ಮನೆ ಯೋಗಾಸನ ಪ್ರತ್ಯಾಹಾರ

ಪ್ರತ್ಯಾಹಾರ

0

ಇಂದ್ರಿಯಗಳ ಸೆಳೆತಕ್ಕೆ ಬುದ್ಧಿ ಸಿಕ್ಕಿದರೆ ಮನುಷ್ಯನ ಪತನವಾದಂತೆಯೇ, ಆದರೆ ಉಸಿರನ್ನು ಕ್ರಮಗತವಾಗಿ ನಿಗ್ರಹ ಮಾಡಿದ್ದಾದರೆ ಇಂದ್ರಿಯಗಳು ಹೊರಗಣ ವಿಷಯಗಳ ಕಡೆ ಹರಿಯದೆ ಅಂತರ್ಮುಖವಾಗುತ್ತದೆ. ಆಗ ಮಾನವನು ಅವುಗಳ ನಿರಂಕುಶ ಅಧಿಪತ್ಯದಿಂದ ತಪ್ಪಿಸಿಕೊಳ್ಳುತ್ತಾನೆ. ಇದು ಯೋಗದ ಐದನೆಯ ಹಂತ ಪ್ರತ್ಯಹಾರ. ಇದರಲ್ಲಿ ಇಂದ್ರಿಯಗಳನ್ನು ಹಿಡಿತಕ್ಕೆ ತರಲಾಗುತ್ತದೆ.

Join Our Whatsapp Group

ಈ ಹಂತ ಮುಟ್ಟಿದಾಗ ಸಾಧಕನು ಆತ್ಮದ ಅನ್ವೇಷಣೆಗೆ ತೊಡಗುತ್ತಾನೆ. ಇಂದ್ರಿಯ ವಿಷಯಗಳ ಆಕರ್ಷಣೆಯನ್ನು ತಪ್ಪಿಸಿಕೊಳ್ಳಲು ಅವುಗಳನ್ನು ಸೃಷ್ಟಿಸಿದ ಭಗವಂತನ ಭಕ್ತಿ ಎಂಬುದು ರಿಂದ ಮುಚ್ಚಿ ಕೊಳ್ಳಬೇಕಾಗುತ್ತದೆ.
“ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ”
ಎಂಬಂತೆ ಮನುಷ್ಯನ ಮನಸ್ಸಿನ ಆತನ ಬಂಧನಕ್ಕೆ ಅಥವಾ ಮುಕ್ತಿಗೆ ಕಾರಣ. ಇಂದ್ರಿಯಗಳು ವಿಷಯಗಳ ಜೊತೆ ಸೇರಿದರೆ ಬಂಧನ ಉಂಟಾಗುತ್ತದೆ ; ಜೊತೆಗೆ ಮುಕ್ತಿ ಸಿಗುತ್ತದೆ. ಯಾವಾಗ ಮನಸ್ಸು ಕಾಮನಗಳನ್ನ ತುಂಬಿರುತ್ತದೋ, ಸಂಕಟಪಡುತ್ತದೋ ಅಥವಾ ಯಾವುದಾದರೂ ವಿಚಾರದ ಬಗ್ಗೆ ದುಃಖ ಪಡುತ್ತದೋ ಆಗ ಬಂಧನಕ್ಕೆ ಒಳಗಾಗುತ್ತದೆ. ಕಾಮನೆಗಳೆಲ್ಲ ನಾಶವಾದರೆ ಮನಸ್ಸು ಶುದ್ಧವಾಗುತ್ತದೆ. ಶ್ರೇಯಪ್ರೇಯಗಳೆರಡೂ ಮನುಷ್ಯನನ್ನ ಕಾರ್ಯನಿರತರವನ್ನಾಗಿ ಮಾಡುತ್ತದೆ. ಯೋಗಿಯಾದವನು ಪ್ರಯಾವನ್ನು ಬಿಟ್ಟು ಶ್ರೇಯವಾದುದನ್ನು ಗಮನಿಸುತ್ತಾನೆ. ಇತರರು ಕಾಮನೆಗಳಿಂದ ಚೋದಿತರಾಗಿ ಪ್ರೇಯವಾದುದನ್ನ ಬಯಸಿ ಜೀವನದ ಧ್ಯೇಯವನ್ನು ಮರೆಯುತ್ತಾರೆ. ಯೋಗಿಯೂ ತಾನು ಏನೆಂದು ತಿಳಿದು ಸಂತಸದಲ್ಲಿರುತ್ತಾನೆ. ಯಾವುದೋ ವಿಷಕರವೂ ಅದನ್ನು ಬಯಸಿ ಅದನ್ನ ಸಹಿಸುವುದರ ಮೂಲಕ ಅಮೃತವನ್ನು ಅಂತ್ಯದಲ್ಲಿ ಗಳಿಸಬಹುದೆಂದು ಆತನಿಗೆ ಗೊತ್ತು. ಇತರರು ಯಾವುದು ಸುಖಕರವೆಂದು ಬಯಸುತ್ತಾರೋ ಅದರೊಂದಿಗೆ ಬೆರೆತು ಕೊನೆಗೆ ವಿಷವಾದುದನ್ನೇ ಉಣ್ಣುತ್ತಾರೆ.
ಹಿಂದೂ ತತ್ವಶಾಸ್ತ್ರದ ಪ್ರಕಾರ ಚಿತ್ ಶಕ್ತಿಯು ಮೂರು ರೂಪಗಳಲ್ಲಿ ವ್ಯಕ್ತಗೊಳ್ಳುತ್ತದೆ. ಮನುಷ್ಯನ ಜೀವ, ಚಿತ್ ಮತ್ತು ಎಲ್ಲಾ ವಿಶ್ವವೂ ಒಂದೇ ಪ್ರಕೃತಿಯ ವ್ಯಕ್ತರೂಪಗಳಾಗಿದ್ರು ಗುಣಗಳ ಪರಸ್ಪರ ಪ್ರಾತಿನಿರ್ಧಾಯದಿಂದ ಅವನಿಗೆ ಅವು ಬೇರೆ ಬೇರೆಯಾಗಿಯೇ ಕಾಣುತ್ತದೆ. ಈ ಗುಣಗಳಾವುವು ಎಂದರೆ, ೧.ಸತ್ವ (ಬೆಳಗುವ, ಶುದ್ಧವಾದ ಗುಣ) ಇದು ವಿಶದವಾದ ಮನಸ್ಸಿನ ಶಾಂತ ಸ್ಥಿತಿಗೆ ಕಾರಣವಾಗುತ್ತದೆ. ೨. ರಜಸ್ಸು (ಚಲನೆಗೆ, ಕ್ರಿಯೆಗೆ ಕಾರಣವಾದ ಗುಣ). ಇದು ಒಬ್ಬನನ್ನು ಕ್ರಿಯಾಶೀಲ-ಶಕ್ತಿಶಾಲಿಯನ್ನಾಗಿಯೂ, ಇಚ್ಛಾ ಹೊಲದ ತುಡಿತವುಳ್ಳವನನ್ನಾಗಿಯೂ ಮಾಡುತ್ತದೆ. ೩. ತಮಸ್ಸು (ಕತ್ತಲು, ತಡೆಗೆ ಕಾರಣವಾದ ಗುಣ) ಇದು ತಡೆಯುವಂಥ ಗುಣ, ರಜಸ್ಸಿನ ಕ್ರಿಯೆಗೆ ಅಡ್ಡ ಮತ್ತು ಸತ್ವದ ಪ್ರಕಾಶಕ್ಕೆ ತಡೆ ತರುವಂಥದು.
ತಮಸ್ಸು ಬ್ರಾಂತಿಯನ್ನುಂಟುಮಾಡುವ ಅವಿದ್ಯೆಗೆ ಕಾರಣವಾಗುವ ಮಂದಗುಣವುಳ್ಳದ್ದು, ಯಾರಾದರೂ ತಮಸ್ಸಿನ ಪ್ರಭಾವಕ್ಕೆ ಸಿಲುಕಿದರೆ ಅವನು ಮಂದಬುದ್ಧಿಗೆ ಒಳಗಾಗುತ್ತಾನೆ. ಸತ್ವವು ದೈವಿಕವಾದರೆ, ತಮಸ್ಸು ಅಸುರೀ. ಇವೆರಡರ ಮಧ್ಯೆ ರಜಸ್ಸು ನಿಲ್ಲುತ್ತದೆ.
ಗುಣಗಳ ಪರಸ್ಪರ ಪ್ರಾಧಾನ್ಯದ ಮೇಲೆ ಹೊಂದಿಕೊಂಡು ಮನುಷ್ಯನ ನಂಬಿಕೆ, ಆಹಾರ, ಯಜ್ಞಯಾದಿಗಳು, ಕೃತಿಗಳು, ದಾನಗಳು – ಇವೆಲ್ಲವೂ ನಿರ್ಧರಿತವಾಗುತ್ತದೆ.
ದೈವಿಕ ಗುಣವುಳ್ಳವನು ಶುದ್ಧನು ನಿರ್ಭಯನು ಆಗಿರುತ್ತಾನೆ. ಆತನು ಉದಾರಿ ಮಾತ್ರವಲ್ಲದೆ ನಿಗ್ರಹಿಯೂ ಆಗಿರುತ್ತಾನೆ. ಆತ್ಮದ ಅನ್ವೇಷಣೆಯಲ್ಲಿ ನಿರತರಾಗಿರುತ್ತಾನೆ. ಅಹಿಂಸಾಪರ, ಸತ್ಯವಂತ ಮತ್ತು ಕೋಪ ವಿವರ್ಜಿತನು ಆಗಿರುತ್ತಾನೆ. ಕರ್ಮಕ್ಕಾಗಿ ಕರ್ಮವನ್ನು ಮಾಡುತ್ತಾ ಕರ್ಮಫಲವನ್ನು ಬಿಡುತ್ತಾನೆ. ಆತನು ಶಾಂತಮನಸ್ಸು ಆಗಿದ್ದು, ಯಾರ ವಿಚಾರದಲ್ಲೂ ಕೆಟ್ಟ ಭಾವವನ್ನು ತಾಳದೆ ಉದಾರನಾಗಿರುತ್ತಾನೆ. ಏಕೆಂದರೆ ಅವನಿಗೆ ಆಸೆಗಳೇ ಇರುವುದಿಲ್ಲ. ಈತನು ಸಜ್ಜನ, ನಿರ್ಗವಿ ಮತ್ತು ಸೀಮಿತ ಗುಣವುಳ್ಳ ವ್ಯಕ್ತಿ. ಜಂಬರಹಿತನೂ, ವಿಶ್ವಾಸ ಅರ್ಹನೂ ಆದ ಇವನು ಜ್ಞಾನಿಯೂ ದೃಢ ನಿಶ್ಚಯವುಳ್ಳವನು, ಕ್ಷಮಾಶೀಲನು, ಸೌಮ್ಯನು ಆಗಿರುತ್ತಾನೆ.
ರಜೋಗುಣ ಹೆಚ್ಚಾಗುಳ್ಳವನಿಗೆ ಆಸೆಗಳು ಇನ್ನೂ ಒಳಗೆ ಉಳಿದಿರುತ್ತದೆ. ಆತನು ಕಾಮಿಯೂ ಆಗಿದ್ದು, ಇತರರನ್ನು ತೊಂದರೆಗೆ ಈಡುಮಾಡುತ್ತಾನೆ. ಕಾಮದೋಷಗಳಿಂದ ಪೀಡಿತನಾಗಿದ್ದು, ತೃಪ್ತಿಯನ್ನು ಪಡೆಯಲಾರದ ಸ್ಥಿತಿಯಲ್ಲಿರುತ್ತಾನೆ. ಚಂಚಲ ಮನಸ್ಕನಾಗಿ ಬಹುಬೇಗ ವಿಮಾನಸ್ಕನಾಗುತ್ತಾನೆ. ಎಲ್ಲವೂ ತನಗೆ ಬೇಕು ಎನ್ನುತ್ತಾನೆ. ಸ್ನೇಹಿತರ ಪ್ರೋತ್ಸಾಹ ಬಯಸುತ್ತಾನೆ. ಮನೆತನದ ಹೆಮ್ಮೆ ಇರುತ್ತದೆ. ಪ್ರಿಯವಾದದ್ದನ್ನೇ ಬಯಸುತ್ತಾನೆ. ಮಾತು ಕಹಿಯಾಗಿರುತ್ತದೆ. ಹೊಟ್ಟೆಗೆ ತೃಪ್ತಿ ಇರುವುದಿಲ್ಲ.
ಅಸುರೀ ಗುಣ ಉಳ್ಳವನು, ಮೋಸಗಾರ, ಉದ್ಧಟನಾಗಿರುತ್ತಾನೆ. ಕೋಪಿ,ಕ್ರೂರಿ ಮತ್ತು ಅವಿವೇಕಿ ಆಗಿರುತ್ತಾನೆ. ಅಂಥವರಲ್ಲಿ ಶುದ್ಧತೆಯೇ ಆಗಲಿ, ಸದಾಚಾರವಾಗಲಿ, ಸತ್ಯವಾಗಲಿ, ಇರುವುದಿಲ್ಲ. ಕಾಮಾ ದೃಶ್ಯಯನ್ನ ಹಿಂಗಿಸುವುದರಲ್ಲಿಯೇ ನಿರತರಾಗಿರುತ್ತಾರೆ. ಅನೇಕ ಕಾಮನೆಗಳಿಂದ ಮೋಹಿತರಾಗಿ ಬ್ರಾಂತರಾಗಿ, ಇಂದ್ರಿಯಾರಾಮ ಅವರು ನರಕಕ್ಕೆ ಹೋಗುತ್ತಾರೆ.
“ನೀನು ಆಸೆ ಪಡಬಾರದು” ಎನ್ನುವ ಸಾಮರ್ಥ್ಯ ಧರ್ಮಸೂತ್ರವನ್ನು ತೆಗೆದುಕೊಂಡು ಗುಣಗಳಲ್ಲಿ ವ್ಯತ್ಯಾಸವಿದ್ದರೂ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಗಮನಿಸಬಹುದು. ತಮೋಗುಣ ಪ್ರಧಾನರಾದವರು ಈ ಸೂತ್ರಕ್ಕೆ ಹೀಗೆ ಅರ್ಥ ನೀಡುತ್ತಾರೆ. ; “ನನ್ನದಾಗಿ ಏನಿದೆಯೋ ಅದು ಇತರರು ಅಪೇಕ್ಷೆ ಪಡಬಾರದು, ನಾನು ಅದನ್ನು ಹೇಗೆ ಪಡೆದೆ ಎನ್ನುವ ಮಾತು ಬೇಡ, ನನ್ನ ಸ್ವತ್ತನ್ನು ಅಪೇಕ್ಷೆ ಪಟ್ಟರೆ ಅವರನ್ನು ನಾಶಪಡಿಸುತ್ತೇನೆ”. ಆತ್ಮಲಾಭದಲ್ಲಿ ಯೋಚನೆ ಇಟ್ಟುಕೊಂಡವನಾದ ಪ್ರಜೋಗುಣ ಪ್ರಧಾನವಾದವನು ಹೀಗೆ ಹೇಳುತ್ತಾನೆ.; “ಇತರರು ನಮ್ಮ ಸ್ವತ್ತನ್ನು ಅಪೇಕ್ಷೆಪಡೆಬಹುದಾದುದ್ದರಿಂದ, ನಾನು ಯಾರ ಸ್ವತ್ತನ್ನು ಅಪೇಕ್ಷಿಸುವುದಿಲ್ಲ.” ಸೂತ್ರದ ಅಕ್ಷರಶಃ ಅರ್ಥವನ್ನು ಆತನು ಪಾಲಿಸುವನಾದರೂ ಅದರ ಭಾವ ಏನೆಂದು ಆತನು ಗಮನಿಸುವುದಿಲ್ಲ. ಆದರೆ ಸತ್ವಗುಣಪ್ರಧಾನನಾದವನು ಸೂತ್ರದ ಅಕ್ಷರಶಃ ಅರ್ಥಾವನ್ನೂ ನಿಷ್ಠೆಯಿಂದ ಪಾಲಿಸುತ್ತಾನೆ ಮತ್ತು ಅದು ಅತ್ಯಂತ ಮೌಲಿಕವಾದ ಸತ್ಯವೆಂದು ಗಣಿಸುತ್ತಾನೆ, ಧರ್ಮಕ್ಕಾಗಿ ಧರ್ಮವನ್ನು ಆಚರಿಸುತ್ತಾನೆ. ಅಲ್ಲದೆ ಆಚರಿಸದಿದ್ದರೆ ಅದಕ್ಕೆ ಮಾನವ ನಿಯೋಜಿತ ಶಿಕ್ಷೆ ಒಂದು ಇದೆ ಎಂದು ಭಾವಿಸಿ ಹಾಗೆ ನಡೆಯುವುದಿಲ್ಲ.
ಯೋಗಿಯು ಒಬ್ಬ ಮಾನವನೇ ಆದ್ದರಿಂದ ಆ ಗುಣಗಳಿಂದ ಪ್ರಭಾವಿತನಾಗುತ್ತಾನೆ. ಸತತವಾದ ಶಿಕ್ಷಿತಾ ಅಭ್ಯಾಸದಿಂದ ಆತನು ತನ್ನ ಇಂದ್ರಿಯಗಳು ಯಾವುದನ್ನು ಬಯಸುತ್ತವೆ ಎಂದು ತಿಳಿದುಕೊಂಡು ಯಾವ ಯೋಜನೆಗಳು ಮಾತುಗಳು ಕಾರ್ಯಗಳು ತಮಸ್ಸಿನಿಂದ ರಜಸ್ಸಿನಿಂದ ಉಂಟಾಗಿದೆ ಎಂದು ತಿಳಿಯುತ್ತಾನೆ. ಪ್ರಯತ್ನದಿಂದ ತಾಮಸಿಕ ಯೋಜನೆಗಳನ್ನ ನಿರ್ಮೂಲನಗೊಳಿಸಿ ಸಾತ್ವಿಕ ನೆಲೆಯಲ್ಲಿ ಮನಸ್ಸನ್ನು ನಡೆಯಲು ಬಿಡುತ್ತಾನೆ. ಸಾತ್ವಿಕ ಗುಣ ಒಂದೇ ನಿಂತಲ್ಲಿ ಆತ್ಮವೂ ಅಂತಿಮ ಗುರಿಯ ಕಡೆ ನಡೆದಿದೆಯೆಂದೇ ಅರ್ಥ.
ಭೂಮಿಯ ಗುರುತ್ವಾಕರ್ಷಣ ಶಕ್ತಿಯಂತೆಯೇ ಗುಣಗಳ ಸೆಳೆತವು ಕೂಡ. ಹೇಗೆ ಅತ್ಯುತ್ತಮ ಪರಿಶೋಧನೆ ಮತ್ತು ಶಿಕ್ಷಣದಿಂದ ವಿಶ್ವವನ್ನು ಅರಿಯಬೇಕಾಗುತ್ತದೆಯೋ ಹಾಗೆಯೇ ಸಾಧಕನಿಗೆ ವಿಶ್ವ ಕರ್ತೃವಿನೊಡನೆ ಸಮಾಧಾನ ಹೊಂದಲು ಗುಣಗಳ ಸೆಳೆತವನ್ನು ತಪ್ಪಿಸಿಕೊಳ್ಳಲು ಯೋಗದ ದೀರ್ಘ ಅಭ್ಯಾಸ ಮತ್ತು ಶಿಕ್ಷಣ ಬೇಕು.
ಸಾಧಕನಿಗೆ ವಿಶ್ವದ ಅಥವಾ ಅದರ ಕರ್ತೃವಿನ ಪೂರ್ಣತೆ ಅನುಭವವಾದಾಗ ಇಂದ್ರೀಯಾರ್ಥಗಳ ತ್ರಿಷೆ ಹೊರಟು ಹೋಗುತ್ತದೆ. ಆಗ ಅವುಗಳನ್ನ ಆತ ವೈರಾಗ್ಯ ಭಾವದಿಂದ ನೋಡುತ್ತಾನೆ. ಶೀತ- ಉಷ್ಣ, ದುಃಖ-ಸುಖ, ಗೌರವ-ಅಗೌರವ, ಗುಣ-ಅವಗುಣ ಮುಂತಾದವುಗಳಿಂದ ಯಾವ ತೊಂದರೆಯನ್ನು ಅನುಭವಿಸುವುದಿಲ್ಲ. ಜಯಗಳನ್ನು ಸಮದೃಷ್ಟಿಯಿಂದ ನೋಡುತ್ತಾನೆ. ಈ ದ್ವಂದಗಳಿಂದ ಮುಕ್ತನಾಗುತ್ತಾನೆ. ಗುಣಗಳ ಸೆಳೆತದಿಂದ ಪಾರಾಗಿ ಗುಣಾತೀತನಾಗುತ್ತಾನೆ. ಅವನು ಅಮೃತನಾಗುವನು. ವಿಶ್ವ ಚೈತನ್ಯದ ಪೂರ್ಣ ಅನುಭವದಲ್ಲಿಯೇ ಇರುವುದರಿಂದ ಆತನಿಗೆ ಪ್ರತ್ಯೇಕ ಅಸ್ತಿತ್ವಭಾವವೇ ಇರುವುದಿಲ್ಲ. ಅಂಥವನು ಯಾವುದನ್ನು ತೆಗಳದೇ ಎಲ್ಲವನ್ನು ಪೂರ್ಣತೆಯೆಡೆಗೆ ಕೊಂಡೊಯ್ಯುತ್ತಾನೆ.