ಮನೆ ಮನರಂಜನೆ ಸೆಪ್ಟೆಂಬರ್ ಮೊದಲ  ವಾರದಲ್ಲಿ  ‘ಸಲಾರ್’ ಸಿನಿಮಾದ ಟ್ರೈಲರ್ ರಿಲೀಸ್

ಸೆಪ್ಟೆಂಬರ್ ಮೊದಲ  ವಾರದಲ್ಲಿ  ‘ಸಲಾರ್’ ಸಿನಿಮಾದ ಟ್ರೈಲರ್ ರಿಲೀಸ್

0

ಸೆಪ್ಟೆಂಬರ್ 28ಕ್ಕೆ ‘ಸಲಾರ್’ ಪ್ರಭಾಸ್ ಆರ್ಭಟ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಡೈನೋಸಾರ್ ದರ್ಬಾರ್ ಝಲಕ್ ನೋಡೋಕೆ ಅರ್ಥಾತ್ ಟ್ರೈಲರ್ ಗಾಗಿ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ.

ಆಗಸ್ಟ್ ಕೊನೆ ವಾರದಲ್ಲಿ ಟ್ರೈಲರ್ ರಿಲೀಸ್ ಮಾಡೋದಾಗಿ ಈ ಹಿಂದೆ ಹೊಂಬಾಳೆ ಸಂಸ್ಥೆ ಹೇಳಿತ್ತು. ಇದೀಗ ‘ಸಲಾರ್’ ಟ್ರೈಲರ್ ಬಗ್ಗೆ ಹೊಂಬಾಳೆ ಸಂಸ್ಥೆ ಸುಳಿವು ಕೊಟ್ಟಿದೆ.

ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ‘ಸಲಾರ್’ ಟೀಸರ್ ಗೆ  ಸರಿಯಾದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಟೀಸರ್ ಅದ್ಭುತ ಅನ್ನಿಸಿದರೂ ಸರಿಯಾಗಿ ಪ್ರಭಾಸ್ ದರ್ಶನವಾಗದೇ ಅಭಿಮಾನಿಗಳು ಬೇಸರಗೊಂಡಿದ್ದರು. ಅದೇ ಕಾರಣಕ್ಕೆ ಟ್ರೈಲರ್ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.

ಸದ್ಯ ಹೊಂಬಾಳೆ ಸಂಸ್ಥೆಯ ಯೂಟ್ಯೂಬ್ ಚಾನಲ್ ನಲ್ಲಿ ಸ್ಪೆಷಲ್ ವಿಡಿಯೋ ರಿಲೀಸ್ ಆಗಿದೆ. ಟೀಸರ್ ಝಲಕ್ ಜೊತೆಗೆ ಹೊಸ ವಿಷ್ಯುವಲ್ಸ್ ಸೇರಿಸಿ ಸಣ್ಣ ಶಾರ್ಟ್ಸ್ ಶೇರ್ ಮಾಡಲಾಗಿದೆ. ಕೊನೆಯಲ್ಲಿ ‘ಸಲಾರ್’ ಟ್ರೈಲರ್ ಕಮ್ಮಿಂಗ್ ಸೂನ್ ಎಂದು ಬರೆಯಲಾಗಿದೆ. ಸೆಪ್ಟೆಂಬರ್ ಮೊದಲ ವಾರ ಸಿನಿಮಾ ಟ್ರೈಲರ್ ರಿವೀಲ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ಬಣ್ಣ ಹಚ್ಚಿದ್ದಾರೆ. ನೀರ್ದೇಶಕ ಪ್ರಶಾಂತ್ ನೀಲ್,  ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ದೇವರಾಜ್, ಭಜರಂಗಿ ಲೋಕಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಭುವನ್ ಗೌಡ ಸಿನಿಮಾಟೋಗ್ರಫಿ, ಶಿವಕುಮಾರ್ ಆರ್ಟ್ ವರ್ಕ್ , ರವಿ ಬಸ್ರೂರು ಹಾಡುಗಳು ಚಿತ್ರಕ್ಕಿದೆ. ಸೆಪ್ಟೆಂಬರ್  28ಕ್ಕೆ  ‘ಸಲಾರ್’ ಸಿನಿಮಾ ವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ