ಮನೆ ರಾಷ್ಟ್ರೀಯ ಉಗ್ರನನ್ನು ಬಂಧಿಸಿದ ಪಂಜಾಬ್‌ ಪೊಲೀಸರು

ಉಗ್ರನನ್ನು ಬಂಧಿಸಿದ ಪಂಜಾಬ್‌ ಪೊಲೀಸರು

0

ಚಂಡೀಗಢ (Chandigarh)-ಮೋಸ್ಟ್ ವಾಂಟೆಡ್ ಉಗ್ರನನ್ನು ಪಂಜಾಬ್ ಪೊಲೀಸ್ ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್(ಎಜಿಟಿಎಫ್)‌ ಬಂಧಿಸಿದೆ.

ಡೇರಾ ಬಸ್ಸಿಯ ಲಾಲಿ ಗ್ರಾಮದಲ್ಲಿ ಉಗ್ರ ಚರಂಜಿತ್ ಪಟಿಯಾಲವಿನನ್ನು ಬಂಧಿಸಲಾಗಿದೆ. ಈತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್(BKI)ನ ಸಕ್ರಿಯ ಸದಸ್ಯ. ಕಳೆದ 12 ವರ್ಷಗಳಿಂದ ವಿಭಿನ್ನ ಗುರುತುಗಳು ಮತ್ತು ಅಡಗುತಾಣಗಳನ್ನು ಈತ ಬಳಸುತ್ತಿದ್ದ.

ಇತ್ತೀಚೆಗೆ ತಾನು ಗ್ರಂಥಿ ಎಂದು ಹೇಳಿಕೊಂಡು ಪಶ್ಚಿಮ ಬಂಗಾಳದ ಖರಗ್‌ಪುರದ ಗುರುದ್ವಾರದಲ್ಲಿ ವಾಸಿಸುತ್ತಿದ್ದ. ಕೆಲ ದಿನಗಳ ಹಿಂದೆ ಪಂಜಾಬ್ ಗೆ ಬಂದಿದ್ದ ಉಗ್ರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

2010ರ ಜುಲೈ 23ರಂದು ಆರೋಪಿ ಚರಂಜಿತ್ ಪಟಿಯಾಲವಿ ವಿರುದ್ಧ ಸ್ಫೋಟಕ ಕಾಯಿದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಮತ್ತು ಚರಂಜಿತ್ ಪಟಿಯಾಲವಿಯನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗಿತ್ತು ಎಂದು ಪಂಜಾಬ್ ಉಪ ಪೊಲೀಸ್ ಮಹಾನಿರೀಕ್ಷಕ (ಎಜಿಟಿಎಫ್) ಗುರ್‌ಪ್ರೀತ್ ಸಿಂಗ್ ಭುಲ್ಲಾರ್ ಅವರು ಹೇಳಿದ್ದಾರೆ. 

ಖಚಿತ ಮಾಹಿತಿಯ ಆಧಾರದ ಮೇಲೆ ಎಐಜಿ ಎಜಿಟಿಎಫ್ ಗುರ್ಮೀತ್ ಸಿಂಗ್ ಚೌಹಾಣ್ ಮತ್ತು ಡಿಎಸ್ಪಿ ಎಜಿಟಿಎಫ್ ಬಿಕ್ರಮ್ಜಿತ್ ಸಿಂಗ್ ಬ್ರಾರ್ ನೇತೃತ್ವದ ತಂಡ, ಡೇರಾ ಬಸ್ಸಿಯ ಲಾಲಿ ಗ್ರಾಮದ ಗುರುದ್ವಾರದ ಬಳಿ ಪಟಿಯಾಲವಿಯನ್ನು ಬಂಧಿಸಿದ್ದಾರೆ ಎಂದು ಭುಲ್ಲಾರ್ ತಿಳಿಸಿದ್ದಾರೆ.