ಈ ರೀತಿಯಾಗಿ ದೀನನಾದ ದೇವೇಶ್ವರನು ಸತ್ಯಲೋಕಕ್ಕೆ ಹೋಗಿ ಬ್ರಹ್ಮನೊಂದಿಗೆ ತನಗೆ ಒದಗಿದ ಆಪತ್ತಿನ ಬಗ್ಗೆ ನಿವೇದಿಸಿದನು. ಬ್ರಹ್ಮನು ಆತನನ್ನು ಸಮಾಧಾನಪಡಿಸಿ, ಅತ್ರಿತನಯನಾದ ಆ ಮುಕ್ಕೋಪಿಗೆ ಕೋಪವೇ ಹೊರತು ಶಾಂತ ಸೌಭಾವವಿಲ್ಲ. ಏನಾದರೂ ಆತನ ಕೋಪಾಗ್ನಿಯು ಈ ದಿವಿಜ ಲೋಕ ಸಂಪತ್ತುಗಳಿಗೆ ಮಾತ್ರವೇ ಪ್ರಸರಿಸಿದೆ.
ಆತನ ಕೋಪಕ್ಕೆ ಗುರಿಯಾಗಿ ತಪ್ಪಿಸಿಕೊಂಡಿರುವವನು ನೀನೊಬ್ಬನೇ ಅಷ್ಟೇ ಸಾಕು. ಆ ದೂರ್ವಾಸನ ಕೋಪವೆಂದರೆ ನಾನೇ ಭಯಪಟ್ಟು ನಡುಗುತ್ತೇನಲ್ಲವೇ” ಎಂದನು. ಆಪತ್ತುಗಳನ್ನೆಲ್ಲ ಕಳೆದು, ಸುಖ ಸ್ಥಾನಗಳನ್ನುಕೊಟ್ಟು ಸಂತಾಪಗಲನ್ನು ತೊಲಗಿಸಿ ಸುಖ ಸಂಪತ್ತುಗಳೊಂದಿಗೆ ನಮ್ಮನ್ನು ಕಾಪಾಡಲು ಅ ಶ್ರೀಮನ್ನಾರಾಯಣನಿದ್ದಾನೆ. ಆ ಪರಂಧಾಮನನ್ನು ಶರಣಾಗತಿ ಬೇಡುವುದೊಂದೇ ನಮಗೆ ದಾರಿ ಎಂದನು. ಪಿತಾಮಹ ಆದೇಶವನ್ನು ಅನುಸರಿಸಿ ದೇವೇಂದ್ರನು ಕ್ಷೀರ ಸಮುದ್ರದಲ್ಲಿರುವ ಶ್ವೇತ ದ್ವೀಪಕ್ಕೆ ಹೋದನು. ಅದರಲ್ಲಿಯೇ ವಾಸುದೇವನ ನಿವಾಸ ಮದಿರವಾದ ವೈಕುಂಠ ನಗರವಿದೆ. ಆ ವೈಕುಂಠದಲಿ ವೇದ ವೇದಾಂತಗಣನ್ನು ಸ್ವಾಧೀನ ಪಡಿಸಿಕೊಂಡು ಆತ್ಮ ಜ್ಞಾನವನ್ನು ಸಂಪಾದಿಸಿದ ಸನಕ ಸನಂದಾದಿ ಮುನಿವರೇಣ್ಯರು ಶ್ರೀ ಹರಿ ಸನ್ನಿಧಾನಪ್ರವರ್ತರಾಗಿ ಪ್ರತಿನಿತ್ಯವು ಆತನನು ಸೇವಿಸುತ್ತಿದ್ದಾರೆ. ಮಹನೀಯ ಶೇಷತಲ್ಪದ ಮೇಲೆ ಕೋಟಿ ಮನ್ಮಥರನ್ನು ನಾಚಿಸುವಂತಹ ಸೌಂದರ್ಯ ರತ್ನಾಕರನಾದಂತಹ ಶ್ರೀಮನ್ನರಾಯಣನು ಹಚ್ಚ ಹಸುರಿನ ರೇಷ್ಮೆವಸ್ತ್ರಗಳನ್ನು ಧರಿಸಿ,
ಶ್ರೀ ವತ್ಸ ಲಾಂಛನವನ್ನು, ಕೌಸ್ತುಭ ಮಣಿಯನ್ನು, ವೈಜಯಂತಿ ಮಾಲೆಯನ್ನು, ಅನಂತ ಭೋಗ ಚಿಹ್ನೆಗಳಾದ ಅಮೂಲ್ಯ ಅಲಂಕಾರಗಳನ್ನು ಧರಿಸಿ, ಶೋಭಾಯಮಾನವಾಗಿ ಕಾಣಿಸುತ್ತಿದ್ದಾರೆ. ಸರ್ವಲೋಕಗಳಿಗೂ ಅಭಯಪ್ರದವನ್ನು ಪ್ರಾಸಾಧಿಸುತ್ತಿರುವ ಆತನ ಕರಪದ್ಮಗಳಲ್ಲಿ ಪಾಂಚಗನ್ಯ ಶಂಖ, ಸುದರ್ಶನ ಚಕ್ರ, ಶಾರ್ಜಕೋದಂಡ, ಕೌಮಾದ ಗಧೆಗಳಿವೆ. ಯಾವ ದೇವನ ಪಾದ ಪದ್ಮಗಳನ್ನು ಕಣ್ಣಾರೆ ಕಂಡು ಪಾವನವಾಗಬೇಕೆಂದು ಪರಮಹಂಸರೂ ಸಹ ಆತುರಪಡುತ್ತಿರುವರೋ, ಯಾವ ಪರಮಪರಾತ್ಪರ ಕರುಣಾಕಟಾಕ್ಷದಿಂದ ಜನ್ಮ ಜನ್ಮಗಳ ಪಾಪಬಂಧನಗಳು ನಾಶವಾಗುತ್ತವೆಯೋ ಆ ಮಹಾನುಭಾವನು, ಕೇಶ, ಮಾಧವ, ಗೋವಿಂದ, ಮುಕುಂದ, ಪರಮಾನಂದ, ಜನಾರ್ಧನನೂ, ಜಗನ್ನಾಥನೂ ಆದ ಶ್ರೀ ಮಹಾವಿಷ್ಣು ನಯನಾಭಿರಾಮತೇಜೋವಿಲಾಸದೊಂದಿಗೆ ಮಂದಹಾಸ ಸುಂದರ ವದನಾರವಿಂದನಾಗಿ ಅಮರೇಂದ್ರನನ್ನು ಕಂಡು ಮಾತನಾಡಿಸಿದನು. ದೇವೇಂದ್ರನು ತನಗೆ ಬಂದೊದಗಿದ ಆಪತ್ತನ್ನು ವಿವರಿಸಿ ಶರಣು ಬೇಡಿದನು. ಆಗ ನಾರಾಯಣನು ನೀನು ಈಗಲೇ ಹೋಗಿ ದಾನವರೊಂದಿಗೆ ಮಾತನಾಡಿ ಅವರನ್ನು ಇಲ್ಲಿಗೆ ಕರೆದುಕೊಂಡು ಬಾ. ಮಂದರ ಪರ್ವತವನ್ನು ಕೋಲನ್ನಾಗಿ, ವಾಸಿಕಿ ಸರ್ಪವನ್ನು ಅದಕ್ಕೆ ಹಗ್ಗವನ್ನಾಗಿ ಮಾಡಿಕೊಂಡು ಈ ಕ್ಷೀರ ಸಾಗರವನ್ನು ಮಥಿಸಿರಿ. ಅದರಿಂದ ಔಷಧೀಲತೆಗಳು, ದಿವ್ಯೈಶ್ವರ್ಯ ಸಂಪತ್ತುಗಳು, ಅಮೃತವು ಉದ್ಭವಿಸುತ್ತದೆ. ನಿನಗೆ ಪುನಃ ಸ್ವರ್ಗ ಪರಿಪಾಲನೆಯು ಪ್ರಾಪ್ತಿಯಾಗುತ್ತದೆ. ಕೂಡಲೇ ಕರ್ತವ್ಯೋನ್ಮುಖನಾಗಿ ಕಾರ್ಯ ಸಾಧನೆ ಮಾಡು” ಎಂದು ಹೇಳಿ ಕಳುಹಿಸಿದನು.