ಮನೆ ರಾಜ್ಯ ಮಂಡ್ಯ: ಅನುಮಾನಾಸ್ಪದವಾಗಿ ಗ್ರಾಪಂ ಸದಸ್ಯನ ಶವ ಪತ್ತೆ

ಮಂಡ್ಯ: ಅನುಮಾನಾಸ್ಪದವಾಗಿ ಗ್ರಾಪಂ ಸದಸ್ಯನ ಶವ ಪತ್ತೆ

0

ಮಂಡ್ಯ: ಅನುಮಾನಾಸ್ಪದವಾಗಿ ಗ್ರಾಪಂ ಸದಸ್ಯನ ಶವ ಪತ್ತೆಯಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಗಂಜಿಗೆರೆ ಗ್ರಾಪಂ ಆವರಣದಲ್ಲಿ ನಡೆದಿದೆ.

ದೇವರಾಜೇಗೌಡ(65) ಮೃತ ಗ್ರಾಪಂ ಸದಸ್ಯ.

ಗಂಜಿಗೆರೆ ಗ್ರಾಪಂ ಆವರಣದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ದೇವರಾಜೇಗೌಡ ಶವ ಪತ್ತೆಯಾಗಿದೆ.

ಬೇರೆಡೆ ಕೊಲೆ ಮಾಡಿ ದೇವರಾಜೇಗೌಡ ಶವವನ್ನು ಗ್ರಾಪಂ ಆವರಣದಲ್ಲಿ ನೇತು ಹಾಕಿರುವ ಅನುಮಾನ ವ್ಯಕ್ತವಾಗಿದೆ.

ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.