ಮನೆ ಯೋಗಾಸನ ಉಷ್ಟ್ರಾಸನ

ಉಷ್ಟ್ರಾಸನ

0

ʼಉಷ್ಟ್ರʼವೆಂದರೆ ಒಂಟೆ. ಆ ಆಕಾರವನ್ನು ತರುವ ಆಸನವಾದುದರಿಂದ ಈ ಹೆಸರು.


ಅಭ್ಯಾಸ ಕ್ರಮ :-
೧. ಮೊದಲು ನೆಲದ ಮೇಲೆ ಮಂಡಿಯೂರಿ ತೊಡೆ ಮತ್ತು ಪಾದಗಳನ್ನು ಒಂದಕ್ಕೊಂದು ಕೂಡಿಸಿಟ್ಟು ಕಾಲ್ ಬೆರಳುಗಳನ್ನ ಹಿಂದಿನ ದಿಕ್ಕಿಗೆ ತಿರುಗಿಸಿ, ನೆಲದ ಮೇಲೆ ಒರಗಿಸಿಡಬೇಕು.
೨. ಅಂಗೈಗಳೆರಡನ್ನು ಟೋಂಕಗಳ ಮೇಲೆ ಒರಗಿಸಿ, ತೊಡೆಗಳನ್ನು ನೀಳವಾಗಿ ಮೇಲೆತ್ತಿ ಬೆನ್ನುಮೂಳೆಯನ್ನು ಸ್ವಲ್ಪ ಓರೆಯಾಗಿಸಿಟ್ಟು ಪಕ್ಕೆಲೆಬುಗಳನ್ನ ಹಿಗ್ಗಿಸಬೇಕು.
೩. ಉಸಿರನ್ನು ಹೊರಕ್ಕೆ ಬಿಟ್ಟು, ಬಲದಂಗೈಯನ್ನು ಬಲಗಾಲ ಹಿಮ್ಮಡಿಯ ಮೇಲೆ ಮತ್ತು ಎಡದಂಗೈಯನ್ನು ಎಡಗಾಲ ಹಿಮ್ಮಡಿಯ ಮೇಲೆ ಬರುವಂತೆ ಇಡಬೇಕು. ಸಾಧ್ಯವಾದರೆ ಅಂಗೈಗಳನ್ನ ಅಂಗಾಲುಗಳ ಮೇಲೆ ಒರಗಿಸಬೇಕು.
೪. ಆಮೇಲೆ ಪಾದಗಳನ್ನು ಅಂಗೈಗಳಿಂದ ಒತ್ತಿ ತಲೆಯನ್ನು ಹಿಂದಕ್ಕೆ ಬಗ್ಗಿಸಿ ತೊಡೆಗಳನ್ನು ನೆಲಕ್ಕೆ ಲಂಬವಾಗಿ ನಿಲ್ಲಿಸಿ ಬೆನ್ನೆಲುಬನ್ನು ತೊಡೆಗಳ ದಿಕ್ಕಿಗೆ ಔಕಬೇಕು.
೫. ಈಗ ಪೃಷ್ಠಗಳೆರಡನ್ನೂ ಔಕಿಟ್ಟು ಬೆನ್ನು ಮೂಳೆಯ ಮತ್ತು ಬೆನ್ನುಹುರಿಯ ತಳ ಭಾಗದ ಪ್ರದೇಶಗಳನ್ನು ಜಗ್ಗಿ ಎಳೆದು ಕತ್ತನ್ನು ಹಿಂದಕ್ಕೆ ಸಳೆದಿಡಬೇಕು.
೬. ಸ್ಥಿತಿಯಲ್ಲಿ ಸುಮಾರು ಅರ್ಧ ನಿಮಿಷವಿದ್ದು, ಸಮ ಸ್ಥಿತಿಯಲ್ಲಿ ಉಸಿರಾಡಬೇಕು.
೭. ಕೊನೆಯಲ್ಲಿ ಕೈಗಳು ಒಂದೊಂದು ಮೇಲಕ್ಕೆ ತೆಗೆದು ಅವುಗಳನ್ನು ಟೋಂಕಗಳ ಮೇಲಿರಬೇಕು. ಆಬಳಿಕ ನೆಲದ ಮೇಲೆ ಕುಳಿತು ವಿಶ್ರಾಮಿಸಬೇಕು.
ಪರಿಣಾಮಗಳು :-
ಜೋಲು ಹೇಗಲು ಮತ್ತು ಗೂನುಬೆನ್ನು ಇರುವವರಿಗೆ ಈ ಆಸನಭ್ಯಾಸವು ಹೆಚ್ಚುಫಲಕಾರಿ.
ಅಲ್ಲದೆ ಈ ಆಸನದಿಂದ ಬೆನ್ನೆಲುಬುಗಳನ್ನು ಹಿಂದಕ್ಕೆ ಬಗ್ಗಿ ಬಲಗೊಳ್ಳುವವು. ಈ ಆಸನವನ್ನು ವಯಸ್ಕರರು ಬೆನ್ನೆಲುಬಿನಲ್ಲಿ ಗಾಯಗೊಂಡವರು ಅಭ್ಯಾಸಿಸಿ, ಅದರಿಂದ ಉತ್ತಮ ಫಲವನ್ನು ಪಡೆಯಬಹುದು.