ಮನೆ ರಾಜ್ಯ ಹುಣಸೂರು: ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 9 ಮಂದಿ ಪ್ರಭಾವಿಗಳ ಬಂಧನ

ಹುಣಸೂರು: ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 9 ಮಂದಿ ಪ್ರಭಾವಿಗಳ ಬಂಧನ

0

ಹುಣಸೂರು: ನಗರದ ಕೆ.ಎಸ್.ಆರ್.ಟಿ.ಸಿ.ಡಿಪೋ ಬಳಿಯ ಎಸ್.ಎಲ್.ವಿ. ಲಾಡ್ಜ್ ಹಿಂಬಾಗದ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಅಡ್ಡೆಗೆ ದಾಳಿ ಮಾಡಿ ನಗರ ಸೇರಿದಂತೆ ತಾಲೂಕಿನ 9 ಮಂದಿ ಪ್ರಭಾವಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಣಕ್ಕಿಟ್ಟಿದ್ದ 19,700 ರೂ. ವಶಕ್ಕೆ ಪಡೆದು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಇನ್ಸ್ ಪೆಕ್ಟರ್ ದೇವೇಂದ್ರ, ಎಸ್.ಐ. ಜಮೀರ್ ಅಹಮದ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆಟದಲ್ಲಿ ತೊಡಗಿದ್ದ ಎಲ್ಲ 9 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ಕ್ರಮಕೈಗೊಂಡಿದ್ದಾರೆ.