ಪಿರಿಯಾಪಟ್ಟಣ : ಬಾಲಕಿಯ ಮೇಲೆ ಅತ್ಯಾಚಾರ ಮಾಡುವ ದೃಷ್ಟಿಯಿಂದ ಬಾಲಕಿಯನ್ನು ಬಂಧಿಸಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಗ್ರಾಮವೊಂದರಲ್ಲಿ ಸಂಬಂಧಿಕರ 8 ವರ್ಷದ ಬಾಲಕಿಯನ್ನು 17 ವರ್ಷದ ಬಾಲಕನೊಬ್ಬ ತನ್ನ ಮನೆಗೆ ಕರೆದೊಯ್ದು ಬಾಯಿಗೆ ಬಟ್ಟೆ ಕಟ್ಟಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 7 ಗಂಟೆಯವರಿಗೂ ಕೂಡಿಹಾಕಿದ್ದಾನೆ.
ಮಗು ಕಾಣದಿದ್ದಾಗ ನೆರೆಹೊರೆಯವರು ಹುಡುಕಲು ಆರಂಭಿಸಿದ್ದು, ಈತನ ಚಲನವಲನಗಳ ಗಮನಿಸಿದ ಬಾಲಕಿಯ ಅಜ್ಜಿ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಹೋಗಿ ರೂಂನ ಬಾಗಿಲು ತೆಗೆದು ನೋಡಿದಾಗ ಮಗುವನ್ನು ಕಟ್ಟಿ ಹಾಕಿರುವುದು ಗೊತ್ತಾಗಿದೆ.
ನಂತರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. ಬಾಲಕಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿದ ಸಂದರ್ಭದಲ್ಲಿ ಮಗುವಿನ ಮೇಲೆ ಯಾವುದೇ ಅತ್ಯಾಚಾರವಾಗಿಲ್ಲ.
ಆದರೆ ಈ ಪ್ರಯತ್ನಕ್ಕಾಗಿಯೇ ಈತ ಮಗುವನ್ನು ಕಟ್ಟಿಹಾಕಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಈತನನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿ, ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.