ಮನೆ ರಾಷ್ಟ್ರೀಯ ಮಿಜೋರಾಂನ ಮುಖ್ಯಮಂತ್ರಿಯಾಗಿ ಲಾಲ್ದುಹೋಮ ಪ್ರಮಾಣ ವಚನ ಸ್ವೀಕಾರ

ಮಿಜೋರಾಂನ ಮುಖ್ಯಮಂತ್ರಿಯಾಗಿ ಲಾಲ್ದುಹೋಮ ಪ್ರಮಾಣ ವಚನ ಸ್ವೀಕಾರ

0

ಮಿಜೋರಾಂನ ಮುಖ್ಯಮಂತ್ರಿಯಾಗಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ನಾಯಕ ಲಾಲ್ದುಹೋಮ ಅವರು ಇಂದು(ಡಿ.8) ಪ್ರಮಾಣವಚನ ಸ್ವೀಕರಿಸಿದರು.

ಮಿಜೋರಾಂ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರು ರಾಜಭವನ ಸಂಕೀರ್ಣದಲ್ಲಿ ಲಾಲ್ದುಹೋಮ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಮಿಜೋರಾಂನ ಐಜ್ವಾಲ್‌ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.

ಮಿಜೋರಾಂನಲ್ಲಿ ನವೆಂಬರ್​​ ತಿಂಗಳನಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿ. ಇತ್ತೀಚೆಗಷ್ಟೇ ಫಲಿತಾಂಶವನ್ನು ಘೋಷಣೆ ಮಾಡಲಾಯಿತು. ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಪಕ್ಷ 40 ವಿಧಾನಸಭಾ ಕ್ಷೇತ್ರಗಳ ಪೈಕಿ 27 ಕ್ಷೇತ್ರದಲ್ಲಿ ಗೆದ್ದಿದೆ. ಲಾಲ್ದುಹೋಮ ಅವರು ಸೆರ್ಚಿಪ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಅವರು ಒಟ್ಟು 8314 ಮತಗಳನ್ನು ಪಡೆದಿದ್ದಾರೆ. ಮಿಜೋ ನ್ಯಾಷನಲ್ ಫ್ರಂಟ್‌ ನ ನಾಯಕ ಜೆ. ಮಲ್ಸಾವ್ಮ್ಜುವಾಲಾ ವಾಂಚಾಂಗ್‌ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.