ಮನೆ ಅಪರಾಧ ಭೀಕರ ರಸ್ತೆ ಅಪಘಾತ: ನಾಲ್ವರ ಸಾವು

ಭೀಕರ ರಸ್ತೆ ಅಪಘಾತ: ನಾಲ್ವರ ಸಾವು

0

ತಿರುವನಂತಪುರಂ(Thiruvanantapura)(ಕೇರಳ): ಕಾರೊಂದು ಲಾರಿಗೆ ಢಿಕ್ಕಿ ಹೊಡೆದ (Accident) ಪರಿಣಾಮ ನಾಲ್ವರು ಸಾವನ್ನಪ್ಪಿದ್ದು(4 Dead), ಓರ್ವ ಗಾಯಗೊಂಡಿರುವ(One Injured) ಘಟನೆ ಅಂಬಲಪ್ಪುಳದಲ್ಲಿ ಬುಧವಾರ ನಡೆದಿದೆ.

ಮೃತರನ್ನು ಶಿಜು (34), ಮುಧೀಶ್ ಲಾಲ್ (37), ಅಭಿರಾಗ್ (25), ಅಂಬಾಡಿ (12) ಎಂದು ಗುರುತಿಸಲಾಗಿದೆ. ಗಾಯಾಳುವನ್ನು ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರು ತಿರುವನಂತಪುರಂನ ನೆಡುಮಂಗಡದಿಂದ ನೆಡುಮಾಬಸ್ಸೆರಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.