ಮನೆ ದೇವರ ನಾಮ ಹೇ ಗುರುವೆ

ಹೇ ಗುರುವೆ

0

ಹೇ ಗುರುವೆ ಬಾರೋ ಪ್ರಭುವೆ,

ಹೇ ವಿಭುವೆ ತೋರೋ ದಯವೆ ||ಪ

ಅಂಧಕಾರದಲ್ಲಿ ಜೀವ ಬೇಯುತಿದೆ,

ಅಂಧತ್ವದಲಿ ದಾರಿ ಸಾಹುತಿದೆ,

ಗೊತ್ತಿಲ್ಲದ ಗುರಿಯಿಲ್ಲದ ಹೊತ್ತು….,

ಮತ್ತಿನಲಿ ದಿನ ಕಳೆಯುತಿದೆ ||1

ನಿಮ್ಮ ಅಂತಃಕರಿಣದ ಜ್ಯೋತಿ,

ನಮಗಾಗಿರಲಿ ದಾರಿ ಬೆಳಗೋ ಜ್ಯೋತಿ,

ಸತ್ಯ ಮಾರ್ಗದಲಿ ನಮ್ಮನು ನಡೆಸು,

ನಿತ್ಯ ನಿನ್ನ ದರಿಶನವ ಕರುಣಿಸು || 2

ಪ್ರಭು ನಿನ್ನ ಶಕ್ತಿಯಲಿ ಎಲ್ಲ ಇಹುದು,

ಗುರು ನೀನೋಬ್ಬನೆ ಸತತ ಸಲುಹುವದು,

ರಾಘವೇಂದ್ರ ಗುರುವೆ ನಿನ್ನ ಮಹಿಮೆ,

ತೋರಿಸೋ ಜಾಹ್ನವಿ ವಿಠ್ಠಲನ ಒಲುಮೆ || 3