ಮನೆ ಸ್ಥಳೀಯ ಡಿಸೆಂಬರ್ 02 ರಂದು ಉದ್ಯೋಗ ಮೇಳ

ಡಿಸೆಂಬರ್ 02 ರಂದು ಉದ್ಯೋಗ ಮೇಳ

0

ಮೈಸೂರು: ನಗರದ ಎನ್.ಆರ್.ಮೊಹಲ್ಲಾದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಚೇರಿಯ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಅವರಣದಲ್ಲಿ, ಡಿಸೆಂಬರ್ 02 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಐಟಿಐ (ಫೀಟ್ಟರ್) ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ “ಉದ್ಯೋಗ ಮೇಳ ವನ್ನು ಆಯೋಜಿಸಲಾಗಿದೆ.

ಈ ಉದ್ಯೋಗ ಮೇಳದಲ್ಲಿ ಕಲರ್‌ಟೋನ್ ಪ್ಲಾಟ್ ನಂ.140-ಎ, ಕೆಐಡಿಬಿ ಬದನೆಗುಪ್ಪೆ, ಚಾಮರಾಜನಗರ ಇವರಿಂದ ಐಟಿಐ (ಫೀಟ್ಟರ್) ನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಖಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ವಯೋಮಿತಿ 18 ರಿಂದ 27 ವರ್ಷಗಳು ಹಾಗೂ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನೇಮಕಾತಿ ಹೊಂದುವ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ, ಪ್ರಯಾಣ ಭತ್ಯೆ ಹಾಗೂ 13000 ರಿಂದ 16000ರೂಗಳ ವೇತನ ನೀಡಲಾಗುವುದು.

 ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸಹಾಯಕ ನಿರ್ದೇಶಕರು ಅಥವಾ ದೂರವಾಣಿ ಸಂಖ್ಯೆ:0821-2489972ರಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.