ಚೆನ್ನೈ: ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನದ ಕಥೆಯನ್ನು ಆಧಾರಿಸಿರುವ ʼ800ʼ ಸಿನಿಮಾದ ಟ್ರೇಲರ್ ಮಂಗಳವಾರ ರಿಲೀಸ್ ಆಗಿದೆ.
ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಿನಿಮಾದ ಟ್ರೇಲರ್ ನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಮುರಳೀಧರನ್ ಹುಟ್ಟಿನಿಂದ ತಮಿಳಿನವರಾಗಿದ್ದು, ಚೆನ್ನೈ ನಿವಾಸಿಯನ್ನು ವಿವಾಹವಾಗಿದ್ದಾರೆ. ಸಿನಿಮಾದಲ್ಲಿ ಮುರುಳೀಧರನ್ ಅವರ ಬಾಲ್ಯದ ದಿನಗಳು ಹಾಗೂ ಕ್ರಿಕೆಟ್ ಜೀವನದಲ್ಲಿನ ಸಾಧನೆಯ ದಿನಗಳು ಹಾಗೂ ವೃತ್ತಿ ಬದುಕಿನಲ್ಲಾದ ಪ್ರಮುಖ ಘಟನಾವಳಿಗಳ ಅಂಶಗಳನ್ನು ತೋರಿಸಲಾಗಿದೆ. ಸಂಕಷ್ಟ ಹಾಗೂ ಸವಾಲನ್ನು ಮೀರಿ ಕ್ರಿಕೆಟ್ ಲೋಕದಲ್ಲಿ ದಿಗ್ಗಜರಾಗಿ ಬೆಳೆದ ಮುರುಳೀಧರನ್ ಅವರ ಪಾತ್ರದ ಝಲಕ್ ನ್ನು ಸಿನಿಮಾದ ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ‘ಸ್ಲಮ್ಡಾಗ್ ಮಿಲಿಯನೇರ್’ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ನಟ ಮಧುರ್ ಮಿತ್ತಲ್ ಅವರು ಮುರುಳೀಧರನ್ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಮುರಳೀಧರನ್ 133 ಟೆಸ್ಟ್, 350 ಏಕದಿನ ಮತ್ತು 12 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ. ಅವರು ಒಟ್ಟು ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ 534 ಮತ್ತು T20 ಗಳಲ್ಲಿ 13 ವಿಕೆಟ್ ಗಳನ್ನು ಪಡೆದಿದ್ದಾರೆ. 1996 ರಲ್ಲಿ ಶ್ರೀಲಂಕಾದ ಏಕದಿನ ವಿಶ್ವಕಪ್ ವಿಜಯದ ಭಾಗವಾಗಿದ್ದರು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.