ಮನೆ ದೇವರ ನಾಮ ಶ್ರೀ ಹರೀ ಶ್ರೀ ಹರೀ…. ಶ್ರೀ ಹರಿ….|

ಶ್ರೀ ಹರೀ ಶ್ರೀ ಹರೀ…. ಶ್ರೀ ಹರಿ….|

0

ಹರಿಯುವ ನದಿಯು ಹರಿಷದಲಿ |

ತನ್ನ ಶೃತಿಯನು ಸೇರಿಸಿ ಹಾಡುತಿರೆ |

ಬೀಸುವ ಗಾಳಿಯು ಜೊತೆಯಾಗಿ |

ಧನಿಯನು ಕೂಡಿಸಿ ಹಾಡುತಿರೆ |

ಪ್ರಕೃತಿಯೆ ನಿನ್ನೊಡನೊಂದಾಗಿ,

ಆ ಶ್ರೀಪತಿ ಧ್ಯಾನವ ಮಾಡುತಿದೆ ||

ಹರಿ ಹರಿ ಎನ್ನುತ ನೀ ಹಾಡು,

ಹರಿ ನಾಮದ ಮಹಿಮೆಯ ನೀ ನೋಡು||

ಬಣ್ಣಿಸಲಾಗದ ಆನಂದ ನೀ ಕಾಣುವೆ ಅಗ ಓ ಕಂದ ||

ಹರಿ ಹರಿ ಎನ್ನುತ ನೀ ಹಾಡು |

ಹರಿ ನಾಮದ ಮಹಿಮೆಯ ನೀ ನೋಡು |

ಪ್ರೇಮದಿ ಕರೆದರೆ ಬಾ ಎಂದು |

ಎಲ್ಲದರೂ ಅವನು ಆಲಿಸುವ |

ಅಮ್ಮನ ಕೂಗಿಗೆ ಓ ಗೊಡುವ |

ಹಸು ಕಂದನ ಹಾಗೆ ಬಳಿ ಬರುವ |

ನಿಜ ಬಕ್ತಿಗೆ ಅವನು ಸೋಲುವುದು,

ತನ್ನ ಭಕ್ತರನೆ ಕಾಪಾಡುವುದು || ಹರಿ ಹರಿ ||