ಮನೆ ಕ್ರೀಡೆ ಐಪಿಎಲ್‌ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದ ಕೆ.ಎಲ್.ರಾಹುಲ್‌

ಐಪಿಎಲ್‌ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದ ಕೆ.ಎಲ್.ರಾಹುಲ್‌

0

ಮುಂಬೈ (Mumbai)-2022ನೇ ಐಪಿಎಲ್‌ (IPL) ಟೂರ್ನಿಯಲ್ಲಿ ಕೆ.ಎಲ್.ರಾಹುಲ್‌ (K.L.Rahul) ಎರಡನೇ ಶತಕ ಸಾಧನೆ ಮಾಡಿದ್ದಾರೆ. ಈ ಎರಡು ಶತಕಗಳು ಮುಂಬೈ ವಿರುದ್ಧವೇ ದಾಖಲಾಗಿವೆ ಎಂಬುದು ಗಮನಾರ್ಹ.

ಈ ಮೂಲಕ ಐಪಿಎಲ್‌ ವೃತ್ತಿ ಜೀವನದಲ್ಲಿ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ. ಭಾನುವಾರ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ 61 ಎಸೆತಗಳಲ್ಲಿ ಶತಕ ಗಳಿಸಿ ಸ್ಮರಣೀಯ ಸಾಧನೆ ಮಾಡಿದರು.

ಐಪಿಎಲ್ ಟೂರ್ನಿಯಲ್ಲಿ ನೂತನ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್, ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ಐಪಿಎಲ್ 14ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಮೂರು ಶತಕಗಳನ್ನು ಗಳಿಸಿದ್ದಾರೆ. ಬಟ್ಲರ್‌ಗೆ ನಿಕಟ ಪೈಪೋಟಿ ಒಡ್ಡುತ್ತಿರುವ ರಾಹುಲ್ ಈಗ ಎರಡನೇ ಶತಕ ಸಾಧನೆ ಮಾಡಿದ್ದಾರೆ. ಆದರೆ ಐಪಿಎಲ್ ವೃತ್ತಿ ಜೀವನದಲ್ಲಿ ಬಟ್ಲರ್ ಅವರ ನಾಲ್ಕು ಶತಕಗಳ ಸಾಧನೆಯನ್ನು ಸರಿಗಟ್ಟಿದ್ದಾರೆ.

ಹಿಂದಿನ ಲೇಖನಉಗ್ರನನ್ನು ಬಂಧಿಸಿದ ಪಂಜಾಬ್‌ ಪೊಲೀಸರು
ಮುಂದಿನ ಲೇಖನಐಪಿಎಲ್‌ ಟೂರ್ನಿ: ಲಖನೌ ಗೆ 36 ರನ್‌ ಗಳ ಜಯ; ಮುಂಬೈಗೆ ಸತತ 8ನೇ ಸೋಲು