ಮನೆ ಸಾಹಿತ್ಯ ನೀವು ಮಾಡಿದ್ದಕ್ಕೆ ಜವಾಬ್ದಾರಿ ತೆಗೆದುಕೊಳ್ಳಿ

ನೀವು ಮಾಡಿದ್ದಕ್ಕೆ ಜವಾಬ್ದಾರಿ ತೆಗೆದುಕೊಳ್ಳಿ

0

ಕ್ರೀಡೆಗೆ ಅತ್ಯಂತ ನಿಷ್ಠನಾಗಿದ್ದ ಓರ್ವ ಬಿಲ್ಲುಗಾರ ವಿಶ್ವ ಪ್ರಸಿದ್ಧನಾದನು. ಆದರೆ ಪ್ರಖ್ಯಾತಿ ಅವನ ತಲೆಗೇರಿತು. ಒಂದು ದಿನ ಬೆಳ್ಳಿಗೆ ಸಮೀಪದ ಪಟ್ಟಣದ ಅಧಿಕಾರಿಯೊಬ್ಬ ಅವನ ಬಳಿ ಬಂದು ತನ್ನ ಮಗನಿಗೆ ತರಬೇತಿ ನೀಡುವಂತೆ ಬಿಲ್ಲುಗಾರನನ್ನು ಕೋರಿದನು. ಅದರಿಂದ ಉಬ್ಬಿ ಹೋದ ಆತನು ಆ ಸಣ್ಣ ಹುಡುಗನ ಮುಂದೆ ತನ್ನ ಕೌಶಲ್ಯ ಪ್ರದರ್ಶಿಸತೊಡಗಿದನು. ಬಾಣ ಸರಿಯಾಗಿ ಗುರಿ ತಲುಪಿದಾಗ ಅವನು ತನ್ನನ್ನು ತಾನು ಜೋರಾಗಿ ಹೊಗಳಿಕೊಂಡನು. ಆದರೆ ಮುಂದಿನ ಬಾಣ ಗುರಿ ತಪ್ಪಿದಾಗ ಬಿಲ್ಲುಗಾರ ಕೋಪಗೊಂಡು ಗಾಳಿ ಅಬ್ಬರವನ್ನು ಶಪಿಸಿದನು.

ಸಂದೇಶ :-

ಎಲ್ಲಾ ಸರಿಯಾಗಿದ್ದಾಗ ಅದರ ಹಿರಿಮೆಯನ್ನು ತನ್ನದೆಂದು ಹೇಳಿಕೊಳ್ಳುವ ಮತ್ತು ಏನಾದರೂ ತಪ್ಪಾದಾಗ ಅದಕ್ಕೆ ಬೇರೊಬ್ಬರನ್ನು ದೂಷಿಸುವ ಅಭ್ಯಾಸವು ಅನೇಕರಲ್ಲಿದೆ. ಈ ಧೋರಣೆಯನ್ನ ಬದಲಿಸಿಕೊಂಡು ಪ್ರತಿಯೊಬ್ಬರೂ ತಮ್ಮ ಕ್ರಿಯೆಗಳಿಗೆ ತಾವೇ ಹೊಣೆ ಹೊರುವಂತಾಗಬೇಕು.

ಪ್ರಶ್ನೆಗಳು :-

1.ಈ ಸಮಯದಲ್ಲಿ ಬಿಲ್ಲುಗಾರ ಏನು ಹೇಳಿದ ?

2.ಈ ಕಥೆಯ ಪರಿಣಾಮವೇನು?

ಉತ್ತರಗಳು :-

1.ಗುರಿ ತಪ್ಪಿದ್ದಕ್ಕೆ ಆ ಬಿಲ್ಲುಗಾರ ಗಾಳಿ ಅಬ್ಬರವನ್ನು ದೂರಿದನು.

2.ಎಲ್ಲವೂ ಸರಿಯಾಗಿದ್ದಾಗ ಅದರ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡು ತಪ್ಪಾದಾಗ ಅದಕ್ಕೆ ಬೇರೆಯವರನ್ನು ದೃಷಿಸುವ ಅಭ್ಯಾಸ ಅನೇಕರಲ್ಲಿದೆ. ಈ ಧೋರಣೆಯು ಬದಲಾಗಿ ತಮ್ಮ ಕ್ರಿಯೆಗಳಿಗೆ ತಾವೇ ಹೊಣೆ ಹೊರುವಂತಾಬೇಕು.