ಮನೆ ಮನೆ ಮದ್ದು ಕುಸುಬಿ (CARTHAMUS TINCTORIUS)

ಕುಸುಬಿ (CARTHAMUS TINCTORIUS)

0

ಇದರ ಕೃಷಿ ಸಂಪೂರ್ಣ ಭಾರತದಲ್ಲಾಗುತ್ತದೆ. ಹಿಂದಿನ ಕಾಲದಲ್ಲಿ ಬಟ್ಟೆಗೆ ಬಣ್ಣ ನೀಡಲು ಬಳಕೆಯಾಗುತ್ತಿತ್ತು. ಹಾಗಾಗಿ ವಸ್ತ್ರ ರಂಜಕ, ಕುಸುಂಭ, ವಹ್ನಿಶಿಖ ಎಂಬ ಹೆಸರಿನಲ್ಲಿ ಗುರುತಿಸಲಾಗಿದೆ.

ಮೂರಡಿ ಎತ್ತರದ ಸಸ್ಯ. ಮುಳ್ಳುಗಳಿರುವ ಕತ್ತರಿಸಿದಂತೆ ಇರುವ ಅಂಚುಗಳ ದೋಣಿ ಆಕಾರದ ಎಲೆಗಳು, ಕೇಸರಿ, ಹಳದಿ ಹೂವು, ಸೇವಂತಿಯಂತೆ ಗೊಂಚಲುಗಳಲ್ಲಿ ಅರಳುವ ಹೂಗಳು, ಕುಲವೂ ಸೇವಂತಿಗೆಯದೇ, ಚೌಕಾಕಾರದ ಚರ್ಮದಂತಹ ಫಲಕೋಶಗಳಲ್ಲಿ ಶಂಖದಾಕಾರದ ಬಿಳಿಯ ಬೀಜ ಅಂಟಂಟಾಗಿರುತ್ತದೆ.
ಕುಸುಬಿಯಲ್ಲಿ ಅನೇಕ ಪ್ರಕಾರಗಳಿರುತ್ತದೆ. ಮುಳ್ಳು ಇರದ, ಮುಳ್ಳಿನ ಕುಸುಬಿಗಳೆರಡು, ಮುಳ್ಳಿರದ ಕುಸುಬಿಯದು ಅದು ಉತ್ತಮ ಜಾತಿಯ ಬಣ್ಣ. ಇದರ ಪುಂಕೇಸರಗಳು ತಾಜಾ ಕುಂಕುಮ ಕೇಸರಿ ತರಹ ಇರುತ್ತದೆ.
ಕುಸುಬಿ ಹೂವಿನಲ್ಲಿ ನೀರಲ್ಲಿ ಕರಗದ ಕೇರ್ತಮಿನ್ ಎಂಬ ರಾಸಾಯನಿಕವಿರುತ್ತದೆ. ನೀರಲ್ಲಿ ಕರಗುವ, ಕರಗದ ಕೆಂಪು, ಹಳದಿ ಬಣ್ಣ ಸಹ ಹೂವಿನಲ್ಲಿರುತ್ತದೆ. ಶೇಕಡ 30ರಷ್ಟು ತೈಲಾಂಶವುಳ್ಳ ಬೀಜವನ್ನು ಖಾದ್ಯ ತೈಲದ ಮೂಲವೆಂದು ಬಳಸಲಾಗುತ್ತದೆ.
ಔಷಧೀಯ ಗುಣಗಳು :-

  • ಕುಸುಬೆ ಬೀಜದ ಪುಡಿಯು ಬೇಧಿ ಮಾಡಿಸುತ್ತದೆ. ಬಲಕಾರಿ ಮೂತ್ರ ಸ್ರಾವ ಹೆಚ್ಚಿಸುತ್ತದೆ.
  • ಕುಸುಬಿ ಬೇರಿನ ಕಷಾಯ ಕುಡಿದರೆ ಮೂತ್ರ ಗಟ್ಟು ನಿವಾರಣೆಯಾಗುತ್ತದೆ.
  • ಕುಸುಬೆಯ ಚಿಗುರಲೆಯನ್ನು ತರಕಾರಿಯಾಗಿ ಬಳಸಿದರೆ ನೆಗಡಿ ನಿವಾರಣೆ ಆಗುತ್ತದೆ.
  • ಮೈ ಕೈ ನವೆ, ಪರಿಹಾರಕ್ಕೆ ಕುಸುಬಿ ಎಲೆಯನ್ನು ನಾಲ್ಕು ಬಾರಿ ಮಾಲೀಸು ಮಾಡುವುದರಿಂದ ಹಿತಕಾರಿಯಾಗುತ್ತದೆ.
  • ಕೀಲು ಗಂಟು ನೋವು, ಹಳೆಯ ವಾತ ಜನಿತ ಸಂದು ಭಾವು ನೋವು ಪರಿಹರಿಸಿ ಪರಿಹರಿಸಲು ಕುಸುಬಿ ಎಣ್ಣೆಯನ್ನು ನಿತ್ಯ ಮಾಲೀಶು ಮಾಡಿದರೆ ನೋವಿನಲ್ಲಿ ಹಿತ.
  • ದ್ರಾಕ್ಷಿ ರಸದ ಸಂಗಡ ಕುಸುಬಿ ಬೀಜದ ಪುಡಿಯನ್ನು ಕಲಸಿ ಕುಡಿದರೆ ಮೂತ್ರಕೋಶದ ಕಲ್ಲು ಪರಿಹಾರವಾಗುತ್ತದೆ. ಮೂತ್ರಕಟ್ಟು ನಿವಾರಣೆಯಾಗುತ್ತದೆ.
  • ಬಾಣಂತಿಯ ಉದರ ಶೂಲೆಗೆ ಬೀಜದ ಪೋಲ್ಟೀಸು ಉಪಶಮನಕಾರಿ.