ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಅವನು : ನನಗೆ ನಿನ್ನೆಯಿಂದ ತುಂಬಾ ಹಲ್ಲು ನೋವು ವೈದ್ಯರನ್ನು ಕಂಡು ಬಂದೆ, ನೋವಿನ್ನೂ ಕಡಿಮೆ ಆಗಲೇ ಇಲ್ಲ.

ಇವನು : ನಾನು ಹಲ್ಲು ನೋವು ಬಂದರೆ ವೈದ್ಯರ ಬಳಿ ಹೋಗುವುದೇ ಇಲ್ಲ. ನನ್ನ ಹೆಂಡತಿ ನನಗೆ ಬಲವಾಗಿ ಮುತ್ತು ಕೊಡುತ್ತಾಳೆ. ಆಗ ತಂತಾನೇ ಹಲ್ಲು ನೋವು ನಿಂತು ಹೋಗುತ್ತದೆ.

****

ಮಗ : ಅಪ್ಪ ನಾನು ಗಾಂಧೀಜಿ ತರ ಆಗಬೇಕಂತ ಇದ್ದೀನಿ.

ಜಗ್ಗು : ಆಗಪ್ಪ ಒಳ್ಳೆಯದು.

ಮಗ : ಹಾಗಾದ್ರೆ ಗಾಂಧೀಜಿ 12 ವರ್ಷಕ್ಕೆ ಮದುವೆಯಾದರೂ ನನಗೂ ಮದುವೆ ಮಾಡಪ್ಪ ಬೇಗ….!!

****

ಮಗ : ತಂದೆ, ಮಗ ಇಬ್ಬರಲ್ಲಿ ಯಾರು ಬುದ್ಧಿವಂತರಾಗಿರುತ್ತಾರೆ? 

ಅಪ್ಪ: ತಂದೆ. ಯಾಕಂದರೆ, ಅವನು ಮಗನಿಗಿಂತ ಜಾಸ್ತಿ ಓದಿರ್ತಾರೆ ಅನುಭವವನ್ನು ಜಾಸ್ತಿ .

ಮಗ : ತಪ್ಪು.ಮಗನೇ ಬುದ್ಧಿವಂತ. ಪೆನ್ಸಿಲ್ ಕಂಡು ಹಿಡಿದವರು ಯಾರು ?

ಅಪ್ಪ : ಪ್ಲೆಮಿಂಗ್.

ಮಗ : ಅವರಪ್ಪ ಯಾಕೆ ಕಂಡುಹಿಡಿಯಲಿಲ್ಲ. ಅವನು ಮೊದಲೇ ಹುಟ್ಟಿದವನಲ್ಲ.

****

ಪೊಲೀಸ್ ಇನ್ಸ್ಪೆಕ್ಟರ್ : ಕ್ಷಮಿಸಿ ಮೇಡಮ್, ಈ ಕೊಳದಲ್ಲಿ ಈಜುವುದು ನಿಷೇಧಿಸಲಾಗಿದೆ.

ಮೇಡಂ : ನಾನು ಬಟ್ಟೆ ಬದಲಾಯಿಸುವಾಗಲೇ ಏಕೆ ಹೇಳಲಿಲ್ಲ…

ಪೊಲೀಸ್ ಇನ್ಸ್ಪೆಕ್ಟರ್ : ಬಟ್ಟೆ ಬದಲಾಯಿಸುವುದನ್ನು ನಿಷೇಧಿಸುವ ಕಾನೂನು ಇಲ್ಲ.

ಹಿಂದಿನ ಲೇಖನನಾಡಿ ದೋಷ ಅಥವಾ ನಾಡಿ ಶುದ್ದಿ ಪ್ರಾಣಾಯಾಮ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ