ಮನೆ ಸುದ್ದಿ ಜಾಲ ಮಸೀದಿ ಹಾಗೂ ದರ್ಗಾದಲ್ಲೂ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿ ವರ್ಧಕ ನಿಷೇಧ

ಮಸೀದಿ ಹಾಗೂ ದರ್ಗಾದಲ್ಲೂ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿ ವರ್ಧಕ ನಿಷೇಧ

0

ಬೆಂಗಳೂರು: ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ನಡುವಿನ ಅವಧಿಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ  ಎಂದು ಕರ್ನಾಟಕ ವಕ್ಫ್​ ಮಂಡಳಿ ಹೊರಡಿಸಿರುವ ಆದೇಶ ಹೊರಡಿಸಿದೆ.

ಧ್ವನಿವರ್ಧಕಗಳ ಮೂಲಕ ಅಜಾನ್​ ಅಥವಾ ಯಾವುದೇ ಇಸ್ಲಾಮಿಕ್​ ಕರೆಯನ್ನು ಇಲಾಖೆ ನಿರ್ಬಂಧನೆ ಹೇರಿದ ಅವಧಿಯಲ್ಲಿ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ.

ಶಬ್ಧ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿರುವ ಇಲಾಖೆ, ಮಸೀದಿ ಹಾಗೂ ದರ್ಗಾದ ಸುತ್ತಮುತ್ತ ಶಬ್ಧದ ಪ್ರಮಾಣ ಹೆಚ್ಚಿರುವುದು ಗಮನಕ್ಕೆ ಬಂದಿದೆ.

ಇದು ಮನುಷ್ಯನ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಮೇಲೆ ಅಡ್ಡಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾತಾವರಣದಲ್ಲಿನ ಶಬ್ಧ ಮಾಲಿನ್ಯ ನಿಯಂತ್ರಿಸಲು ಕಾಯ್ದೆಯೊಂದು ಜಾರಿಯಲ್ಲಿದೆ. ಅದರ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿವರ್ಧಕ ಬಳಸಕೂಡದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ನೂರು ಮೀಟರ್​ಗಳ ಅಂತರದಲ್ಲಿ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ನ್ಯಾಯಾಲಯವಿದ್ದರೆ ಅದನ್ನು ಶಬ್ಧ ರಹಿತ ವಲಯ ಎಂದು ಘೋಷಿಸಲಾಗುತ್ತದೆ.

ಈ ಪ್ರದೇಶದಲ್ಲಿ ಯಾವುದೇ ರೀತಿಯ ಧ್ವನಿ ವರ್ಧಕ, ಸಿಡಿಮದ್ದು, ಪಟಾಕಿ ಬಳಕೆ ಅಥವಾ ಸಾರ್ವಜನಿಕ ಘೋಷಣೆಗಳನ್ನು ಮಾಡಿದರೆ ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಹಿಂದಿನ ಲೇಖನಬೆಂಗಳೂರಿನ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ಧಾರ್ಮಿಕ ದತ್ತಿ ಇಲಾಖೆಯಿಂದ ನೋಟಿಸ್
ಮುಂದಿನ ಲೇಖನಮೇವು ಹಗರಣ; ಲಾಲೂ ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ಪ್ರಕಟಿಸಿದ  ವಿಶೇಷ ಸಿಬಿಐ ಕೋರ್ಟ್