ಮನೆ ದೇವರ ನಾಮ ಗಜಮುಖ ವಂದಿಸುವೆ

ಗಜಮುಖ ವಂದಿಸುವೆ

0

ಗಜಮುಖ ವಂದಿಸುವೆ ಕರುಣಿಸಿ ಕಾಯೋ

ಗಜಮುಖ ವಂದಿಪೆ ಗಜಗೌರಿಯ ಪುತ್ರ

ಅಜನ ಪಿತನ ಮೊಮ್ಮಗನ ಮೋಹದ ಬಾಲಾ | |

ನೀಲಕಂಠನ ಸುತ ಬಾಲಗಣೇಶನೇ

ಬಾರಿ ಬಾರಿಗೆ ನಿನ್ನ ಸ್ಮರಣೆ ಮಾಡುವೆನು |

ಪರ್ವತನಾ ಪುತ್ರಿ ಪಾರ್ವತಿಯ ಕುಮಾರ

ಗರುವಿಯ ಚಂದ್ರಗೆ ಸ್ಠಿರಶಾಪ ಕೊಟ್ಟನೋ ||

ಮತಿಗೆಟ್ಟ ರಾವಣ ಪೂಜಿಸದೆ

ಸೀತಾಪತಿ ಕರದಿಂದಲಿ ಹತನಾಗಿ ಹೋದನು |

ವಾರಿಜನಾಭ ಶ್ರೀ ಹಯವದನನ ಪಾದ

ಸೇರುವ ಮಾರ್ಗದ ದಾರಿಯ ತೋರಿಸೋ | |

ಹಿಂದಿನ ಲೇಖನ‘ಜೇಮ್ಸ್ ವೆಬ್’ ಬಾಹ್ಯಾಕಾಶ ದೂರದರ್ಶಕ ಬಳಸಿ ಅತಿ ಚಿಕ್ಕ ಕ್ಷುದ್ರಗ್ರಹ ಪತ್ತೆ ಹಚ್ಚಿದ ವಿಜ್ಞಾನಿಗಳು
ಮುಂದಿನ ಲೇಖನಯೋಗಾಸನದಿಂದ ಮನಸ್ಸು-ದೇಹಕ್ಕಾಗುವ ಲಾಭಗಳೇನು?