ಮನೆ ರಾಜ್ಯ ಟಿಪ್ಪರ್ ಮತ್ತು ಮರಕ್ಕೆ ಡಿಕ್ಕಿ ಹೊಡೆದ ಕಾರು: ಓರ್ವ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

ಟಿಪ್ಪರ್ ಮತ್ತು ಮರಕ್ಕೆ ಡಿಕ್ಕಿ ಹೊಡೆದ ಕಾರು: ಓರ್ವ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

0

ಸುರತ್ಕಲ್: ಫಾರ್ಚುನರ್ ಕಾರೊಂದು ಟಿಪ್ಪರ್ ಮತ್ತು ಮರಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನಜ್ಜು ಗುಜ್ಜಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಜ್ಯೋತಿ ಸರ್ವಿಸ್ ಸ್ಟೇಷನ್ ಬಳಿ ಹೊಸಬೆಟ್ಟುವಿನಲ್ಲಿ ನಡೆದಿದೆ.

Join Our Whatsapp Group

ಸುಮಾರು 2.30ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ತಮಿಳುನಾಡು ನೊಂದಣಿಯ ಕಾರು ಇದಾಗಿದೆ. ಪೊಲೀಸರ ಮತ್ತು ಸಾರ್ವಜನಿಕರು ಸಹಕಾರದಿಂದ ಎರಡು ಗಂಟೆಯ ಪರಿಶ್ರಮದಿಂದ ಶವವನ್ನು ಹೊರತೆಗೆಯಲಾಯಿತು ಎನ್ನಲಾಗಿದೆ.

ಕಾರಿನಲಿದ್ದ ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.