುದು. ಸಿನಿಮಾದ ಮೊದಲಾರ್ಧವನ್ನು ಜನರು ಸಮಾಧಕರ ಎಂದು ಕರೆದಿದ್ದು. ಸಿನಿಮಾದ ಪಾತ್ರಗಳ ಪರಿಚಯದ ಮೇಲೆ ಮೊದಲಾರ್ಧ ಸಾಗುತ್ತದೆ ಎಂದಿದ್ದಾರೆ. ಮತ್ತು ಸಿನಿಮಾದ ಅಸಲಿ ಕಥೆ ಆರಂಭ ಆಗೋದು ದ್ವೀತೀಯಾರ್ಧದಲ್ಲಂತೆ. ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಜನರು ಹಾಡಿ ಹೊಗಳಿದ್ದಾರೆ ಎನ್ನಬಹುದು.
ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಸಿನಿಮಾನ ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿವೆ ಎನ್ನಬಹುದು. ಸಿನಿಮಾನ ಜನರು ಒಟ್ಟಾರೆಯಾಗಿ ಇಷ್ಟಪಟ್ಟಿದ್ದಾರೆ.















