ಮನೆ ಪೌರಾಣಿಕ ಜೀವ ಸೃಷ್ಟಿಯ ಉದಾಂತ

ಜೀವ ಸೃಷ್ಟಿಯ ಉದಾಂತ

0

ಪೂರ್ವ ಕಾಲದಲ್ಲಿ ನಾರಾಯಣನು ಪ್ರಜಾಪ್ರತಿತ್ವ ಬ್ರಹ್ಮ ರೂಪನಾಗಿ ತುಂಬು ರಜೋಗುಣದಿಂದ ಸೃಷ್ಟಿ ಕಾರ್ಯಕ್ಕೆ ಉಪಕ್ರಮಿಸಿದನು. ಆತನು ಧ್ಯಾನಸಮಾಧಿಯಲ್ಲಿರುವ ಅಪ್ರಯತ್ನವಾಗಿಯೇ ತಮೋಮಯ, ತಮೋಮೋಹ, ಮಹಾಮೋಹ ತಮಿಸ್ರ, ಅಂಧತಮಿಸ್ರ, ಎಂಬ ಐದು ವಿಧಗಳಾದ ಅಂಧಕಾರ ಭೇದಗಳು ಜನಿಸಿದವು. ಅನಂತರ ಆತನ ಧ್ಯಾನಮಾರ್ಗದಲ್ಲಿ,ಪಶು,ಮೃಗಾದಿಗಳನ್ನು ಸೃಷ್ಟಿಸಿದನು. ಆತನ ಚಿಂತನೆಯು ಸತ್ತ್ವೋದಯದಿಂದ ಉರ್ಧ್ವಾ ದಿಶೆಗೆ ತಿರುಗಿತು. ಆ ಸಾತ್ವಿಕ ಶಕ್ತಿಯಿಂದ ಅಮರರು ಉದಯಿಸಿದರು ರಜೋಗುಣದಿಂದ ಉದ್ರಿಕ್ತನಾಗಿ, ತಮೋರಂಜಿತನಾದ ಆತನು ಅದೋ ಗಮನದಲ್ಲಿರಲು ಮಾನವರು ಜನಿಸಿದರು. ತದನಂತರ ನಾನಾ ರೀತಿಯಾದ ಚರಾಚರ ಜೀವರಾಶಿಯು ತಮ್ಮತಮ್ಮ ಪ್ರಾರಬ್ಧ ಕರ್ಮಾನುಸಾರವಾಗಿ ಉದ್ಭವಿಸಿ ಧರ್ಮನೂ ಧರ್ಮಗಳನ್ನು, ಜ್ಞಾನ, ಅಜ್ಙಾನಗಳನ್ನು ಹೊಂದಿ ಇಂದ್ರಿಯಗಳ ಲೋಭಕ್ಕೆ ಗುರಿಯಾಗಿ ರೂಪ, ನಡವಳಿಕೆ, ಸ್ವಭಾವ ಮುಂತಾದ ಗುಣಗಳನ್ನು ಪಡೆಯುತ್ತಿದ್ದಾರೆ.

ಸತ್ತ್ವಾಗುಣವನ್ನು ಧರಿಸಿದ ಬ್ರಹ್ಮನ ಮುಖದಿಂದ ವಿಪ್ರರು ಜನಿಸಿದರು. ಆತನ ರಜಸೋಪೇತನಾಗಿದ್ದ ಆತನು ಭುಜಗಳಿಂದ ಕ್ಷತ್ರಿಯರು ಜನಿಸಿದರು. ರಾಜಸ, ತಾಮಸ, ಪ್ರಕೃತಿಯನ್ನುಳ್ಳ ಆತನ ತೊಡೆಗಳಿಂದ ವೈಶ್ಯರು ಹುಟ್ಟಿದರು. ತಮಸೋದ್ರೇಕವನ್ನು ಹೊಂದಿರುವ ಪ್ರಜಾಪತಿಯ ಪಾದಗಳಿಂದ ಶೂದ್ರರು ಉದಯಿಸಿದರು. ಇವೆಲ್ಲರೂ ಸಹ ವಿಹಿತ ಕರ್ಮಗಳನ್ನು ಆಚರಿಸಿ, ಯಜ್ಞಕರ್ಮವನ್ನು ನಿರ್ವಹಿಸಿ ಪ್ರಜಾವೃದ್ಧಿಯನ್ನು ಹೊಂದಿ ದೇವತೆಗಳಿಗೆ ಸಂತೋಷ ಉಂಟು ಮಾಡುತ್ತಿದ್ದರೆ ಪಾಪಕೃತ್ಯಗಳೆಡೆಗೆ ಮನಸ್ಸನ್ನು ಚಲಿಸಲು ಬಿಡದೆ ದುಷ್ಟ ಕರ್ಮಗಳನ್ನು ಮಾಡದೆ, ಮನುಷ್ಯ ಪ್ರತಿನಿತ್ಯವೂ ಧರ್ಮ ಮಾರ್ಗದಲ್ಲಿ ನಡೆಯಬೇಕು. ಮೊದಲೇ ಪರಿಶೀಲಿಸಿ ಯಾರನ್ನು ನೋಯಿಸದೆ ಎಲ್ಲರಿಗೂ ಒಳ್ಳೆಯವರಾಗಿ ನಡೆದುಕೊಳ್ಳಬೇಕು…. ಅಂತಹ ಮಾನವರು ದೇವತೆಗಳಿಗಿಂತಲೂ ಪೂಜ್ಯನೀಯರು, ಮಾನವರು ತಾವು ಸಂಪಾದಿಸಿದ ದಾನಫಲದಿಂದ ದೇವತೆಗಳಿಗೂ ಸಹ ಸಾಧ್ಯವಾಗದ ಮೋಕ್ಷ ಪಥವನ್ನು ಪಡೆಯುವವರು ಬ್ರಹ್ಮನು ಎಲ್ಲಾ ರೀತಿಯಾದಂತಹ ಮನುಷ್ಯರನ್ನು ಸೃಷ್ಟಿಸಿದ್ದಾನೆ. ಕೆಲವರು ಪರಿಶುದ್ಧ ಅಂತಃಕರ್ಣದೊಂದಿಗೆ ಲೌಕಿಕ ಭೋಗಗಳನ್ನು ಪ್ರರಿತ್ಯಜಿಸಿ, ವಿಷ್ಣು ಭಕ್ತಿ ಪಾರಾಯಣರಾಗಿ ಉತ್ತಮ ಲೋಕಗಳನ್ನು ಅಧಿರೋಹಿಸುವವರು. ಅದೇ ಕೆಲವರು ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರಗಳೆಂಬ ಅರಿಷ್ವಡ್ವರ್ಗಗಳಿಗೆ ಒಳಗಾಗಿ ದೈವ ಚಿಂತನೆ ದೈವಸ್ಮರಣೆಯನ್ನು ವಿಸ್ಮರಿಸಿ, ಸಂಸಾರ ತಾಪತ್ರಯದಲ್ಲಿ ಸಿಲುಕಿಕೊಂಡು ಸ್ವಾರ್ಥ ಚಿತ್ತರಾಗಿ ಪಾತಕಕೃತ್ಯಗಳನ್ನು ಮಾಡಿ ಅಧಮ ಗತಿಯನ್ನು ತಲುಪುತ್ತಾರೆ.

ಈ ಪ್ರಪಂಚದಲ್ಲಿ ಕೆಲವರು ಪುಣ್ಯವಂತರು, ಕೆಲವರು ಮಹಾಪಾಪಿಗಳು, ಒಬ್ಬರು ಮಹಾರಾಜರು, ಮತ್ತೊಬ್ಬರು ಬಡವರು, ಒಬ್ಬರು ಪಂಡಿತರು, ಮತ್ತೊಬ್ಬರು ಪಾಮರರನ್ನು ರಕ್ತ ಮಾರ್ಗದಲ್ಲಿ ಪ್ರವೇಶಿಸಿದವನಿಗೆ ಎಷ್ಟು ಭೋಗಿಸಿದರು ಬಯಕೆ ತೀರದ ಕ್ಷೀಣಿಸಿದ ಸಂಪತ್ತುಗಳಿವೆ. ಮುಕ್ತಿ ಮಾರ್ಗವನ್ನು ಬಯಸಿದವನಿಗೆ ಎಲ್ಲಾ ಸುಖ ಭೋಗಗಳನ್ನು ತೃಣಪ್ರಾಯವನ್ನಾಗಿ ನಿರಾಕರಿಸುವುದಕ್ಕೆ ಬೆಟ್ಟದಷ್ಟು ಆತ್ಮಬಲವಿದೆ. ಬ್ರಹ್ಮನು ಒಂದೊಂದು ಸಾಧಿಸುವುದಕ್ಕೂ ಒಂದೊಂದು ಸಾಧನೆ ಇರುವಂತೆ ಮಾಡಿದ್ದಾನೆ ಬಯಕೆ ಎಂಬುದು ಇರಬೇಕೇ ಹೊರತು ಸಾಧ್ಯವಾಗದೆ ಇರುವಂತಹದು ಯಾವುದು ಇಲ್ಲ.

ಮಾನವರ ಜೀವನೋಪಾಯಕ್ಕಾಗಿ ಆ ಜಗತ್ಪತಿಯು ಅನೇಕ ಸಾಧನೆಗಳನ್ನು ಕಲ್ಪಿಸಿದ್ದಾನೆ. ಭತ್ತ, ಗೋಧಿ, ಎಳ್ಳು, ಉದ್ದು, ಹೆಸರು ಕಡಲೆ, ಅವರೇ, ಹುರಳಿ, ತೊಗರಿ, ಸೋಮಕಾಳು, ಆರ್ಕ ಇತ್ಯಾದಿ ಹದಿನೇಳು ಧಾನ್ಯಗಳಲ್ಲಿ 14 ಧಾನ್ಯಗಳು ಯಜ್ಞ ಕರ್ಮಗಳಿಗೆ ಯೋಗ್ಯವೆಂದು ಪುರಾಣ ತಜ್ಞರು ಹೇಳುತ್ತಾರೆ. ಈ ಧಾನ್ಯಗಳಿಗೆ ಸಸ್ಯ ಸಮೃದ್ಧಿಉಂಟಾಗುತ್ತದೆ ಈ ರೀತಿಯಾಗಿ ತಾನು ನಿರ್ಮಿಸಿದ ಭೂತ ಪ್ರಪಂಚವು ಆತ್ಮಜ್ಞಾನವಿಲ್ಲದೆ ಐಹಿಕ ಭೋಗಲಸೆಯಾಗುತ್ತಿದ್ದ ಸಮಯದಲ್ಲಿ ಬೇಸರಪಟ್ಟು ಬ್ರಹ್ಮದೇವನು ತನ್ನೊಂದಿಗೆ ಸಮನಾರಾದ ಪ್ರಜಾಪತಿಗಳನ್ನು ಮಹಾಮುನಿಗಳನ್ನು ಸೃಷ್ಟಿಸಿ ಲೋಕ ಕಲ್ಯಾಣ ಮಾಡಲು ಸಂಕಲ್ಪಿಸಿದರು.

ಮೈತ್ರೇಯಾ! ಬ್ರಹ್ಮನು ಈ ರೀತಿಯಾಗಿ ಜಗತ್ತಿನಲ್ಲಿ ಉತ್ತಮ ಮಾನವರನ್ನು ಕಲ್ಪಿಸಬೇಕೆಂದು ಸಂಕಲ್ಪಿಸಿ ತನ್ನ ಮಾನವ ಸೃಷ್ಟಿಯಿಂದ ಭೃಗು, ಪುಲಸ್ತ್ಯ, ಪುಲಹ, ಕ್ರತು, ಅಂಗೀರಸ, ಮರೀಚಿ, ದಕ್ಷ ಅತ್ರಿ, ವಶಿಷ್ಟ ಎಂಬ ಒಂಬತ್ತು ಪ್ರಜಾಪ್ರತಿಗಳನ್ನು ನಂತರ ಖ್ಯಾತಿ, ವಿಭೂತಿ, ಸಂಭೋಧಿ, ಕ್ಷಮ, ಪ್ರೀತಿ, ಸನ್ನತಿ, ಉರ್ಜ, ಅನುಸೂಯ, ಅರುಂಧತಿ ಎಂಬ ಒಂಬತ್ತು ಕನ್ಯರನ್ನು ಸೃಷ್ಟಿಸಿ ಅವರನ್ನೆಲ್ಲರನ್ನು ಕ್ರಮವಾಗಿ ನವ ಬ್ರಹ್ಮರಿಗೆ ಕೊಟ್ಟು ವಿವಾಹ ಮಾಡಿದನು.ನಂತರ ಚತುರ್ಮುಖನು ಸೂರ್ಯನಿಗೆ ಸಮಾನರಾದ ತೇಜಸ್ಸನ್ನುಳ್ಳವರು ದಯಾಮಯರು, ಲೋಕೋತರ ಸೌಂದರ್ಯವಂತರು, ಅಸೂಯರಹಿತರು, ಶಾಂತಚಿತ್ತರು, ಆದ ಸನಕಾದಿ ಮುನಿಗಳನ್ನು ಸೃಷ್ಟಿಸಿದನು ಇವೆಲ್ಲರೂ ಬ್ರಹ್ಮ ಮಾನಸ ಪುತ್ರರಾಗಿ ಖ್ಯಾತಿಗೊಳಿಸಿದರು. ಆದರೆ ಸೃಷ್ಟಿಯು ಬ್ರಹ್ಮನು ಬಯಸಿದ ರೀತಿಯಲ್ಲಿ ನಡೆಯಲಿಲ್ಲ ತನ್ನ ಅಭಿನವ ಸೃಷ್ಟಿಯಿಂದ ಭೂಮಂಡಲವೆಲ್ಲ ಉತ್ತಮ ಬ್ರಹ್ಮಅಂಶವು ವಿಸ್ತಾರವಾಗದೆ ಹೋದರು ಆತನ ಪುತ್ರರೆಲ್ಲರೂ ಜಿತೇಂದ್ರಿಯರಾಗಿ ಸಂಸಾರ ಸುಖಬೊಗಗಳನ್ನು ತ್ಯಜಿಸಿ ಬ್ರಹ್ಮ ವಿದ್ಯಾ ಪರಂಗತರಾಗಿ ತಪಸ್ಸು ಮಾಡಿಕೊಳ್ಳುವುದಕ್ಕಾಗಿ ಹೊರಟು ಹೋದರು. ತನ್ನ ಸಂಕಲ್ಪವು ವಿಫಲವಾಯಿತು ಎಂದು ತಿಳಿದ ಬ್ರಹ್ಮನಿಗೆ ತೀವ್ರಕೋಪ ಉಂಟಾಯಿತು.