ಮನೆ ದೇವರ ನಾಮ ನಮಿಪೆ ಅನವರತಾ

ನಮಿಪೆ ಅನವರತಾ

0

ನಮಿಪೆ ಅನವರತಾ

ತ್ರಿಹುಣ ರಹಿತ

ದತ್ತದೇವನ ಸ್ಮರಿಸುತಾ

ನಮಿಪೆ ಅನವರತಾ || ಪ

ಅನಸೂಯ ಸುತನಾ

ಅತ್ರಿಯ ಮುನಿಯ ಕಂದನಾ

ತ್ವರಿತದಿಂದ ಬರುವ ಗುರುರಾಯನಾ

ಕಾಮಿತ ಫಲವ ಕೊಡುವ ದೇವನಾ

ನಮಿಪೆ ಅನವರತಾ || 1

ಜ್ಞಾನಮಯವಾದ ವಿಜ್ಷಾನ ಸಂಪನ್ನನಾ

ಅಜ್ಞಾನವನ್ನೋಡಿಸುವ ದತ್ತಾನಾ

ಕರ್ಮ ಕಳೆಯುವ ಮಹಾನೀಯನಾ

ಧರ್ಮದಾರಿಯಲಿ ನಡೆಯುವವನ

ನಮಿಪೆ ಅನವರತಾ || 2

ಬ್ರಹ್ಮ, ವಿಷ್ಣು, ಮಹೇಶ್ವರ ಅಂಶಜ

ದೂರ್ವಾಸ ಮುನಿಯ ಸನುಜ

ವರ ಗಾಣಾಗಾಪುರದಲಿ ವಾಸಿ

ಜಾಹ್ನವಿ ವಿಠಲನ ಹೃದಯವಾಸಿ

ನಮಿಪೆ ಅನವರತಾ || 3