ಮನೆ ಸುದ್ದಿ ಜಾಲ ಪಾಕಿಸ್ತಾನ: ಇತಿಹಾಸದಲ್ಲೆ ಮೊದಲ ಬಾರಿಗೆ ಭುವನ ಸುಂದರಿ ಸ್ಪರ್ಧೆಗೆ ಪಾಕ್ ಪ್ರವೇಶ

ಪಾಕಿಸ್ತಾನ: ಇತಿಹಾಸದಲ್ಲೆ ಮೊದಲ ಬಾರಿಗೆ ಭುವನ ಸುಂದರಿ ಸ್ಪರ್ಧೆಗೆ ಪಾಕ್ ಪ್ರವೇಶ

0

ಅಚ್ಚರಿಯ ಬೆಳವಣಿಗೆ ಎಂಬಂತೆ ಇತಿಹಾಸದಲ್ಲೆ ಮೊದಲ ಬಾರಿಗೆ ಪಾಕಿಸ್ತಾನದ ಯುವತಿಯೊಬ್ಬರು “ಭುವನ ಸುಂದರಿ” ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ಇತ್ತೀಚಿಗೆ ಮಾಲ್ಡಿವ್ಸ್ ನಲ್ಲಿ ನಡೆದ ಮೊದಲ “ಮಿಸ್ ಯೂನಿವರ್ಸ್ ಪಾಕಿಸ್ತಾನ್” ಸ್ಪರ್ಧೆಯಲ್ಲಿ ಮಾಡೆಲ್ ಎರಿಕಾ ರಾಬಿನ್ (24) ವಿಜೇತರಾಗಿದ್ದು, ಇದೇ ವರ್ಷದ ನವೆಂಬರ್ನಲ್ಲಿ ಎಲ್ ಸಲ್ವಾಡಾರ್ ನಲ್ಲಿ ನಡೆಯುವ 72ನೇ ಜಾಗತಿಕ ಭುವನ ಸುಂದರಿ ಸ್ಪರ್ಧೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಲಿದ್ದಾರೆ.

 ಕರಾಚಿಯ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಎರಿಕಾ ಪಂಜಾಬ್ ನ ಚಂಡೀಗಢದಲ್ಲಿ ಪದವಿ ಪೂರೈಸಿದ್ದಾರೆ.