ಮನೆ ಅಪರಾಧ ಭೀಕರ ಅಪಘಾತ: ನವ ವರ ಸೇರಿ ಮೂವರು ಸ್ಥಳದಲ್ಲೇ ಸಾವು

ಭೀಕರ ಅಪಘಾತ: ನವ ವರ ಸೇರಿ ಮೂವರು ಸ್ಥಳದಲ್ಲೇ ಸಾವು

0

ತುಮಕೂರು(Tumkur): ಲಾರಿ(Lorry) ಹಾಗೂ ಇನೋವಾ ಕಾರಿ(Innova car) ನಡುವೆ ನಡೆದ ಭೀಕರ ಅಪಘಾತದಲ್ಲಿ(Accident) ನವ ವರ ಹಾಗೂ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ( 3 Death) ಘಟನೆ ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಚಿಕ್ಕ ಶೆಟ್ಟಿಕೆರೆ ಬಳಿ ನಡೆದಿದೆ.

ಮೃತರನ್ನು ಅರಸೀಕೆರೆ ತಾಲೂಕಿನ ಕಮಲಾಪುರ ವಾಸಿ ನಂಜುಂಡಪ್ಪ ಅವರ ಮಗ ಪ್ರಸನ್ನಕುಮಾರ್ (30), ಸಂತೋಷ್ (29), ಚಾಲಕ ಚಿನ್ನಪ್ಪ (30) ಎಂದು ಗುರುತಿಸಲಾಗಿದೆ.

ವಾರದ ಹಿಂದೆಯಷ್ಟೇ ಅರಸೀಕೆರೆ ತಾಲೂಕಿನ ಕಮಲಾಪುರ ಗ್ರಾಮದ ಪ್ರಸನ್ನಕುಮಾರ್​ ಅವರಿಗೆ ಅದೇ ಗ್ರಾಮದ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ ಎಂಬುವವರ ಜೊತೆ ಮದುವೆಯಾಗಿತ್ತು. ಮನೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬೆಂಗಳೂರಿನಿಂದ ಕಮಲಾಪುರಕ್ಕೆ ಕಾರಿನಲ್ಲಿ ಆಗಮಿಸಿದ್ದರು. ನಸುಕಿನ ಜಾವ ಬೆಂಗಳೂರಿನತ್ತ ಮಾಯಸಂದ್ರ ಮಾರ್ಗವಾಗಿ ಸಂಬಂಧಿ ಸಂತೋಷ್ ಹಾಗೂ ಚಾಲಕ ಚಿನ್ನಪ್ಪ ಅವರೊಂದಿಗೆ ಪ್ರಯಾಣ ಬೆಳೆಸಿದ್ದರು.

ಚಿಕ್ಕ ಶೆಟ್ಟಿಕೆರೆ ಬಳಿ ಮೈಸೂರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಪಿಎಸ್ ಐ ಅಕ್ರಮ ನೇಮಕಾತಿ: ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ
ಮುಂದಿನ ಲೇಖನಪಂಜಾಬ್​​: ಬಸ್‌ಗಳಿಗೆ ಬೆಂಕಿ, ಓರ್ವ ಸಜೀವ ದಹನ