ಮನೆ ಕ್ರೀಡೆ ಇಂದು ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಟಿ 20 ಪಂದ್ಯ

ಇಂದು ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಟಿ 20 ಪಂದ್ಯ

0

ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ಸರಣಿ – ಆರಂಭಿಕ ಪಂದ್ಯ ಮಳೆಗೆ ವಾಶ್ ಔಟ್  ನಂತರ ವಿಶ್ವಕಪ್ ಗೂ ಮುನ್ನ ಭಾರತಕ್ಕೆ ತಯಾರಿಗೆ ಕೇವಲ 5 ಅಂತಾರಾಷ್ಟ್ರೀಯ ಪಂದ್ಯಗಳು ಉಳಿದಿವೆ.

ಎರಡನೇ ಟಿ20 ಪಂದ್ಯಕ್ಕೂ ಮಳೆಯ ಆತಂಕ ಇದ್ದು, ಪಂದ್ಯ ನಡೆಯುವ ಸಾದ್ಯತೆ ಲೆಕ್ಕಹಾಕಲಾಗುತ್ತಿದೆ. ಹೀಗಾಗಿ, ಉಭಯ ತಂಡಗಳಿಗೆ ಸರಣಿ ಗೆಲುವಿನ ಒತ್ತಡ ಹೆಚ್ಚಾಗಿದೆ.

ಇಂದಿನ ಪಂದ್ಯ ದಕ್ಷಿಣ ಆಫ್ರಿಕಾದ ಗೆಬರ್ಹದಲ್ಲಿರುವ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ರಾತ್ರಿ 8:30ಕ್ಕೆ ಈ ಪಂದ್ಯ ನಡೆಯಲಿದೆ. ಇಂದಿನ ಪಂದ್ಯವನ್ನು ಪ್ರೇಕ್ಷಕರು  ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಹಾಗೂ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ನಲ್ಲಿ ನೋಡಬಹುದು.

ಭಾರತ ತಂಡ : ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಜಿತೇಶ್ ಶರ್ಮಾ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.

ದಕ್ಷಿಣ ಆಫ್ರಿಕಾ ತಂಡ : ಏಡೆನ್ ಮಾರ್ಕ್ರಾಮ್ (ನಾಯಕ), ಓಟ್ನಿಯೆಲ್ ಬಾರ್ಟ್ಮನ್, ಮ್ಯಾಥ್ಯೂ ಬ್ರೀಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಡೊನೊವನ್ ಫೆರೇರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್.