ಮನೆ ರಾಜ್ಯ ಖಾಸಗಿ ಸಾರಿಗೆಗಳ ಒಕ್ಕೂಟದ ಪ್ರತಿಭಟನೆ: ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಅನಿಲ್ ಕುಂಬ್ಳೆ

ಖಾಸಗಿ ಸಾರಿಗೆಗಳ ಒಕ್ಕೂಟದ ಪ್ರತಿಭಟನೆ: ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಅನಿಲ್ ಕುಂಬ್ಳೆ

0

ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಸಾರಿಗೆ ಬಂದ್‌ ನಿಂದಾಗಿ ಆಟೋ, ಕ್ಯಾಬ್ ನೆಚ್ಚಿಕೊಂಡಿದ್ದ ಸಾವಿರಾರು ಜನ ಸಂಕಷ್ಟಕ್ಕೀಡಾಗಿದ್ದಾರೆ.

ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೂ ಬಂದ್ ಬಿಸಿ ತಟ್ಟಿದ್ದು, ದೇವನಹಳ್ಳಿ‌ ವಿಮಾನ ನಿಲ್ದಾಣದಿಂ ಕ್ಯಾಬ್ ಸಿಗದ ಪರಿಣಾಮ ಮಾಜಿ ಕ್ರಿಕೆಟಿಗ ಬಿಎಂಟಿಸಿ ಬಸ್ ಹತ್ತಿದ್ದಾರೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕುಂಬ್ಳೆ ಅವರಿಗೆ ಬೆಂಗಳೂರಿನ ತಮ್ಮ ನಿವಾಸಕ್ಕೆ ತೆರಳಲು ಕ್ಯಾಬ್ ಸಿಗಲಿಲ್ಲ. ಇದರಿಂದಾಗಿ ಅನಿಲ್ ಕುಂಬ್ಳೆ ಬಿಎಂಟಿಸಿ ವಾಯುವಜ್ರ ಬಸ್ ಏರಿದ್ದಾರೆ.

ಬಸ್‌ ನಲ್ಲಿ ಪ್ರಯಾಣಿಸಿದ ಬಗ್ಗೆ ತಮ್ಮ ಟ್ವಿಟರ್‌ ನಲ್ಲಿ ಫೋಟೊ ಹಂಚಿಕೊಂಡಿರುವ ಕುಂಬ್ಳೆ, ‘ಇಂದು ವಿಮಾನ ನಿಲ್ದಾಣದಿಂದ ಮರಳಿ ಮನೆಗೆ ಬಿಎಂಟಿಸಿ ಪಯಣ’ ಎಂದು ಬರೆದುಕೊಂಡಿದ್ದಾರೆ.