ಮನೆ ಮನೆ ಮದ್ದು ಮೆಂತೆ ಬೀಜ

ಮೆಂತೆ ಬೀಜ

0

ಇದೊಂದು ಸಾಂಬಾರ ಪದಾರ್ಥ. ಭಾರತದಲ್ಲಿ ಸೊಪ್ಪು, ತರಕಾರಿ ಮತ್ತು ಬೀಜಕ್ಕಾಗಿ ಇದರ ಕೃಷಿಯಾಗುತ್ತದೆ. ಕಹಿ, ರುಚಿ ಆದರೆ ಹೊಟ್ಟೆಗೆ ಹಿತ. ಸಿಹಿಮೂತ್ರ ರೋಗಿಗಳಿಗೆ ಹಿತವಾದದ್ದು. 6 ರಿಂದ 16 ಇಂಚು ಬೆಳೆಯುತ್ತದೆ. ಸಂಯುಕ್ತ ಎಲೆ 3 ಇಂಚು ಉದ್ದನ ಕಾಯಿ, ಒಳಗೆ 10-20 ಹಳದಿ ಬೀಜಗಳಿರುತ್ತದೆ.

ಶೇ. 16ರಷ್ಟು ಪ್ರೋಟೀನ್, ಸ್ಟಾಡಿನ್, ಗ್ಲೋಬುಲಿನ್, ಆಲ್ಬುಮಿನ್, ರಂಜಕದಂತಹ ರಾಸಾಯನಿಕಗಳುಳ್ಳ ಬೀಜಗಳು. ಟ್ರೈಗೋನೆಲಿನ್, ಕೋಲೀನು, ರಂಜಕಾಮ್ಲ, ಲೆಸಿಥಿನ್, ಕಾರ್ಡ್ಲಿವರ್ ಎಣ್ಣೆಗೆ ಸಮನಾಗುವ ನ್ಯೂಕ್ಲಿಯೋ ಆಲ್ಬುಮಿನ್ ಗಳಿವೆ. ಲೋಳೆ ಅಂಟು ಗುಣದ ಬೀಜ ದೇಹಕ್ಕೆ ತಂಪು ಆದರೆ ಹೊಟ್ಟೆ ಹಸಿವೆ ವರ್ದಿಸುತ್ತದೆ. ಬಲವರ್ಧಕ, ವೃಷ್ಮ, ವಾತಹಾರ, ಗರ್ಭಾಶಯ ಸಂಕೋಚಕ, ಎದೆ ಹಾಲು ಹೆಚ್ಚಿಸುವ ಮತ್ತು ಬಾವು ಪರಿಹಾರಕ್ಕೆ ಗುಣವುಳ್ಳದ್ದು, ಎಲೆಗಳು ಶೀತಕಾರಿ ಉರಿ, ಪರಿಹಾರಿ, ಮಲ ಸರಾಗ ಗೊಳಿಸುತ್ತದೆ.

ಔಷಧೀಯ ಗುಣಗಳು :-

* ಚರ್ಮ, ಕೂದಲಿನ ನುಣುಪುತನಕ್ಕೆ ಮೆಂತೆ ಹಿಟ್ಟು ಕಲಸಿ ಹಚ್ಚುವುದರಿಂದ ಕೂದಲು ಉದುರುವಿಕೆ, ತಲೆಯ ನವೇ, ಉರಿ ಪರಿಹಾರಕ್ಕೆ ಲೇಪನದಿಂದ ಲಾಭ.

* ಬಿಳಿಮುಟ್ಟು ತೊಂದರೆಗೆ ಮೆಂತೆ ಬೀಜ ಅರೆದು ತಯಾರಿಸಿದ ಬತ್ತಿಯನ್ನು ಸ್ಥಾನಿಕವಾಗಿ ಇರಿಸಿದರೆ ಲಾಬ.

* ಮೆಂತೆ ಎಲೆ ಅರೆದು ಹಚ್ಚಿದರೆ ಉರಿಯೂತ, ಉರಿ ಉಪಶಮನ.

* ಪಶುಗಳ ದೌರ್ಬಲ್ಯದಲ್ಲಿ ಮೆಂತೆಸೊಪ್ಪು ತಿನ್ನಿಸಿದರೆ ಬಹಳ ಲಾಭವಿದೆ. ಪುಷ್ಟಿ ದೊರೆಯುತ್ತದೆ.

* ಮೆಂತೆ ಲಡ್ಡು ತಯಾರಿಸಿ ಬಾಣಂತಿಗೆ ತಿನಿಸುವುದರಿಂದ ಸೂತಿಕ ಮುಟ್ಟು ಸ್ರಾವಕ್ಕೆ, ಎದೆಹಾಲು ವೃದ್ಧಿಗೆ ಬೀಜಗಳು ಪೂರಕವಾಗಿದೆ. ಅಜೀರ್ಣ, ಅಗ್ನಿಮಾಂದ್ಯ, ಅಮವಾತಕ್ಕೆ ಮದ್ದು, ಕಾಮವರ್ಧಕ ಕೂಡಾ ಆಗಿದೆ.

* ರಕ್ತಭೇದಿ, ಕೋರ, ದಡಾರದಲ್ಲಿ ಬೀಜ ನೆನೆಸಿ ಅರೆದು ಕುಡಿಯಬೇಕು.

* ಬೇಧಿ ನಿಲ್ಲಿಸಲು ತುಪ್ಪದಲ್ಲಿ ಹುರಿದ ಮೆಂತೆ ಪುಡಿ ಸೇವನೆಯಿಂದ ಲಾಭವಿದೆ.