ಮನೆ ಯೋಗಾಸನ ನಾಡಿ ದೋಷ ಅಥವಾ ನಾಡಿ ಶುದ್ದಿ ಪ್ರಾಣಾಯಾಮ

ನಾಡಿ ದೋಷ ಅಥವಾ ನಾಡಿ ಶುದ್ದಿ ಪ್ರಾಣಾಯಾಮ

0

ಇದನ್ನು ಸೂರ್ಯ ಭೇದನ ಪ್ರಾಣಾಯಾಮ (ಬಲಭಾಗದ ಹೊಕ್ಕಳೆಯಿಂದ ಉಸಿರಾಡುವುದು) ಮತ್ತು ಚಂದ್ರಬೇದನ ಪ್ರಾಣಾಯಾಮ (ಎಡ ಭಾಗದ ಹೊಳ್ಳೆಯಿಂದ ಉಸಿರಾಡುವುದು) ಎರಡು ಪ್ರಣಾಯಾಮಗಳ ಸಂಯುಕ್ತ ಕ್ರಿಯೆ ಎನ್ನಬಹುದು. ಯಾವುದೇ ಧ್ಯಾನಾಸನದಲ್ಲಿ ಕುಳಿತು ಕಣ್ಣು ಮುಚ್ಚಿಕೊಂಡು, ಬಲಗೈನಿಂದ ಧ್ಯಾನ ಮುದ್ರೆ ಅಥವಾ ಪ್ರಾಣ ಮುದ್ರೆ ಮಾಡುತ್ತಾ ಎಡಗೈನಿಂದ ಶೂನ್ಯ ವಾಯು ಮುದ್ರೆಯನ್ನು ಮಾಡಿ, ಅಂದರೆ ನಡುವಿನ ಬೆರಳು ಮತ್ತು ತೋರುಬೆರಳುಗಳನ್ನು ಜೋಡಿಸಿ ಹೆಬ್ಬೆರಳುಗಳನ್ನು ಬುಡಕ್ಕೆ ಸ್ಪರ್ಶಿಸಿ ಅದರ ಮೇಲೆ ಹೆಬ್ಬೆರಳಿನಿಂದ ಮೃದುವಾಗಿ ಅಮುಕುವುದೇ ಅದೇ ಕೈಯ ಬಲ ಹೊಳೆಯನ್ನು ಕಿರುಬೆರಳು ಮತ್ತು ಅನಾಮಿಕ ಅಥವಾ ಉಂಗುರ ಬೆರಳೆನಿಂದ ಮುಚ್ಚಲು ಮತ್ತು ಎಡ ಹೊಳ್ಳೆಯನ್ನು ಹೆಬ್ಬೆರಳಿನಿಂದ ಮುಚ್ಚುತ್ತ ಈ ಪ್ರಾಣಾಯಾಮವನ್ನು ಮಾಡಬೇಕು.

ನಿಧಾನವಾಗಿ ಧೀರ್ಘವಾಗಿ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಸಂಪೂರ್ಣವಾಗಿ ಹೊರ ಬಿಡಬೇಕು ಮತ್ತು ತಕ್ಷಣ ಬಲ ಹೊಳ್ಳೆಯನ್ನು ಮೇಲೆ ಹೇಳಿದ ಹಾಗೆ ಎಡಗೈನಿಂದ ಉಂಗುರ ಬೆರಳು ಮತ್ತು ಕಿರುಬೆರಳುಗಳಿಂದ ಮುಚ್ಚಿಕೊಂಡು ಎಡ ಹೊಳ್ಳೆಯಿಂದ ದೀರ್ಘವಾಗಿ ಶ್ವಾಸಕೋಶಗಳ ಎಂಬುವವರಿಗೆ ಉಸಿರಾಡದುಕೊಳ್ಳಬೇಕು. ತಕ್ಷಣ ಅದೇ ಕೈನಿಂದ ಹೆಬ್ಬೆರಳಿನಿಂದ ಆ ಎಡ ಹೊಳ್ಳೆಯನ್ನು ಮುಚ್ಚಿಕೊಂಡು ಬಲಹೊಳೆಯಿಂದ ದೀರ್ಘವಾಗಿ ಮತ್ತು ನಿಧಾನವಾಗಿ ಸಂಪೂರ್ಣವಾಗಿ ಉಸಿರನ್ನು ಬಿಡಬೇಕು.

ತಕ್ಷಣ ಅದೇ ಸ್ಥಿತಿಯಲ್ಲಿ ಅದೇ ಬಲ ಹೊಳ್ಳೆಯಿಂದ ದೀರ್ಘವಾಗಿ ಶ್ವಾಸಕೋಶಗಳು ತುಂಬಾ ಅವರಿಗೆ ಉಸಿರನ್ನು ಎಳೆದುಕೊಳ್ಳಬೇಕು. ಈಗ ಕಿರುಬೆರಳು ಮತ್ತು ಉಂಗುರದ ಬೆರಳಿನಿಂದ ಆ ಬಲ ಹೊಳೆಯನ್ನು ಮುಚ್ಚಿಕೊಂಡು ಎಡ ಹೊಳ್ಳೆಯಿಂದ ಅದೇ ಕ್ರಮದಲ್ಲಿ ಉಸಿರು ಬಿಡಬೇಕು. ಮತ್ತೆ ಅಲ್ಲಿಂದಲೇ ಅಂದರೆ ಎಡ ಮೂಗಿನಿಂದ ಒಳ್ಳೆಯ ಉಸಿರು ತೆಗೆದುಕೊಂಡು ಬಲಹೊಳೆಯಿಂದ ಬಿಡಬೇಕು. ಇದೇ ಕ್ರಮದಲ್ಲಿ ಪುನರಾವರ್ತನೆ ಮಾಡುತ್ತದೆ. ಇನ್ನು ಉತ್ತಮ ಐದೇ ಕ್ರಮದಲ್ಲಿ ಅಭ್ಯಾಸ ಮಾಡಬೇಕು.

ನೆನಪಿಡಿ :-

ಯಾವ ಹೊಳೆಯಿಂದ ಉಸಿರನ್ನು ಬಿಡುತ್ತೇವೆಯೋ, ಅದೇ ಹೊಳೆಯಿಂದ ಉಸಿರು ತೆಗೆದುಕೊಳ್ಳಬೇಕು ಮತ್ತು “ಯಾವ ಹೊಳ್ಲೆಯಿಂದ ಉಸಿರು ತೆಗೆದುಕೊಳ್ಳುತ್ತಿರೋ ಅದನ್ನು ಬಿಟ್ಟು ಇನ್ನೊಂದು ಹೊಳ್ಳೆಯಿಂದ ಹೊರ ಬಿಡಬೇಕು. ಇವೆರಡು ವಿಧಾನಗಳ ಅರ್ಥ ಒಂದೇ. ಇಲ್ಲಿ ಹೇಳಲು ಕಾರಣ ತುಂಬಾ ಜನರಿಗೆ ಆರಂಭದಲ್ಲಿ ಹೆಚ್ಚಿನ ಕನ್ಫ್ಯೂಸ್ ಅಥವಾ ಗೊಂದಲವಾಗುವುದು ಹೆಚ್ಚು.

ಪ್ರಯೋಜನಗಳು :-

ರಕ್ತಕ್ಕೆ ಹೆಚ್ಚು ಆಮ್ಲಜನಕ ಸಿಕ್ಕು ಲವಲವಿಕೆ ಹೆಚ್ಚುತ್ತದೆ. ನಾಡಿ ಶುದ್ದಿ ಶರೀರದಲ್ಲಿರುವ ಎಲ್ಲಾ 72,000 ನಾಡಿಗಳು ಶುದ್ದಿಯಾಗುತ್ತದೆ. ತನ್ಮೂಲಕ ಪ್ರಾಣಾಶಕ್ತಿಯ ಹರಿವು ಸರಾಗವಾಗುವುದರಿಂದ ಎಲ್ಲಾ ದೈಹಿಕ ಮಾನಸಿಕ ಕಾಯಿಲೆಗಳು ವಾಸಿಯಾಗುತ್ತಾ ಬರುತ್ತದೆ. ಏಕಾಗ್ರತೆ, ನೆನಪಿನ ಶಕ್ತಿಯ ವೃದ್ಧಿ, ನರಮಂಡಲ ಸ್ವಚ್ಛ ಹಾಗೂ ಸಶಕ್ತವಾಗುತ್ತದೆ, ಖಿನ್ನತೆ ದೂರ, ಮನಸ್ಸು ಶಾಂತವಾಗಿರುತ್ತದೆ. ಮತ್ತು ಸಹಶೀಲನೆ ಬೆಳೆಯುತ್ತದೆ. ಹೈಪರ್ ಟೆನ್ಶನ್, ಬಿಪಿ ಮತ್ತು ಕಡಿಮೆಯಾಗುವುದು ಆತ್ಮಜ್ಞಾನ ಪ್ರಾಪ್ತಿಯಾಗುತ್ತದೆ ಮತ್ತು ಮರಣಭಯ ದೂರವಾಗುತ್ತದೆ.

ಇದು ಮಾಡಲು ಕೂಡ ಸುಲಭ ಸರಳವಾಗಿರುವಂತೆಯೇ ಮೇಲೆ ಹೇಳಿದ ಹಾಗೆ ಇದರ ಪ್ರಯೋಜನಗಳು ಮಾತ್ರ ಅದ್ಭುತವಾಗಿದೆ. ಮತ್ತು ʼಗಾಯತ್ರಿ ಮಂತ್ರʼ ಮತ್ತು ʼಹನುಮಾನ್ ಚಾಲೀಸಾʼಗಳ ಮೇಲೆ ವೈಜ್ಞಾನಿಕ ಸಂಶೋಧನೆ ಮಾಡುತ್ತಿದ್ದ (ಆಗಿನ ಬಳ್ಳಾರಿ ಜಿಲ್ಲೆಯ) ಕೂಡ್ಲಗಿಯ ಶ್ರೀರಾಮಚಂದ್ರ ಗುರೂಜಿಯವರು 2015ರ ಆಗಸ್ಟ್ ತಿಂಗಳಲ್ಲಿ ಕೂಡಲಸಂಗಮದಲ್ಲಿ ಒಂದು ಕಾರ್ಯಗಾರವನ್ನು ನಡೆಸಿಕೊಟ್ಟಿದ್ದರು ಅವರು ಈ ಸಂದರ್ಭದಲ್ಲಿ ನಾಡಿಶೋಧನಾ ಪ್ರಾಣಾಯಾಮದ ಬಗ್ಗೆ ಹೇಳಿದ ತುಂಬಾ ಮಹತ್ವದ ವಿಷಯವಾಗಿ ಓದುಗರಿಗಾಗಿ ಇಲ್ಲಿ ತಿಳಿಸಿರುವವು ತಿಳಿಸುವೆ.

” ನಮ್ಮ ಶರೀರದಲ್ಲಿ, ಪರ್ಯಾಯವಾಗಿ, ನಿಗದಿತ ಅವಧಿಯಲ್ಲಿ ಅಂತರದಲ್ಲಿ, ತಲಾ ಸುಮಾರು 40 – 45 ನಿಮಿಷಗಳ ಕಾಲ ಒಮ್ಮೆ ಧನಾತ್ಮಕ ನಂತರ ಋಣಾತ್ಮಕ ಶಕ್ತಿಗಳ ಪ್ರಭುತ್ವ ಅಥವಾ ಪ್ರಭಾವ ಮೇಲುಗೈ ಸಾಧಿಸಲ್ಪಡುತ್ತಾ ಇರುತ್ತದೆ. ಇದು ಸದಾಕಾಲವು ಪರ್ಯಾಯವಾಗಿ ಬದಲಾಗುತ ನಡೆಯುತ್ತಿರುವ ಪ್ರಕ್ರಿಯೆಯಾಗಿ̧̧̧ದ್ದು, ಅದು ವ್ಯಕ್ತಿಯ ಆಯ ಕ್ಷಣದಲ್ಲಿ ದೈನಂದಿನ ನಡೆ-ನುಡಿ ವ್ಯವಹಾರ ತೆಗೆದುಕೊಳ್ಳುವ ನಿರ್ಧಾರ ಹೀಗೆ ಎಲ್ಲಾದರ ಮೇಲು ತನ್ನ ಪ್ರಭಾವವನ್ನು ಬೀರುತ್ತಿರುತ್ತದೆ. ಯಾವಾಗ ನಾವು ನಾಡಿಶೋಧನ ಪ್ರಾಣಾಯಾಮ ಮಾಡುತ್ತೇವೆಯೋ,  ಆಗ ಅದು ನಿಸ್ಪೃಹ,  ತಟಸ್ಥ, ಅಥವಾ ಸಮತೋಲನವಾಗಿರುತ್ತದೆ ಆದ್ದರಿಂದ ವಿಶೇಷವಾಗಿ ನಾವು ಪೂಜೆ ಪ್ರಾರ್ಥನೆ ಆರಾಧನೆ ಇತ್ಯಾದಿ ಮಾಡುವ ಪೂರ್ವದಲ್ಲಿ ಕನಿಷ್ಠ ಒಂದು ಐದು ನಿಮಿಷಗಳ ನಾಡಿಶೋಧನ ಪ್ರಾಣಾಯಾಮ ಮಾಡಿ ಆನಂತರ ಅವುಗಳನ್ನು ಮಾಡಿದರೆ ಆ ಪ್ರಾರ್ಥನೆ ಅಥವಾ ಪೂಜೆ ಹೆಚ್ಚು ಫಲಪ್ರದವಾಗುತ್ತದೆ.

ಇನ್ನೂ ಇನ್ನೊಂದು ಅಷ್ಟೇ ಮಹತ್ವದ ವಿಷಯ ಪುನಃ ಪುನಃ ಹೇಳಿದರು ತಪ್ಪಿಲ್ಲ ಅದು ಈ ಸಾಮಾನ್ಯ ಮತ್ತು ನಾಡಿಶೋಧನಾ ಪ್ರಾಣಯಾಮಗಳನ್ನು ಕುಂಭಕ ರಹಿತವಾಗಿ ಯಾವಾಗ ಬೇಕಾದರೂ ಎಷ್ಟು ಬೇಕಾದರೂ ಮಾಡಬಹುದು ಎಂಬುದು ಅದನ್ನು ಯಾವುದೇ ಅದನ್ನು ಮಾಡುವುದೇ ಆಗಲಿ ಸಾಮಾನ್ಯ ಪ್ರಣಯಮದ ಬದಲು ನಾಡಿಶೋಧನ ಪ್ರಾಣಾಯಾಮವು ಹೆಚ್ಚು ಪ್ರಯೋಜನಕಾರಿಯಾಗಿದ್ದು ಅದನ್ನು ಮಾಡಬೇಕು. ಪ್ರಯತ್ನಿಸಿ..

ಭ್ರಾಮರೀಪ್ರಾಣಾಯಾಮ :-  

ಮೇಲಿನಂತೆ ಅನುಕೂಲಕರವಾದ ಆಸನದಲ್ಲಿ ಕುಳಿತು ಕಣ್ಣು, ಕಿವಿಗಳನ್ನು ಮುಚ್ಚಿಕೊಂಡು ಅಂದರೆ ಷಣ್ಮುಖೀ ಮುದ್ರೆ ಮಾಡುತ್ತಾ, ದೀರ್ಘವಾಗಿ ಉಸಿರು ತೆಗೆದುಕೊಂಡು ನಿಧಾನವಾಗಿ ಮೂಗಿನಿಂದ ಭ್ರಮರದಂತೆ ದುಂಬಿ ಅಥವಾ ಗುಂಗಿ ಹುಳುವಿನಂತೆ ಶಬ್ದವಾಗಿ ಸ್ವಾಶಕೋಶಗಳು ಖಾಲಿಯಾಗುವವರೆಗೆ ಉಸಿರು ಬಿಡಬೇಕು. ಇದೇ ರೀತಿ ಎಂಟು ಹತ್ತು ಸಲ ಪುನರಾವರ್ತಿಸಬಹುದು ಈ ಪ್ರಾಣಾಯಾಮ ಮಾಡುವಾಗ ಇಷ್ಟದೈವವನ್ನು ನೆನೆಯುತ್ತಾ ಆ ಶಬ್ದದಲ್ಲಿ ಓಂಕಾರವನ್ನು ಸೇರಿಸಿಕೊಂಡು ಧ್ಯಾನಿಸಬಹುದು.

ಪ್ರಯೋಜನಗಳು :-

ಇದು ನಿದ್ರಾಹೀನತೆಗೆ ಅತ್ಯುತ್ತಮ ಔಷಧಿ ಮಲಗುವಾಗ ಮುಂಚೆ ಹಾಸಿಗೆಯಲ್ಲಿ ವಜ್ರಸನ ಕುಳಿತುಕೊಂಡು 10 ನಿಮಿಷಗಳ ಕಾಲ ಇದನ್ನು ಮಾಡಬೇಕು. ತಲೆಗೆ ಜೊತೆಗೆ ತಲೆಹುಣ್ಣು (brain tumer-ಬ್ರೈನ್ ಟ್ಯೂಮರ್) ಮತ್ತು ಪಕ್ಷಗಾತ (ಪಾಶ್ವ ವಾಯು ಅಥವಾ ಲಕ್ವ)ಗಳ ಸಂಭವನೀಯತೆ ಕಡಿಮೆ ಮೈಂಡ್ ಫ್ರೆಶ್ ಆಗುತ್ತದೆ. ಡಿಪ್ರೆಶನ್ ಹೃದಯ ಮತ್ತು ನೇತ್ರ ಸಮಸ್ಯೆ ಇರುವವರು ಹೆಚ್ಚು ಅಂದರೆ ಸುಮಾರು 20-25 ಸಲ ಮಾಡಿದರೆ ಉತ್ತಮ ಫಲವೆಂದು ಹೇಳಲಾಗುತ್ತದೆ.

ಉದ್ಗೀತ (ಸಬೀಜ ಪ್ರಾಣಾಯಾಮ) :-

ಯಾವುದೇ ಅನುಕೂಲಕರವಾದ ಆಸನದಲ್ಲಿ ಕುಳಿತು ಧ್ಯಾನ ಮುದ್ರೆಯಲ್ಲಿ ಕಣ್ಣು ಮುಚ್ಚಿಕೊಂಡು ಐದಾರು ಸಲ ಓಂಕಾರವನ್ನು ನಿಧಾನವಾಗಿ ಮತ್ತು ದೀರ್ಘವಾಗಿ ಉಚ್ಚರಿಸುತ್ತಾ ಗಮನವನ್ನು ಅಜ್ಞಾಚಕ್ರದ ಮೇಲೆ ಹಣೆಯಲ್ಲಿ ಹುಬ್ಬುಗಳ ನಡುವೆ ಕುಂಕುಮ ಮತ್ತು ತಿಲಕ ಬಿಡುವ ಸ್ಥಳ ಕೇಂದ್ರೀಕರಿಸಿ ಇಷ್ಟ ದೈವ ಅಥವಾ ದೇವರನ್ನು ನೆನೆಯುವುದು.

ಪ್ರಣವ ಧ್ಯಾನ :-

ಮೇಲಿನಂತೆಯೇ ಆದರೆ ಅದನ್ನೇ ಐದಾರು ಸಲ ನಿಶಬ್ದವಾಗಿ ಓಂಕಾರವನ್ನು ಧ್ಯಾನಿಸುತ್ತ ಇಷ್ಟದೈವ ಅಥವಾ ದೇವರನ್ನು ನೆನೆಯುವುದು. ಪ್ರಾಣಾಯಾಮವು ಆತ್ಮ ಬೇಳಕಿಂಡಿಯಾಗಿದ್ದು, ಅದನ್ನ “ಮಹಾತಪಸ್ಸು” ಮತ್ತು “ಆತ್ಮಜ್ಞಾನ ಮಾರ್ಗ” ಅಥವಾ “ಬ್ರಹ್ಮವಿದ್ಯೆ” ಎಂದು ಕರೆದಿದ್ದಾರೆ… ಆಗ ಮೆದುಳು ಕೇವಲ ಪ್ರೇಕ್ಷಕ ಮಾತ್ರ ಪಾತ್ರಧಾರಿಯಲ್ಲ, ಕೇವಲ ಸಾಕ್ಷಿ ಮಾತ್ರವಾಗಿರಬೇಕು. ಶ್ವಾಸಕೋಶಗಳಷ್ಟೇ ಪಾತ್ರಧಾರಿಗಳು ಮೆದುಳು ಕೇವಲ ವ್ಯವಸ್ಥಾಪಕ ಎನ್ನಬಹುದು. ಈ ಮೇಲಿನ ಉದ್ಗೀತ ಪ್ರಣವಧ್ಯಾನಗಳನ್ನು ಇಷ್ಟಾನುಸಾರ ಧ್ಯಾನ ಸಾಧನಗೆ ಮಾಡುತ್ತ ನಿಧಾನವಾಗಿ ಹೆಚ್ಚಿಸುತ್ತಾ ಹೋಗಬಹುದು. ಕೊನೆ ಪ್ರಾರ್ಥನೆಯಲ್ಲಿ ಮುಕ್ತಾಯಗೊಳಿಸಬಹುದು.