ಮನೆ ರಾಜ್ಯ ನೋಟಿಸ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ: ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ

ನೋಟಿಸ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ: ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ

0

ಬೆಂಗಳೂರು (Bengaluru)-ನೋಟಿಸ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ (priyank kharge) ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ ಐ ನೇಮಕಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ನನ್ನ ಬಾಯಿ ಮುಚ್ಚಿಸಲು ನೋಟಿಸ್‌ ನೀಡುತ್ತಿದ್ದಾರೆ. ಈ ನೋಟಿಸ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಹಕ್ಕುಚ್ಯುತಿ ಮಂಡನೆ, ರಕ್ಷಣಾ ಕಾಯಿದೆ ಸೇರಿದಂತೆ ಇತರೆ ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾನು ಹೇಳಿರುವ ಅಂಶಗಳಲ್ಲಿ ನೈಜತೆಯಿರುವುದನ್ನು ನಂಬಿರುವುದಾಗಿ ಹೇಳಿರುವ ಸಿಐಡಿ ದಾಖಲೆ ನೀಡುವಂತೆ ಮೂರನೇ ಬಾರಿಗೆ ನೋಟಿಸ್‌ ನೀಡಿದೆ. ನೈಜತೆಯಿರುವುದನ್ನು ನಂಬಿದ್ದರೆ ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬಂಧಿಸಬೇಕು ಎಂದರು.

ಪ್ರಕರಣ ಸಂಬಂಧ ಏ.24 ಹಾಗೂ 28ರಂದು ಮೊದಲ, ಎರಡನೇ ನೋಟಿಸ್‌ ನೀಡಲಾಗಿತ್ತು. ಮೇ 4ರಂದು ನೀಡಿರುವ 3ನೇ ನೋಟಿಸ್‌ನಲ್ಲಿ ತಾವು 24ರಂದು ವಿಚಾರಣೆಗೆ ಹಾಜರಾಗದೆ ಲಿಖಿತ ಉತ್ತರ ಸಲ್ಲಿಸಿದ್ದೇನೆ. ಸಚಿವರು, ಪರಿಷತ್‌ ಸದಸ್ಯರ ಪತ್ರವೇ ಆಧಾರರಹಿತ ಎನ್ನುವ ತನಿಖಾಧಿಕಾರಿ ಏನು ಹೇಳಲು ಹೊರಟ್ಟಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ. 

ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಅವರು, ಎಸ್‌ಐ ನೇಮಕಾತಿ ಅಕ್ರಮದ ತನಿಖೆ ತಳಮಟ್ಟದಲ್ಲಿಆಗಬೇಕಿದೆ. ಇದರಲ್ಲಿ ದೊಡ್ಡವರೆಲ್ಲ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಂದಿನ ಲೇಖನಗಂಗೂಲಿ ಮನೆಯಲ್ಲಿ ಅಮಿತ್‌ ಶಾ ಭೋಜನ ಕೂಟ: ಗಂಗೂಲಿ ಬಿಜೆಪಿ ಸೇರುವ ವಿಚಾರ ಮತ್ತೆ ಮುನ್ನೆಲೆಗೆ
ಮುಂದಿನ ಲೇಖನಪಿಎಸ್‌ ಐ ಹಗರಣದ ಕಿಂಗ್​ಪಿನ್‌ ಹೆಸರು ಬಹಿರಂಗವಾದರೆ ಸರ್ಕಾರ ಪತನ: ಹೆಚ್.ಡಿ.ಕುಮಾರಸ್ವಾಮಿ