ಮನೆ ಪೌರಾಣಿಕ ಶಾಕ ದೀಪ

ಶಾಕ ದೀಪ

0

       ಪ್ರಿಯವ್ರತನ ಪುತ್ರ ಭವ್ಯ ಮಹಾರಾಜನಿಗೆ ಏಳು ಜನ  ಗಂಡು ಮಕ್ಕಳು ಅವರೇ ಜಲಧ, ಕುಮಾರ, ಸುಕುಮಾರ, ಮುನೀಚಕ, ಕುಸುಮೋದ, ಮೌದಾಕಿ, ಮಹಾದ್ರುಮನು. ಕ್ರೌಂಚ ದ್ವೀಪವನ್ನು ಸುತ್ತಿಕೊಂಡು ಹರಡಿರುವ ದದಿ ಸಮುದ್ರದ ಏರ್ಪಡಿಸಿಕೊಂಡಿದ್ದು ಬಹಿರ್ವಲಯದಲ್ಲಿನ ಶಾಕ ದ್ವೀಪವನ್ನು ಭವ್ಯನ್ನು ಮಕ್ಕಳಿಗೆ ಹಂಚಿಕೊಟ್ಟನು. ಅವೆಲ್ಲವೂ ಅವರವರ ನಾಮದೇಯಗಳೊಂದಿಗೆ ಪ್ರಸಿದ್ಧಿಯನ್ನು ಪಡೆದವು. ಭವ್ಯ ಪುತ್ರರ ಕಾಲದಲ್ಲಿ ಅವರ ದೇಶಗಳ ಗಡಿ ಭಾಗಗಳಲ್ಲಿ ಉದಯಗಿರಿ,ಜಲಧಾರ, ರೈವತಕ, ಶ್ಯಾಮ, ಅಂಭಿಕೇಯ,ರಮ್ಯ,ಕೇಸರಿ, ಕುಲ ಪ್ರವರ್ತಗಳಿಂದ ಪುಣ್ಯ ನದಿ ಸಪ್ತಾಕವು ಜನಿಸಿತು.ಈ ಕುಲ ಪರ್ವತಗಳ ಪ್ರದೇಶದಲ್ಲಿ ಒಂದು ಮಹಾಶಾಕವೃಕ್ಷವು ಬೆಳೆಯಿತು. ಗಾಳಿಯ ಅಲುಗಾಡಿವಿಕೆಯಿಂದ ಆ ಮಹಾವೃಕ್ಷದ ಎಲೆಗಳು ತಣ್ಣನೆಯ ಗಾಳಿಯನ್ನು ತಂಪಾದ ನೆರಳನ್ನು ಹುಡುಕುದಿದ್ದರಿಂದ ಅಲ್ಲಿಗೆ ಗಂಧರ್ವರೂ, ಸಿದ್ಧರೂ ವಿಶ್ರಾಂತಿಯನ್ನು ಪಡೆಯಲಿಕ್ಕೆಂದು ಬಂದು ಹೋಗುತ್ತಿದ್ದರು. ಶಾಕ ದ್ವಿಪದ ವಾಸಿಗಳು ಚತುರ್ವರ್ಣವನ್ನು ಮೃಗರು, ಮಾಗಧರೂ, ಮಾನಸರು, ಮದಂಗರು ಎಂದು ಏರ್ಪಡಿಸಿಕೊಂಡಿದ್ದರು.  ಸುಕುಮಾರಿ,ಕುಮಾರಿ,ನಳಿನಿ, ಧೇನುಕ, ಇಕ್ಷು, ವೇಣುಕ, ಗಭಸ್ತೀ, ಶೈವಲೀನಗಳೊಂದಿಗೆ ಇತರೆ ನದಿ ತೀರ ಭೂಮಿಗಳು ಇವೆ. ಶಾಕ ದ್ವೀಪವೆಂದರೆ ನಿಜಕ್ಕೂ ಭೂತಾಳದ ಸರ್ವವೇ ಆಗಿದೆ. ಅಲ್ಲಿನ ಜನರಿಗೆ ಧರ್ಮನುಷ್ಠಾನವೇ ಹೊರತು ಪಾಪ ಸ್ವರೂಪವೂ ಗೊತ್ತಿಲ್ಲ. ಅಧಿಕೃತೆಗಳು, ಅಸೂಯಾದ್ವೇಷಗಳು ಅನ್ಯೋನ್ಯ ವೈರತ್ವಗಳು, ಪಾಪಕೃತ್ಯಗಳು  ಕಾಣಿಸುವುದಿಲ್ಲ.

Join Our Whatsapp Group

        ಶಾಕ  ದ್ವಿಪದ ಹೊರಗಿನ ಪ್ರಾಂಗಣದಲ್ಲಿ   ಕ್ಷೀರೋದಕ ಅದರ ಕಹಿರ್ ಭಾಗದಲ್ಲಿ ಪುಷ್ಕರ ದ್ವೀಪವಿದೆ. ಪ್ರಿಯವರ್ತನ ಮಗನಾದ ಸವನ ಮಹಾರಾಜನು ಅದರ ಅಧಿಪತಿಯಾಗಿದ್ದನು. ಪುಷ್ಕರಾಧಿಪತಿ ಪುತ್ರರು ಮಹಾವೀರ, ಧಾತಕಿ. ಇವರುಗಳು ಮಹಾವೀರ ಖಂಡಕ್ಕೂ, ದಾತಕೀ ಖಂಡಕ್ಕೂ ಪಾಲಕರಾದರು. ಇವೆರಡೂ ಖಂಡಗಳನ್ನು ಒಂದರಿಂದ ಮತ್ತೊಂದನ್ನು ಬೇರ್ಪಡಿಸುತ್ತಾ ಮಧ್ಯಭಾಗದಲ್ಲಿ 50,000 ಯೋಜನೆಗಳ ವಿಸ್ತಾರದಲ್ಲಿ ಮಾನಸ್ತೊತ್ತರ ಪರ್ವತ ಶ್ರೇಣಿಯು ವರ್ತುಲಾ ಕಾರದಲ್ಲಿ ವ್ಯಾಪಿಸಿದೆ. ಮನ ಸ್ತೋದತ್ತ ವಲಯಾಕೃತಿಯ ಅಂತರ್ಭಾಗದಲ್ಲಿ ಧಾತಕೀ ಖಂಡವು, ಬಹಿರ್ ಮೇಲೆಸ್ಸೀಮೆಯಲ್ಲಿ ಮಹಾವೀರ ಖಂಡಗಳಿವೆ.ಭರತ ಖಂಡದಲ್ಲಿ ಪುಣ್ಯಕಾರ್ಯಗಳನ್ನು ಆಚರಿಸಿ ಭೋಗ ಭೂಮಿಗಳಿಗೆ ಪ್ರವೇಶಿಸಿದ ಸಚ್ಚರಿತರು ದೇವತೆಗಳು, ಸಿದ್ಧಸಾಧ್ಯರು, ಈ ಉಭಯ ಖಂಡಗಳಲ್ಲಿಯೂ ವಿನೋದಕ್ಕಾಗಿ ಬರುವುದು ಪರಿಪಾಟಿಯಾಗಿದೆ.

        ಅನ್ಯ ದೀಪಗಳಲ್ಲಿಯಂತೆ ಪುಷ್ಕರ ದ್ವೀಪದಲ್ಲಿ ಪರ್ವತಗಳು,ನದಿಗಳು ಇಲ್ಲ. ಇಲ್ಲಿನ ಜೀವರಾಶಿಯು ಧರ್ಮ ಶೀಲದೊಂದಿಗೆ ವಾಸುದೇವ ಮೇಲಿನ ಭಕ್ತಿ ತಾತ್ವರ್ಯಗಳಿಂದ ದೋಷರಹಿತವಾಗಿರುವುದರಿಂದ ಇಲ್ಲಿನ ಪ್ರಜೆಗಳಿಗೆ ವರ್ಣಾಶ್ರಮಗಳು, ಕುಲಾಚರಗಳು, ದಂಡನೀತಿಗಳು, ಶಿಕ್ಷಾಸ್ಮೃತಿಗಳು ಹುಟ್ಟಿಲ್ಲ. ಈ ಪ್ರಜೆಗಳಲ್ಲಿ ಜಾತಿ,ಕುಲ, ವಿಭೇದಗಳಿಲ್ಲ.ಪಾಪಗಳೇ ಇಲ್ಲದೇಯಿರುವುದರಿಂದ ಈ ಭೋಗ ಭೂಮಿಯಲ್ಲಿ ಯಜ್ಞ ಯಾಗಾದಿಗಳ ವಿಧಿ, ನಿಯಮಗಳೂ ಸಹ ವರ್ತಿಸಿಲ್ಲ. ಇಲ್ಲಿನ ಕಾಲಕ್ಕೆ ಅಖಂಡ ಸಚ್ಚಿದಾನಂದ ಸ್ವರೂಪವೇ ಹೊರೆತು ಖಂಡ ವಿಭಾಗವಿಲ್ಲದೇಯಿರುವುದರಿಂದ ಯುಗ ಪ್ರಯಾಣಗಳಿಲ್ಲ. ಧರ್ಮೋಪದೇಶಕ್ಕೂ. , ನೆಲೆಸಿದ  ತ್ರಯೀ ವಿದ್ಯೆಗಳು, ಪುರಾಣಗಳು, ನೀತಿ ಶಾಸ್ತ್ರಗಳು, ಇಲ್ಲಿ ಅಜಾತ ಪೂರ್ವಗಳು ಅವಿಧತಚರಣಗಳಿವೆ. ಪುಷ್ಕರ   ದ್ವೀಪವಾಸಿಗಳಿಗೆ ಸಂಕಲ್ಪ ವಿಕಲ್ಪಗಳಿಲ್ಲ.ಕಾಮಾವಿಕಾರಗಳು, ವ್ಯಾಧಿಗಳು ಇಲ್ಲ.ಇವರಿಗೆ ಕೇವಲ ಇಚ್ಛಾ ಮಾತ್ರದಿಂದಲೇನೇ ಮೃಷ್ಟಾನ್ನ, ಇಷ್ಟಾನ್ನ, ಭೋಜನಗಳು, ಸರ್ವಭೋಗ್ಯ ವಸ್ತುಗಳು ಲಭಿಸುತ್ತವೆ. ಅವರೆಲ್ಲರೂ ಸಮಚಿತ್ತರಾಗಿ ಶಾಂತತೇಜರಾಗಿ 10,000  ವರ್ಷಗಳ ಕಾಲ ಪರಮಾಯಷ್ಷನ್ನು ಮಹಾನಂದಭರಿತರಾಗಿ ಅನುಭವಿಸುತ್ತಾರೆ . ಪರಮಾಾನಂದಭರಿತವಾದ ಈ ಬ್ರಹ್ಮ ಸ್ಥಾನದಲ್ಲಿನ ಪಾವನವಾಸಿಗಳಿಗೆ ಶ್ರೀಮನ್ನಾರಾಯಣನು ಬ್ರಹ್ಮ ರೂಪದಲ್ಲಿ ಸಾಕ್ಷಾತ್ಕರಿಸಿ ಕಾಮಿತಾರ್ಥಗಳನ್ನು ಈಡೇರಿಸುತ್ತಾನೆ.ಮೈತ್ರೇಯ ಇಲ್ಲಿಯವರೆಗೂ ನೀನು ತಿಳಿದುಕೊಂಡ ಈ ಒಂಬತ್ತು ದ್ವೀಪಗಳು ಒಂದಕ್ಕಿಂತಲೂ ಮತ್ತೊಂದು ದ್ವಿಗುಣವಾಗಿ ನೆಲೆಸುತ್ತಿವೆ.ಸೂರ್ಯನ ತಾಪದಿಂದ ಚಂದ್ರೋದಯಸ್ತಗಳಿಂದ ಇಲ್ಲಿನ ಸಮುದ್ರ ಜಲಗಳಿಗೆ ಏರಿಳಿತಗಳು ಸಂಭವಿಸಿದರೂ ನೀರಿನ ಪ್ರಮಾಣದಲ್ಲಿ ಬದಲಾವಣೆ ಯಾಗುವುದಿಲ್ಲ.