ಮನೆ ಸುದ್ದಿ ಜಾಲ ಒಂದೇ ಪಂದ್ಯದಲ್ಲಿ ಡಬಲ್ ದಾಖಲೆ ಬರೆದ ಕಿಂಗ್‌ ಕೊಹ್ಲಿ

ಒಂದೇ ಪಂದ್ಯದಲ್ಲಿ ಡಬಲ್ ದಾಖಲೆ ಬರೆದ ಕಿಂಗ್‌ ಕೊಹ್ಲಿ

0

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಎರಡು ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 800 ಬೌಂಡರಿ ಹೊಡೆದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಸದ್ಯ ಕೊಹ್ಲಿ 807 ಫೋರ್‌ ಹೊಡೆದು ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಶಿಖರ್ ಧವನ್ (768) ಇದ್ದಾರೆ. ನಂತರ ಸ್ಥಾನದಲ್ಲಿ ಡೇವಿಡ್ ವಾರ್ನರ್ (663), ರೋಹಿತ್ ಶರ್ಮಾ(653) ಇದ್ದಾರೆ.

ಈ ಪಂದ್ಯದಲ್ಲಿ ಕೊಹ್ಲಿ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಸಿಡಿಸಿದ ಮೂರನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಮೊದಲ ಸಿಕ್ಸ್‌ ಸಿಡಿಸುವ ಮೂಲಕ ಈ ಸಾಧನೆ ಮಾಡಿದರು. ಕ್ರಿಸ್‌ಗೇಲ್‌ 142 ಪಂದ್ಯವಾಡಿ 357 ಸಿಕ್ಸ್‌ ಹೊಡೆದಿದಿದ್ದರೆ ರೋಹಿತ್‌ ಶರ್ಮಾ 276 ಪಂದ್ಯವಾಡಿ 310 ಸಿಕ್ಸ್‌ ಸಿಡಿಸಿದ್ದಾರೆ. ಈ ಮೂಲಕ ಒಂದೇ ತಂಡದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಕೀರ್ತಿಗೂ ಕೊಹ್ಲಿ ಪಾತ್ರರಾದರು. 

ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 44 ಎಸೆತಗಳಲ್ಲಿ 81 ರನ್‌(8 ಬೌಂಡರಿ, 4 ಸಿಕ್ಸ್‌) ಹೊಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 2026 ಆವೃತ್ತಿಯಲ್ಲಿ ಕೊಹ್ಲಿ 7 ಪಂದ್ಯವಾಡಿ 328 ರನ್‌ ಹೊಡೆಯುವ ಮೂಲಕ ಆರೇಂಜ್‌ ಕ್ಯಾಪ್‌ ಪಡೆದಿದ್ದಾರೆ. ಈ ಬಾರಿ 3 ಬಾರಿ ಅರ್ಧಶತಕ ಸಿಡಿಸಿದ್ದಾರೆ. 2008 ರಿಂದ ನಿನ್ನೆಯ ಪಂದ್ಯ ಸೇರಿದಂತೆ ಕೊಹ್ಲಿ ಐಪಿಎಲ್‌ನಲ್ಲಿ ಒಟ್ಟು 274 ಪಂದ್ಯವಾಡಿ ಒಟ್ಟು 8,989 ರನ್‌ ಹೊಡೆದಿದ್ದಾರೆ. 8 ಶತಕ, 6 ಅರ್ಧಶತಕ ಹೊಡೆದಿರುವ ಕೊಹ್ಲಿ 807 ಬೌಂಡರಿ 303 ಸಿಕ್ಸ್‌ ಸಿಡಿಸಿದ್ದಾರೆ.