ಮನೆ ಮನೆ ಮದ್ದು ಬಿಕ್ಕಳಿಕೆ  ಸಮಸ್ಯೆಗೆ ಮನೆ ಮದ್ದು

ಬಿಕ್ಕಳಿಕೆ  ಸಮಸ್ಯೆಗೆ ಮನೆ ಮದ್ದು

0

ಬಿಕ್ಕಳಿಕೆ ನಿವಾರಣೆಗೆ:

•       ಒಣಗಿದ ಮಾವಿನ ಎಲೆಗಳನ್ನು ಕೆಂಡದ ಮೇಲೆ ಹಾಕಿದಾಗ ಹೊಗೆ ಹೊರಡುವುದು ಉಸಿರಿನ ಜೊತೆಯಲ್ಲಿ ಈ ಹೊಗೆ ಎಳೆದುಕೊಂಡಲ್ಲಿ ಬಿಕ್ಕಳಿಕೆ ನಿವಾರಣೆಯಾಗುವುದು.

•       ಲವಂಗವನ್ನು ಹಲ್ಲುಗಳಿಂದ ಅಗಿದು ಚಪ್ಪರಿಸುತ್ತಿದ್ದರೆ ಬಿಕ್ಕಳಿಕೆ ನಿಲ್ಲುವುದು.

•       ಒಂದು ತುಂಡು ಕ್ಯಾರೆಟ್ ತೆಗೆದುಕೊಂಡು ಎದೆ ಹಾಲಿನಲ್ಲಿ ಮಸೀಯಿರಿ ಈ ಹಾಲನ್ನು ಮೂಗಿನ ಹೊಳ್ಳೆಗಳಿಗೆ ಹನಿ ಹನಿಯಾಗಿ ಬಿಡುವುದರಿಂದ ಬಿಕ್ಕಳಿಕೆ ನಿಲ್ಲುವುದು.

•       ಪುದಿನಾ ಸೊಪ್ಪಿನ ಚಹಾ ತಯಾರಿಸಿ ವೇಳೆಗೆ ಏಳೆಂಟು ಟೀ ಚಮಚದಂತೆ ಮೂರು ವೇಳೆ ಈ ಚಹಾ ಸೇವಿಸಿ.

ಸುಣ್ಣ ಹೆಚ್ಚಾಗಿ ಬಾಯಿ ಸುಟ್ಟು ಹೋಗಿದ್ದರೆ:

•       ನಿಂಬೆಹಣ್ಣಿನ ಅಥವಾ ಕಿತ್ತಳೆ ಹಣ್ಣಿನ ರಸ ಚಿಕುತ್ತಿದ್ದರೆ ಗುಣ ಕಂಡುಬರುವುದು.

•       ನೊರೆ ಹಾಲಿನಿಂದ ಎರಡು ಆವರ್ತಿ ಬಾಯಿ ಮುಕ್ಕಳಿಸಿ.

ಗಂಟಲು ಒಡೆದಿರುವಾಗ:

•       ಗಂಟಲು ಹೊಡೆದಿರುವಾಗ ಧ್ವನಿ ಕರ್ಕಶವಾಗಿರುವುದು ಮತ್ತು ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುವುದು. ಈ ಸಂದರ್ಭದಲ್ಲಿ ಹಸಿ ಶುಂಠಿಯ ಸಣ್ಣ ಸಣ್ಣ ಚೂರುಗಳನ್ನು ಕಲ್ಲು ಸಕ್ಕರೆ ಸಹಿತ ಜಿಗಿದು ರಸ ಹೀರುತ್ತಿದ್ದರೆ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುವುದು.

•       ಒಂದು ಬಟ್ಟಲು ನೀರಿಗೆ ಒಂದು ಟೀ ಚಮಚದಷ್ಟು ಓಂ ಕಾಳು ಹಾಕಿ ಚೆನ್ನಾಗಿ ಕುದಿಸಿ ನಂತರ ಕಷಾಯವನ್ನು ಬಸಿದು ಒಂದೆರಡು ಚಿಟಿಕೆ ಉಪ್ಪು ಹಾಕಿ ಈ ಕಷಾಯವನ್ನು ಗಂಟಲಿಗೆ ಸುರಿದುಕೊಂಡು ಗಳಗಳ ಸದ್ದು ಮಾಡಿ ಆಚೆಗೆ ಉಗುಳಿರಿ. ಚಿಕಿತ್ಸೆಯನ್ನು ಆಗಾಗ ಪುನರಾವರ್ತಿಸಿವುದರಿಂದ ಶೀಘ್ರ ಗುಣ ಕಂಡು ಬಂದು ಆರಾಮವೆನಿಸುವುದು.

ಗಂಟಲು ಹುಣ್ಣು ನಿವಾರಣೆಗೆ:

•       ಒಂದು ಬಟ್ಟಲು ಬಿಸಿ ನೀರಿನಲ್ಲಿ ಒಂದು ಟೀ ಚಮಚ ಅಡುಗೆ ಉಪ್ಪು ಕರಗಿಸಿ ಈ ದ್ರಾವಣವನ್ನು ಗಂಟಲಿಗೆ ಸುರಿದುಕೊಂಡು ಕಣಗಳ ಸತ್ತು ಮಾಡಿ ಬಾಯಿ ಮುಕ್ಕಳಿಸಿ ಉಗುಳಿರಿ.

•       ಅಡಿಗೆ ಕಷಾಯದಿಂದ ಬಾಯಿ ಮುಕ್ಕಳಿಸಿ.

•       ಬೇವಿನ ಸೊಪ್ಪಿನ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಈ ಮಿಶ್ರಣವನ್ನು ಬಿಸಿ ಮಾಡಿ ಮತ್ತು ಬಿಸಿಯ ಹದವರಿತು ಗಂಟಲಿಗೆ ಸುರಿದುಕೊಂಡು ಗಳಗಳ ಸದ್ದು ಮಾಡಿ. ಈ ಚಿಕಿತ್ಸೆಯಿಂದ ಗಂಟಲು ಹುಣ್ಣು ಆರುವುದು ಮತ್ತು ನೋವು ಶಮನವಾಗುವುದು.

ಹಲ್ಲಿನ ಸವಕಳಿ ತಡೆಗಟ್ಟಲು:

•       ಗರಿಕೆ ಹುಲ್ಲನ್ನು ತಾಂಬೂಲ ಜಗಿಯುವಂತೆ ಜಗಿದು ರಸ ಉಗುಳುತ್ತಿದ್ದರೆ ಬಾಯಿಯ ದುರ್ಗಂಧ ನಿವಾರಣೆಯಾಗುವುದು. ವಸಡಿನಿಂದ ಆಗುವ ರಕ್ತಸ್ರಾವ ನಿಲ್ಲುವುದು ಹಲ್ಲಿನ ಸಹಕಳಿ ನಿವಾರಣೆಯಾಗುವುದು.

•       ಹಾಗಾಗಿ ಜೀರಿಗೆ ಏನಾಗಲಿ ಹಸಿ ಈರುಳ್ಳಿ ಏನಾಗಲಿ ಅಗಿಯುತ್ತಿದ್ದರೆ ಹಲ್ಲಿನ ಸವೆತಕ್ಕೆ ತಡೆಯುಂಟಾಗುವುದು.

•       ಊಟದ ನಂತರ ಸ್ವಲ್ಪ ಓಮು ಕಾಳು ಬಾಯಿಗೆ ಹಾಕಿಕೊಂಡು ಅಗೆಯುವ ಅಭ್ಯಾಸವಿಟ್ಟುಕೊಂಡರೆ ಹಲ್ಲಿನ ಸವಕಳಿ ತಡೆಯು ಉಂಟಾಗುವುದು.

•       ಪ್ರತಿ ದಿನವೂ ಹಸಿ ಬೇವಿನ ಕಡ್ಡಿಯಿಂದ ಹಲ್ಲು ತಿಕ್ಕಿರಿ. ಈ ಕ್ರಮ ಅನುಸರಿಸುವುದರಿಂದ ಬಾಯಿಯ ದುರ್ವಾಸನೆ ನಿವಾರಣೆ ಆಗುವುದು. ವಸಡಿನ ಹುಣ್ಣು ಗುಣವಾಗುವುದು. ನಾಲಿಗೆಯ ರುಚಿ ಗ್ರಹಣ ಶಕ್ತಿ ಹೆಚ್ಚುವುದು. ಹಲ್ಲಿನ ಸವಕಳಿಗೆ ತಡೆಯು ಉಂಟಾಗುವುದು. ಹಲ್ಲು ನೋವು ನಿವಾರಣೆಯಾಗುವುದು ಮತ್ತು ಅಲುಗಾಡುವ ಹಲ್ಲುಗಳು ಸುಭದ್ರವಾಗುವುವು.