ಮನೆ ದೇವರ ನಾಮ ಭವ್ಯರೂಪ

ಭವ್ಯರೂಪ

0

ಎಂಥಾ ರೂಪವೋ ನಿನ್ನದು….

ಎಂಥಾ ರೂಪವೋ || ಪ

ನೀಲಾಕಾಶದ ಬಣ್ಣವೋ

ಎಂಥಾ ರೂಪವೋ || ಅ ಪ

ಹಾಲಿನ ಕೆನೆ ಬಣ್ಣದಂತೆ ಬಣ್ಣ ನಿನ್ನದು

ಹೊಸ ಬೆಣ್ಣೆಯಂತೆ ನುಣುಪು ಕೆನ್ನೆ ನಿನ್ನದು

ಜಗದ ಸಾರ ಹೀರುವ ಮೂಗು ನಿನ್ನದು

ಮೊಗದಗಲ ಕಾಂತಿಯು ಮಿಂಚುತ್ತಿರುವುದು || 1

ಬೆಟ್ಟ ಗುಡ್ಡಗಳಂತೆ ದೇಹ ನಿನ್ನದು

ಸೂರ್ಯ ಚಂದ್ರನಂತೆ ಕಣ್ಣು ನಿನ್ನದು

ಸಪ್ತಸಾಗರದ ಆಳದಂತೆ ಭಾವ ನಿನ್ನದು

ತೃಪ್ತವಾಯಿತು ನಿನ್ನ ಕಂಡ ಹೃದಯ ನನ್ನದು || 2

ಎಷ್ಟು ಜನ್ಮದ ಪುಣ್ಯದ ಫಲವೋ

ನಿನ್ನ ರೂಪ ತೋರಿದೆ ಎನೆಗೆ…

ಮೂಢಮತಿಯು ನಾನಾರಿತೆನಿಂದು ಸಿಹಿ ಮಧುರ |

ಜಾಹ್ನವಿ ವಿಠಲನ ನಿನ್ನನ್ನು ಕೊನೆಗೆ… || 3

ಹಿಂದಿನ ಲೇಖನಮಹರ್ಷಿ ವಾಲ್ಮೀಕಿ ಎಲ್ಲರಿಗೂ ಆಧರಣೀಯ ಪುರುಷರು: ಡಾ.ಹೆಚ್.ಸಿ.ಮಹದೇವಪ್ಪ
ಮುಂದಿನ ಲೇಖನಮೆಂತೆ ಬೀಜ