ಮನೆ ದೇವರ ನಾಮ ಇಲ್ಲವೆನ್ನಲಾರೆನೋ….

ಇಲ್ಲವೆನ್ನಲಾರೆನೋ….

0

ಇಲ್ಲವೆನ್ನಲಾರೆನೋ ಹರಿ ಬೇಕಾದದ್ದು ಬಂದು ಕೇಳಿದರು |

ಕೊಡಲು ತಾ ನಿಂತಿಹನೊ ಸಪ್ತಗಿರಿವಾಸ |

ಶ್ರೀನಿವಾಸ || (ಪ)

ಬರಿಗೈಯಲ್ಲಿ ಬನ್ನಿರಿ ಬಿನ್ನಪವಾ ಹೇಳಿರಿ |

ಕೊಟ್ಟು ಬಿಡುವೆ ಎಂದೆನ್ನುತ  ಶ್ರೀನಿವಾಸ || (1)

ಮನದ ಮಲವ ತೊಳೆಯರಿ ಮಡಿ, ಮಡಿ ಎನ್ನದಿರಿ

ಡಂಭಾಚಾರ ಮಾಡದೆ ಮುಂದೆ ಬನ್ನಿರಿ || (2)

ಜಂಭವ ಬಿಡಿರಿ ನಮಗೆ ಇಡಿರಿ |

ಬೇಡಿದ್ದೆಲ್ಲವ ಪಡೆದು ಸುಖಿಯಾಗಿರಿ || (3)

ವ್ಯಸನವ ಬಿಟ್ಟು ಧರ್ಮದಿ ಬಾಳಿರಿ, |

ಜಹ್ನವಿ ವಿಠಲನ ನೆನೆಯಿರಿ || (4)