ಮನೆ ರಾಜ್ಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ತಂದೆ-ಮಗ: ಪತ್ನಿ ಆತ್ಮಹತ್ಯೆ, ಜೈಲಿನಲ್ಲೇ ಪತಿಗೂ ಹೃದಯಾಘಾತ

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ತಂದೆ-ಮಗ: ಪತ್ನಿ ಆತ್ಮಹತ್ಯೆ, ಜೈಲಿನಲ್ಲೇ ಪತಿಗೂ ಹೃದಯಾಘಾತ

0

ಮೈಸೂರು: ಕೊಲೆ ಪ್ರಕರಣದಲ್ಲಿ ತಂದೆ ಮತ್ತು ಮಗ ಜೈಲು ಸೇರಿದ್ದರಿಂದ ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾಗಿದ್ದು, ಇತ್ತ ಪತಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ತೇಜಸ್ ತಾಯಿ ಇಂದ್ರಾಣಿ (35) ನೇಣಿಗೆ ಶರಣಾದವರು. ಈ ವಿಚಾರ ತಿಳಿದು ಜೈಲಿನಲ್ಲೇ ಇಂದ್ರಾಣಿ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೈಸೂರಿನ ವಿದ್ಯಾನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾಲರಾಜ್‌ ಜೊತೆ ಸ್ನೇಹಿತ ತೇಜಸ್, ಈತನ ತಂದೆ, ಮತ್ತಿಬ್ಬರು ಸೇರಿ ಜಗಳ ಮಾಡಿಕೊಂಡು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.

ಪ್ರಕರಣ ಸಂಬಂಧ ಆರೋಪಿಗಳಾದ ತೇಜಸ್, ಈತನ ತಂದೆ ಸಾಮ್ರಾಟ್, ಕಿರಣ್ ಸಂಜಯ್ ಎಂಬವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.

ತನ್ನ ಪತಿ ಮತ್ತು ಮಗ ಈ ರೀತಿ ಕೃತ್ಯ ಎಸಗಿ ಜೈಲು ಸೇರಿದರಲ್ಲಾ ಎಂದು ಆಘಾತಕ್ಕೆ ಒಳಗಾದ ಇಂದ್ರಾಣಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಸುದ್ದಿ ತಿಳಿದು ಆರೋಪಿಯೂ ಆಗಿರುವ ಇಂದ್ರಾಣಿ ಪತಿ ಸಾಮ್ರಾಟ್​ ಗೆ ಜೈಲಿನಲ್ಲೇ ಹೃದಯಾಘಾತವಾಗಿದೆ.

ಪ್ರಕರಣ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.