ಮನೆ ದೇವರನಾಮ ನೀನಿರುವತನಕ

ನೀನಿರುವತನಕ

0

ನೀನಿರುವತನಕಾ ನನಗ್ಯಾಕೆ ಅಂಜಿಕೆ |
ನೀನೀರುವೆ ಕಾಯಲು ತಂದೆ ಈ ಜನ್ಮಕೆ || ಪ
ಪರರ ಗೊಡವೆಯ ಚಿಂತೆ ಬಿಡಿಸೋ ಎನ್ನಯ್ಯ |
ಹಗಲಿರಿಳು ನಿನ್ನ ನಾಮ ಸ್ಮರಣೆ ಕರುಣಿಸಯ್ಯ ||
ನಾನು ಎನ್ನದು ಎಂಬ ಮೋಹ ಪಾಸದಲಿ |
ಮುಳುಗಿ ಏಳುತ ಬೆಂಟಾದೆನೋ ಹರಿಯೇ || 1

ಮನದ ಮೋಹ ಬಿಟ್ಟೋಗಿಸು |
ಪದುಮನಾಭ ನಿನ್ನ ನಾಮ ಸ್ಥಿರಗೊಳಿಸು ||
ದಾರಿ ಕಾಣದೆ ಕುರುಡಳಂತಡ ಬಳಲುತಲಿರುವೆ |
ಬೆಳಕಾಗಲಿ ನೀ ಬೇಗ ಬಾರೋ ಪ್ರಭುವೆ || 2
ಸಾಕಲಾರದೆ ಎನ್ನ ದೂರ ಮಾಡುವುದು ಸರಿಯೇ |


ನೂಕುವುದು ನಿನಗೆ ತರವಲ್ಲ ದೊರೆಯೇ ||
ಪಾಪಿಯು ನಾನೆಂದು ದಿಕ್ಕರಿಸದೆ ಬಂದು |
ಮನ್ನಿಸೋ ವರ ಜಾಹ್ನವಿ ವಿಠಲನ ನೀನಿಂದು || 3