ಮನೆ ಯೋಗಾಸನ ಲಘು ಅಥವಾ ಸಂಕ್ಷಿಪ್ತ ವ್ಯಾಯಾಮಗಳು: ಭಾಗ-2

ಲಘು ಅಥವಾ ಸಂಕ್ಷಿಪ್ತ ವ್ಯಾಯಾಮಗಳು: ಭಾಗ-2

0

8. ಕೈಗಳನ್ನು ಮಣಕೈ ಹತ್ತಿರ ಮಡಚಿಕೊಂಡು ಜೋರಾಗಿ ಎದೆ ಎರಡು ಪಕ್ಕಗಳಲ್ಲಿ ಹಿಂದಿನಿಂದ ಮುಂದೆ ಮತ್ತು ಮುಂದಿನದ ಹಿಂದೆ ವ್ರತಕಾರವಾಗಿ ತಿರುಗಿಸುವುದು (ಎರಡು ದಿಶಗಳಲ್ಲಿ 12 ಸುತ್ತುಗಳಂತೆ)….

9. ಎರಡು ಕೈಗಳನ್ನು ಬೆರಳುಗಳನ್ನು ಪರಸ್ಪರ ಹೆಣೆದುಕೊಂಡು (ಲಾಕ್ ಮಾಡಿಕೊಂಡು) ಸೊಂಟದ ಮೇಲ್ಭಾಗದಲ್ಲಿ ಭೂಮಿಗೆ ಸಮಾನಾಂತರವಾಗಿ ಮುಂದೆ ಚಾಚಿ ಸೊಂಟದ ಎರಡು ಬದಿಗಳಿಗೆ, ಲಂಬವಾಗಿ ತಿರುಗಿಸುತ್ತಾ ಸಾಧ್ಯವಾದಷ್ಟು ಹಿಂದಕ್ಕೆ ಹೊರಳಿ ನೋಡುವುದು (ಎಡ ಮತ್ತು ಬಲ ಎರಡು ಬದಿಗೆ ತಲಾ 12 ಸಲದಂತೆ)

10. ಎರಡು ಕೈಗಳನ್ನು ಸೊಂಟದ ಮೇಲೆಸಿಕೊಂಡು ಸೊಂಟವನ್ನು ವೃತ್ತಾಕಾರವಾಗಿ ಎರಡು ದೇಶಗಳಲ್ಲಿ ತಲಾ 12 ಸುತ್ತುತ್ತಿರುವುದು.

11. ಪಾದಗಳನ್ನು ಹತ್ತಿರ ಬಿಡಿಸಿಕೊಂಡು ಸ್ವಲ್ಪ ಮುಂದಕ್ಕೆ ಭಾಗಿ 2 ಕೈಗಳಿಂದ ಮಂಡಿಗಳ ಮೇಲ್ಬಾಗದಲ್ಲಿ ಹಿಡಿದುಕೊಂಡು ಎರಡು ಮಂಡಿಗಳನ್ನು ಒಟ್ಟಿಗೆ ವೃತ್ತಾಕಾರವಾಗಿ ಎರಡು ದಿಶೆಗಳಲ್ಲಿ ತಲಾ 12 ಸತ್ತುಗಳನ್ನು ತಿರುಗಿಸುವುದು.

12. ಈಗ ಎರಡೂ ಪಾದಗಳನ್ನು (ಕಣಕಾಲಿನ ಕೆಳ ಜೋಡಣೆಗಳನ್ನು) ವೃತ್ತಾಕಾರವಾಗಿ ಎರಡೂ ದಿಶೆಗಳಲ್ಲಿ ತಲಾ 12 ಸಲದಂತೆ ತಿರುಗಿಸುವುದು.

13. ಈಗ ಎರಡು ಕೈಗಳನ್ನು ಮೇಲೆತ್ತಿ ಬೆರಳುಗಳನ್ನು ಪರಸ್ಪರ ಹೆಣೆದುಕೊಂಡು ನೇರವಾಗಿ ನಿಂತುಕೊಂಡಿರುವಂತೆಯೇ ಸೊಂಟದ ಮೇಲ್ಭಾಗವನ್ನು ಸಾಧ್ಯವಾದಷ್ಟು ಹಿಂದಕ್ಕೆ ಭಾಗಿ ಕೊಂಡು ಗೋಣುಸಹಿತವಾಗಿ ಎದೆಯ ಭಾಗವನ್ನು, ಎರಡು ಕೈಗಳ ಸಹಿತ ಎಡಕ್ಕೂ ಬಲಕ್ಕು ಹೊರಡಿಸಬೇಕು. (ತಲಾ 12 ಸಲ) ಇದನ್ನು ನಿಧಾನವಾಗಿ ಹೆಚ್ಚಿಸುತ್ತಾ ಹೋಗಿ ತಲಾ 25-30 ಸಲ ಮಾಡಿದರು. ಒಳ್ಳೆಯದು ಪ್ರಯತ್ನಿಸಬಹುದು.

14. ಕಾಲುಗಳನ್ನು ಸುಮಾರು ಒಂದು ಅಡಿ ಎಷ್ಟು ಅಗಲಿಸಿಟ್ಟುಕೊಂಡು ಮುಂದಕ್ಕೆ ಬಾಗಿ ಕೊಂಡು, ಎಡಗಾಲಿನಿಂದ ಬಲಪಾದವನ್ನು ಮುಟ್ಟುತ್ತ, ಆಗ ಅದೇ ಸಮಯಕ್ಕೆ ಬಲಗೈ ಮೇಲಕ್ಕೆ ಮತ್ತು ಬೋನು ತಿರುಗಿಸಿ ಮೇಲೆ ನೋಡುತ್ತಾ, ಪರ್ಯಾಯವಾಗಿ ಬಲಗೈನಿಂದ ಎಡಪಾದವನ್ನು ಮುಟ್ಟುತ್ತಾ, ಆಗ ಅದೇ ಸಮಯಕ್ಕೆ ಎಡಗೈ ಮೇಲಕ್ಕೆ ಮತ್ತು ಗೋಣುತಿರುಗಿಸಿ ಮೇಲೆ ನೋಡುತ್ತಾ ಒಂದರ ನಂತರ ಇನ್ನೊಂದರಂತೆ ಪ್ರತಿಯೊಂದು 12 ಸಲದಂತೆ ಮಾಡಬೇಕು. ಇದನ್ನು ಕೂಡ ನಿಧಾನವಾಗಿ ಹೆಚ್ಚಿಸುತ್ತಾ ತಲಾ 25-30 ಸಲ ಮಾಡಿದರು ಒಳ್ಳೆಯದು…..

15. ಕೊನೆಯದಾಗಿ ಅರ್ಧಬಸ್ತಿಗಳನ್ನು (ಊಟಾಬಸಿ, ಬಸ್ಕಿ ಅಥವಾ ಬೈಠಕ್) ಮಾಡುವುದು. ಆದರೆ ಇವು 12 ಅಲ್ಲ 24 ಕೂಡ ಅಲ್ಲ. ಹಾಗಾದ್ರೆ ಎಷ್ಟು ಕೇವಲ ಒಂದು ನೂರು ಮಾತ್ರ, ಗಾಬರಿಯಾಗಕೊಡದು. ಪೂರ್ಣಾಂಕ ಬಸ್ಕಿಯಿಂದ ಬಸ್ತಿಗಳನ್ನು ತೆಗೆಯುವುದು. ತುಂಬಾ ಸರಳ ಪ್ರಯತ್ನಿಸಿ ಮೊದಲು 25 ರಿಂದ ಪ್ರಾರಂಭಿಸಿ ನಂತರ ನಿಧಾನವಾಗಿ ಹೆಚ್ಚಿಸುತ್ತಾ ಹೋಗಬೇಕು…..

ಮೇಲಿನ ಎಲ್ಲ ವ್ಯಾಯಾಮಗಳು ಸೇರಿ ಮೊದಮೊದಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಅನ್ನಿಸಿದರು ಮುಂದೆ ರೂಢಿಯಾದಂತೆ ಗರಿಷ್ಠ 6 ರಿಂದ 8 ನಿಮಿಷಗಳು ಇನ್ನೂ ನಿಧಾನವಾಗಿ ಮಾಡಿದರು ಕೂಡ 10 ನಿಮಿಷಗಳಲ್ಲಿ ಎಲ್ಲ ಮುಗಿಯುವವು. ಇವುಗಳನ್ನು ಮಾತ್ರ ತಪ್ಪದೆ ಮಾಡುತ್ತಿದ್ದರೆ ತುಂಬಾ ಒಳ್ಳೆಯದು

ಇನ್ನೊಂದು ವಿಷಯ, ಈಜು ಅಥವಾ (ಸ್ವಿಮ್ಮಿಂಗ್-swimming)  ಅತ್ಯುತ್ಕೃಷ್ಠವಾದ ವ್ಯಾಯಾಮವಾಗಿದೆ ಗೊತ್ತಲ್ಲ. ನಿಮ್ಮ ಮಕ್ಕಳಿಗೂ ಕಳಿಸಿರಿ.