ಮನೆ ರಾಜ್ಯ ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಹೆಣ್ಣು ಮಗು ಪತ್ತೆ

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಹೆಣ್ಣು ಮಗು ಪತ್ತೆ

0

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತಾಲೂಕಿನ ಬೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೋರಿ ಬಳಿ 3 ದಿನದ ಹೆಣ್ಣು ಮಗು ಪತ್ತೆಯಾಗಿದೆ.

ಮಗುವನ್ನು ಗಮನಿಸಿದ ಸ್ಥಳೀಯರು ಮಕ್ಕಳ ಸುರಕ್ಷಾ ಕೇಂದ್ರಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸುರಕ್ಷಾ ತಂಡ ಮಗುವನ್ನು ತಮ್ಮ ಸುಪರ್ದಿಗೆ ಪಡೆದರು.

ಮಗು ಬಳಿ ವಾಣಿವಿಲಾಸ ಅಸ್ಪತ್ರೆ ಡಿಸ್ಚಾರ್ಜ್ ಸಮ್ಮರಿ ಪತ್ತೆಯಾಗಿದೆ. ತಾಯಿ ಸುಪ್ರಿತಾ, ಆನೇಕಲ್ ಜಿಗಣಿಯ ಬೆಸ್ತರ ಬೀದಿಯವರು ಎಂಬುವುದು ತಿಳಿದುಬಂದಿದೆ.

ನೆಲಮಂಗಲ ಗ್ರಾಮಾಂತರ ಪೊಲೀಸರು ಪೋಷಕರನ್ನು ಪತ್ತೆ ಹಚ್ಚುತ್ತಿದ್ದಾರೆ.

ಇನ್ನು ಹಸುಗೂಸಿಗೆ ಅಸ್ಸಾಂ ಮೂಲದ ಬಾಣಾಂತಿ ಅನುರಾ ಬೇಗಂ ಎದೆಹಾಲು ಉಣಿಸಿದ್ದಾರೆ. ಅನುರಾ ಬೇಗಂ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.